twitter
    For Quick Alerts
    ALLOW NOTIFICATIONS  
    For Daily Alerts

    ಡಬಲ್ ಖುಷಿ ಹಂಚಿಕೊಂಡ ಅಪರೂಪದ ಕಥೆಯುಳ್ಳ ಕನ್ನಡದ ಚಿತ್ರ 'ಮನರೂಪ'

    |

    ಕಿರಣ್ ಹೆಗಡೆ ನಿರ್ದೇಶನದ 'ಮನರೂಪ' ಸಿನಿಮಾ ತಂಡ ಎರಡು ಖುಷಿಗಳನ್ನು ಹಂಚಿಕೊಂಡಿದೆ. 2019ರ ನವೆಂಬರ್‌ನಲ್ಲಿ ಬಿಡುಗಡೆಯಾದ, ವಿಶೇಷ ಕಥಾಹಂದರದ ಈ ಪ್ರಯೋಗಾತ್ಮಕ ಚಿತ್ರಕ್ಕೆ ಪ್ರೇಕ್ಷಕರು ಸ್ವೀಕರಿಸಿರಲಿಲ್ಲ. ಆದರೆ ಈ ಸಿನಿಮಾ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

    ಹೊಸ ತಲೆಮಾರಿನ ಒಂದು ವರ್ಗದ ಯುವಕರ ವಿಭಿನ್ನ ಆಸಕ್ತಿಯನ್ನು ವಿವರಿಸುವ ಡಾರ್ಕ್ ಪರಿಕಲ್ಪನೆ ಹೊಂದಿರು ಈ ಸೈಕಾಲಾಜಿಕಲ್ ಸಿನಿಮಾ ಮುಂಬೈನಲ್ಲಿ ನಡೆದ ಕೆಫೆ ಇರಾನಿ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಉತ್ತಮ ಪ್ರಯೋಗಾತ್ಮಕ ಚಿತ್ರ ವಿಭಾಗದಲ್ಲಿ ಪ್ರಶಸ್ತಿ ಪಡೆದಿದೆ.

    ಜತೆಗೆ, ಅಮೆರಿಕದ ಮಿಯಾಮಿ ಚಿತ್ರೋತ್ಸವ ಹಾಗೂ ಟರ್ಕಿಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೂ 'ಮನರೂಪ' ಆಯ್ಕೆಯಾಗಿದೆ. ದಿಲೀಪ್ ಕುಮಾರ್, ಅನುಷಾ ರಾವ್, ನಿಷಾ ಯಶ್ ರಾಮ್, ಆರ್ಯನ್, ಶಿವಪ್ರಸಾದ್ ಮುಂತಾದವರು ಸಿನಿಮಾದಲ್ಲಿ ನಟಿಸಿದ್ದಾರೆ.

     Kannada Movie Manaroopa Got Best Experimental Film Award At Cafe Irani Festival

    ಈ ಸಿನಿಮಾ ನೋಡದೆ ಮಿಸ್ ಮಾಡಿಕೊಂಡಿದ್ದೇವಲ್ಲ ಎಂದು ಬೇಸರಪಟ್ಟುಕೊಳ್ಳುವವರಿಗೂ ಸಂತಸದ ಸುದ್ದಿ ಸಿಕ್ಕಿದೆ. ಅದೇನೆಂದರೆ ವಿಮರ್ಶಕರ ಪ್ರಶಂಸೆ ಪಡೆದಿರುವ 'ಮನರೂಪ' ಸಿನಿಮಾ ಅಮೆಜಾನ್ ಪ್ರೈಮ್‌ನಲ್ಲಿ ಈಗ ಲಭ್ಯವಿದೆ. ಒಟಿಟಿಯಲ್ಲಿ ಸಿನಿಮಾ ನೋಡಿದವರು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ.

    English summary
    Kannada movie Manaroopa directed by Kiran Hegde got the Best Experimental Film award at Cafe Irani Chaii international film festival in Mumbai.
    Tuesday, March 24, 2020, 17:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X