»   » ಕ್ರಿಕೆಟ್ ಮುಗಿಯುವವರೆಗೆ ಬರಲ್ವಂತೆ 'ಮಳೆ ನಿಲ್ಲುವವರೆಗೆ'

ಕ್ರಿಕೆಟ್ ಮುಗಿಯುವವರೆಗೆ ಬರಲ್ವಂತೆ 'ಮಳೆ ನಿಲ್ಲುವವರೆಗೆ'

Posted By:
Subscribe to Filmibeat Kannada

ಐಸಿಸಿ ಕ್ರಿಕೆಟ್ ವರ್ಲ್ಡ್ ಕಪ್ ಸೆಮಿಫೈನಲ್ ಹಂತಕ್ಕೆ ಭಾರತ ತಲುಪಿದೆ. ಆಸ್ಟ್ರೇಲಿಯಾ ವಿರುದ್ಧ ಇದೇ ಗುರುವಾರ ನಮ್ಮ ಟೀಮ್ ಇಂಡಿಯಾ ಸೆಣಸಾಡಲಿದೆ. ಆಸೀಸ್ ರನ್ನ ಬಗ್ಗು ಬಡಿದು ಭಾರತ ಈ ಬಾರಿ ವರ್ಲ್ಡ್ ಕಪ್ ಎತ್ತಿ ಹಿಡಿಯಬೇಕು ಅನ್ನೋದು ಭಾರತೀಯರ ಆಸೆ.

ಹೀಗಾಗಿ ಇದೀಗ ಎಲ್ಲರ ಕಣ್ಣು ಆಸ್ಟ್ರೇಲಿಯಾ V/S ಇಂಡಿಯಾ ಮ್ಯಾಚ್ ಮೇಲಿದೆ. ಇದನ್ನ ಮನಗಂಡಿರುವ ನಮ್ಮ ಸ್ಯಾಂಡಲ್ ವುಡ್ ಮಂದಿ ಹುಷಾರಾಗ್ಬಿಟ್ಟಿದ್ದಾರೆ. ಅದಕ್ಕೆ ಈ ಶುಕ್ರವಾರ ಹೇಳಿಕೊಳ್ಳುವಂತಹ ಯಾವ ಚಿತ್ರವೂ ತೆರೆಗೆ ಬರುತ್ತಿಲ್ಲ.

Kannada Movie Male Nilluvavarege

ಜನ ಕ್ರಿಕೆಟ್ ಮೇಲೆ ಆಸಕ್ತಿ ಕಳ್ಕೊಂಡಿದ್ದಾರೆ ಅಂತ ಈ ಹಿಂದೆ ಹೇಳುತ್ತಿದ್ದ ನಿರ್ಮಾಪಕ-ನಿರ್ದೇಶಕರುಗಳು ಕಲೆಕ್ಷನ್ ವಿಚಾರದಲ್ಲಿ ಎಡವಿದ್ದಾರೆ. ಇದೇ ಕಾರಣಕ್ಕೆ ಈಗ ನಿರ್ಮಾಪಕ ಕಮ್ ನಿರ್ದೇಶಕ, ನಟ ಮೋಹನ್ ಕೂಡ ಜಾಗರೂಕರಾಗಿದ್ದಾರೆ.

ನಟ ಮೋಹನ್ ನಿರ್ಮಿಸಿ, ನಿರ್ದೇಶಿಸಿರುವ 'ಮಳೆ ನಿಲ್ಲುವವರೆಗೆ' ಈ ಶುಕ್ರವಾರ ಅಂದ್ರೆ ಮಾರ್ಚ್ 27 ರಂದು ರಿಲೀಸ್ ಆಗ್ಬೇಕಿತ್ತು. ಆದ್ರೆ, ಒಂದ್ಕಡೆ ಥಿಯೇಟರ್ ಸಮಸ್ಯೆ, ಇನ್ನೊಂದ್ಕಡೆ ವರ್ಲ್ಡ್ ಕಪ್ ಫೀವರ್ ಇರುವುದರಿಂದ ಮುಂದಿನ ತಿಂಗಳು ಚಿತ್ರವನ್ನ ರಿಲೀಸ್ ಮಾಡುವುದಕ್ಕೆ ಮೋಹನ್ ನಿರ್ಧರಿಸಿದ್ದಾರೆ.

Kannada Movie Male Nilluvavarege

''ಮಾರ್ಚ್ 27 ರಂದು ನಮ್ಮ ಸಿನಿಮಾ ರಿಲೀಸ್ ಮಾಡ್ಬೇಕು ಅಂದುಕೊಂಡಿದ್ವಿ. ಆದ್ರೀಗ ಏಪ್ರಿಲ್ ನಲ್ಲಿ ಬರ್ತಿದ್ದೀವಿ. ತುಂಬಾ ಸಿನಿಮಾಗಳು ಕ್ಯೂ ನಲ್ಲಿವೆ. ಜೊತೆಗೆ ವರ್ಲ್ಡ್ ಕಪ್ ಫೈನಲ್ ಬೇರೆ''

''ಇಂಡಿಯಾ, ಆಸ್ಟ್ರೇಲಿಯಾವನ್ನ ಬೀಟ್ ಮಾಡುತ್ತೆ ಅಂತ ಪ್ರೆಡಿಕ್ಷನ್ ಕೂಡ ಇದೆ. ಇಂಡಿಯಾ ಫೈನಲ್ ಗೆ ಬಂದ್ರೆ, ದೇವ್ರಾಣೆ ರಜನಿಕಾಂತ್ ಸಿನಿಮಾ ಬಂದ್ರೂ ಜನ ನೋಡಲ್ಲ. ಕಷ್ಟಪಟ್ಟು ಸಿನಿಮಾ ಮಾಡಿ ಕಲೆಕ್ಷನ್ ಆಗ್ಲಿಲ್ಲ ಅಂದ್ರೆ ಹೇಗೆ. ಬಿಜಿನೆಸ್ ಆಗೋದೇ ವೀಕೆಂಡ್ ನಲ್ಲಿ. ಅದಕ್ಕೆ ಮುಂದಕ್ಕೆ ಹೋಗಿದ್ದೀವಿ'' ಅಂತ 'ಫಿಲ್ಮಿಬೀಟ್ ಕನ್ನಡ'ಗೆ ನಿರ್ದೇಶಕ ಮತ್ತು ನಿರ್ಮಾಪಕ ಮೋಹನ್ ತಿಳಿಸಿದ್ದಾರೆ. [ಮಳೆ ನಿಲ್ಲುವವರೆಗೆ ಚಿತ್ರಗಳು]

Kannada Movie Male Nilluvavarege

'ಮಳೆ ನಿಲ್ಲುವವರೆಗೆ' ಥ್ರಿಲ್ಲರ್ ಕಮ್ ಹಾರರ್ ಚಿತ್ರವಾಗಿರುವುದರಿಂದ ಈಗಾಗಲೇ ಗಾಂಧಿನಗರದಲ್ಲಿ ನಡುಕ ಶುರುವಾಗಿದೆ. ಬೇಸಿಗೆ ರಜಾದಲ್ಲಿ ರಿಲೀಸ್ ಆಗುತ್ತಿರುವ ಈ ಚಿತ್ರವನ್ನ ನೋಡಿ ಬೆಚ್ಚಿ ಬೀಳುವುದಕ್ಕೆ ನೀವು ರೆಡಿಯಾಗಿ. (ಫಿಲ್ಮಿಬೀಟ್ ಕನ್ನಡ)

English summary
Kannada Actor Mohan directorial 'Male Nilluvavarege' was supposed to hit the screens this friday (March 27th). But Since, India has entered Semi-Finals in ICC world Cup, Director cum Producer Mohan has decided to postpone the release date.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada