»   » ಕನ್ನಡದಲ್ಲಿ ಮ್ಯಾಜಿಕ್ ಮಾಡಲು 'ಮಂತ್ರಂ' ರೆಡಿ

ಕನ್ನಡದಲ್ಲಿ ಮ್ಯಾಜಿಕ್ ಮಾಡಲು 'ಮಂತ್ರಂ' ರೆಡಿ

Posted By:
Subscribe to Filmibeat Kannada

ವಿಭಿನ್ನ ಟೈಟಲ್, ಆಕರ್ಷಕ ಪೋಸ್ಟರ್ ಗಳ ಮೂಲಕ ಕುತೂಹಲ ಹುಟ್ಟುಹಾಕಿರುವ ಕನ್ನಡದ ಹೊಸ ಹಾರರ್ ಚಿತ್ರ 'ಮಂತ್ರಂ'. ಈಗಾಗಲೇ ಟೀಸರ್ ಮೂಲಕ ಸೌಂಡ್ ಮಾಡ್ತಿರುವ 'ಮಂತ್ರಂ' ಈಗ ಬಿಡುಗಡೆಗೆ ಸಿದ್ದವಾಗಿದೆ.

ಶಮಂತ್ ಶೆರ್ರಿ ನಾಯಕನಾಗಿದ್ದು, ಪಲ್ಲವಿ ರಾಜು ನಾಯಕಿ ಆಗಿ ಅಭಿನಯಿಸಿದ್ದಾರೆ. ಇವರ ಜೊತೆ ಗೌರೀಶ್ ಅಕ್ಕಿ, ರಾಕ್ ಲೈನ್ ಸುಧಾಕರ್ ಸೇರಿದಂತೆ ಹಲವು ಹೊಸ ಪ್ರತಿಭೆಗಳು ಬಣ್ಣ ಹಚ್ಚಿದ್ದಾರೆ.

Kannada Movie Mantram is Ready For Release

'ಮಂತ್ರಂ' ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿರುವುದು ಯುವ ನಿರ್ದೇಶಕ ಎಸ್.ಎಸ್ ಸಜ್ಜನ್. ಬೆಂಗಳೂರಿನಲ್ಲಿ ನೆಲಸಿರುವ ರಾಜಸ್ತಾನ ಮೂಲದ ಅಮರ್ ಚೌಧರಿ ಅವರು ಈ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ.

Kannada Movie Mantram is Ready For Release

ಇನ್ನು ರಷೀದ್ ಖಾನ್ ಚಿತ್ರಕ್ಕೆ ಸಂಗೀತ ನೀಡಿದ್ದು, 'ಉಗ್ರಂ' ಖ್ಯಾತಿಯ ರವಿಬಸ್ರೂರು ಈ ಚಿತ್ರಕ್ಕೆ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ರಾಜ ಸಂಗಪ್ಪ ಅವರ ಛಾಯಗ್ರಹಣವಿದೆ. 'ಮೈನಾ', 'ಸಂಜು ವೆಡ್ಸ್ ಗೀತಾ', 'ಕಲ್ಪನಾ', 'ಮಾಸ್ತಿಗುಡಿ' ಚಿತ್ರಗಳಿಗೆ ಸಂಕಲನಕಾರರಾಗಿದ್ದ ಜೋ.ನಿ. ಹರ್ಷ ಈ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ.

Kannada Movie Mantram is Ready For Release

ಫಸ್ಟ್ ಲುಕ್ ನಿಂದ ಹಿಡಿದು ಇಲ್ಲಿಯವರೆಗೂ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ, ನಿರೀಕ್ಷೆ ಕಾಪಾಡಿಕೊಂಡು ಬಂದಿರುವ 'ಮಂತ್ರಂ' ಆದಷ್ಟೂ ಬೇಗ ತೆರೆಕಾಣಲಿದೆ.

English summary
Debutante director SS Sajjan's 'Mantram' all set to spell the magic in Sandalwood.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada