ವರ್ಷಾಂತ್ಯಕ್ಕೆ ಮದಗಜ ತೆರೆಗೆ ಬರೋದು ಪಕ್ಕಾ
ಕೊರೊನಾ ಲಾಕ್‌ಡೌನ್‌ನಿಂದಾಗಿ ಮುಚ್ಚಿದ್ದ ಚಿತ್ರಮಂದಿರಗಳು ಇದೀಗ ಬಾಗಿಲು ತೆರೆದು ಸಿನಿಮಾಗಳನ್ನು ಸಿನಿ ಪ್ರೇಕ್ಷಕರನ್ನು ತನ್ನತ್ತ ಕೈ ಬೀಸಿ ಕರೆಯುತ್ತಿದೆ. ಹಾಗಾಗಿ ಸ್ಯಾಂಡಲ್‌ವುಡ್‌ನಲ್ಲಿ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗುತ್ತಿವೆ. ಕೋಟಿಗೊಬ್ಬ ಮತ್ತು ಸಲಗ ಚಿತ್ರಗಳು ರಿಲೀಸ್ ಆಗಿ, ಸಿನಿಮಾ ಮಂದಿಯಲ್ಲಿ ಭರವಸೆಯ ಬೆಳಕು ಮೂಡಿಸಿದೆ. ಈಗ ಭಜರಂಗಿ 2 ಕೂಡ ಭರವಸೆಯೊಂದಿಗೆ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದೆ. ಈ ಸಿಹಿ ಸಮಾಚಾರದ ನಡುವೆ ಕನ್ನಡದ ಮದಗಜ ಕೂಡ ಮೈಕೊಡವಿ ನಿಂತಿದ್ದಾನೆ. ನಟ ಶ್ರೀಮುರಳಿ ಅಭಿನಯದ ಮದಗಜ ಸಿನಿಮಾ ಕುಡ ರಿಲೀಸ್‌ಗೆ ರೆಡಿಯಾಗಿದೆ. ಈ ವರ್ಷ ಮುಗಿಯುವುದರ ಒಳದೆ ಮದಗಜ ಕೂಡ ತೆರೆಗೆ ಅಪ್ಪಳಿಸಲಿದ್ದಾನೆ. ಈಗ ಮದಗಜ ರಿಲೀಸ್ ಆಗೋರು ಖಚಿತವಾಗಿದೆ. ಡಿಸೆಂಬರ್ ಮೂರನೇ ತಾರೀಕಿನಂದು ದೇಶಾದ್ಯಂತ ಮದಗಜನ ಅಬ್ಬರ ಶುರುವಾಗಲಿದೆ. ಈ ವಿಚಾರವನ್ನು ಚಿತ್ರದ ನಿರ್ದೇಶಕ ಮಹೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ರಿಲೀಸ್‌ಗೆ ರೆಡಿ ಇರುವುದರಿಂದ ಮದಗಜ ಸಿನಿಮಾ ಈ ವರ್ಷ ತೆರೆಗೆ ಬರುವುದು ಬಹುತೇಕ ಅನುಮಾನ ಎನ್ನಲಾಗಿತ್ತು. ಆದ್ರೆ ಸಿನಿಮಾ ಕೆಲಸಗಳು ಸಂಪೂರ್ಣವಾಗಿ ಮುಗಿದಿರುವ ಕಾರಣಕ್ಕೆ ಮದಗಜ ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ. ಡಿಸೆಂಬರ್ 3ಕ್ಕೆ ಚಿತ್ರ ರಿಲೀಸ್ ಮಾಡುವ ನಿರ್ಧಾರ ಕೈಗೊಂಡಿದೆ ಚಿತ್ರ ತಂಡ. ಅದಾಗಲೇ ಚಿತ್ರ ತಂಡ ಥಿಯೇಟರ್ ಸೆಟ್ ಮಾಡಲು ಆರಂಭಿಸಿದೆ. ಭಾರತದಾದ್ಯಂತ ಮದಗಜ ಮೂರು ಭಾಷೆಗಳಲ್ಲಿ 1500ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ.

ಕನ್ನಡ-ತಮಿಳು-ತೆಲುಗಿನಲ್ಲಿ ಮದಗಜ ರಿಲೀಸ್!
ಕನ್ನಡದ ಮದಜಗ ಸಿನಿಮಾ ತಮಿಳು ಮತ್ತು ತೆಲುಗಿನಲ್ಲೂ ಏಕಕಾಲಕ್ಕೆ ರಿಲೀಸ್ ಆಗಲಿದೆ. ಮೂರು ಭಾಷೆಗಳಲ್ಲೂ ಒಮ್ಮಲೆ ಸಿನಿಮಾ ರಿಲೀಸ್ ಮಾಡಲಾಗುತ್ತದೆ. ಸದ್ಯ ಕನ್ನಡದಲ್ಲಿ ರಿಲೀಸ್ ಆಗಿರೋ ಟೀಸರ್, ಟ್ರೇಲರ್ ಮತ್ತು ಹಾಡುಗಳು ನಿರೀಕ್ಷೆ ಹುಟ್ಟು ಹಾಕಿವೆ. ಈಗ ಮದಗಜ ಚಿತ್ರದ ಟೀಸರ್ ತಮಿಳು ಮತ್ತು ತೆಲುಗಿನಲ್ಲೂ ರಿಲೀಸ್ ಆಗುತ್ತಿದೆ. ಈ ಚಿತ್ರ ಬಹುಕೋಟಿ ವೆಚ್ಚದಲ್ಲಿ ತಯಾರಾಗಿದ್ದು, ನಿರ್ಮಾಪಕ ಉಮಾಪತಿ ಬಂಡವಾಳ ಹೂಡಿದ್ದಾರೆ. ಚಿತ್ರದ ಮೇಕಿಂಗ್ ಅದ್ಬುತ ಅನ್ನೋದನ್ನ ಈಗಾಗಲೇ ರಿಲೀಸ್ ಆಗಿರೋ ಚಿತ್ರದ ತುಣುಕುಗಳು ಸಾಭೀತು ಮಾಡಿವೆ. ಅದರಲ್ಲೂ ಟೀಸರ್ ನಲ್ಲಿ ಇರುವಂತಹ ಡೈಲಾಗ್‌ಗಳು ವಿಶೇಷವಾಗಿ ಗಮನ ಸೆಳೆದಿವೆ. ಶ್ರೀಮುರಳಿ ಖಡಕ್ ಧ್ವಯಲ್ಲಿ ಕೇಳುವ ಸಂಭಾಷಣೆ ಪಾತ್ರದ ಮೇಲೆ ಭರವಸೆ ಮೂಡಿಸುತ್ತದೆ. ನಟ ಶ್ರೀಮುರುಳಿ ಕೂಡ ವಿಭಿನ್ನ ಪಕ್ಕಾ ಮಾಸ್ ಅಂಡ್ ಕ್ಲಾಸ್ ಲುಕ್‌ನಲ್ಲಿ ಕಾಣಿಸಕೊಂಡಿದ್ದಾರೆ. ರಗಡ್ ರೋರಿಂಗ್ ಸ್ಟಾರ್‌ಗೆ ನಟಿ ಆಶಿಕಾ ರಂಗನಾಥ್ ಜೊತೆಯಾಗಿದ್ದಾರೆ.
ಆಶಿಕಾ ರಂಗನಾಥ್ ಪಕ್ಕ ಹಳ್ಳಿ ಹುಡುಗಿಯ ಲುಕ್‌ನಲ್ಲಿ ಕಿಕ್ ಕೊಡ್ತಾರೆ. ನಿರ್ದೇಶಕ ಮಹೇಶ್ ಕುಮಾರ್ ಮದಗಜ ಸಿನಿಮಾದ ಮೂಲಕ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ. ಈ ಹಿಂದಿ ಅಯೋಗ್ಯ ಸಿನಿಮಾ ಮಾಡಿ ಗೆದ್ದ ಮಹೇಶ್, ಈ ಚಿತ್ರದ ಮೂಲಕ ತಮಿಳು,ತೆಲುಗಿಗೂ ಎಂಟ್ರಿ ಕೊಡ್ತಿದ್ದಾರೆ. ಚಿತ್ರದ ಪಾತ್ರಗಳಿಗೆ ಜಗಪತಿ ಬಾಬು, ದೇವಯಾನಿಯಂತಹ ಕಲಾವಿದರು ಜೀವ ತುಂಬಿದ್ದಾರೆ.

ಒಟ್ಟಾರೆ ಭಜರಂಗಿ2 ಬಳಿಕ ಪ್ರೇಮಂ ಪೂಜ್ಯಂ, ಮುಗಿಲ್‌ಪೇಟೆ ಸಿನಿಮಾಗಳು ಥಿಯೇಟರ್‌ಗೆ ಲಗ್ಗೆ ಇಡುತ್ತಿವೆ. ಆದ್ರೆ ಡಿಸೆಂಬರ್‌ನಲ್ಲಿ ಕನ್ನಡದ ಯಾವ ಸಿನಿಮಾ ಇಲ್ಲವ ಅನ್ನೋ ಪ್ರಶ್ನೆಗೆ ಮದಗಜ ಉತ್ತರವಾಗಿದ್ದಾನೆ. ಡಿಸೆಂಬರ್ 3ರಂದು ಮದಗಜ ಸಿನಿಪ್ರಿಯರ ಮನಕ್ಕೆ ಎಂಟ್ರಿ ಕೊಡಲಿದ್ದಾನೆ.


Click it and Unblock the Notifications











