»   » ಜೀವಜಲದ ಮಹತ್ವ ಸಾರುವ 'ಮಾರ್ಚ್ 22' ಸಿನಿಮಾ ಆಗಸ್ಟ್ 25ರಂದು ಬಿಡುಗಡೆ

ಜೀವಜಲದ ಮಹತ್ವ ಸಾರುವ 'ಮಾರ್ಚ್ 22' ಸಿನಿಮಾ ಆಗಸ್ಟ್ 25ರಂದು ಬಿಡುಗಡೆ

Posted By:
Subscribe to Filmibeat Kannada

ಮಂಗಳೂರು: ACME ಮೂವೀಸ್ ಇಂಟರ್ ನ್ಯಾಷನಲ್ ಸಂಸ್ಥೆಯ ಬ್ಯಾನರ್ ನಡಿಯಲ್ಲಿ ಮಂಗಳೂರು ಮೂಲದ ದುಬೈ ಉದ್ಯಮಿ ಹರೀಶ್ ಶೇರಿಗಾರ್ ಹಾಗೂ ಅವರ ಪತ್ನಿ ಶರ್ಮಿಳಾ ಶೇರಿಗಾರ್ ನಿರ್ಮಿಸಿರುವ, ಹಿರಿಯ ನಿರ್ದೇಶಕ ಕೋಡ್ಲು ರಾಮಕೃಷ್ಣ ನಿರ್ದೇಶನದ ಬಹು ನಿರೀಕ್ಷಿತ 'ಮಾರ್ಚ್ 22' ಸಿನಿಮಾ ಅಗಸ್ಟ್ 25ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.

ಕುಟುಂಬ ಸಮೇತರಾಗಿ ನೋಡಬಹುದಾದ ಸದಭಿರುಚಿಯ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಚಿತ್ರಕ್ಕೆ ಈಗಾಗಲೇ ಸೆನ್ಸಾರ್ ಮಂಡಳಿಯು "ಯು" ಪ್ರಮಾಣ ಪತ್ರ ನೀಡಿದೆ.

Kannada Movie 'March 22' to release on August 25th

ಜೀವಜಲದ ಮಹತ್ವ ಸಾರುವ 'ಮಾರ್ಚ್-22' ಸಿನಿಮಾದ ಬಗ್ಗೆ ಕನ್ನಡ ಸಿನಿಪ್ರಿಯರಲ್ಲಿ ಬಹುನಿರೀಕ್ಷೆ ಇದೆ. ದುಬೈನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಉದ್ಯಮಿ ಹಾಗೂ ಕನ್ನಡಿಗ ಪದ್ಮಶ್ರೀ ಡಾ.ಬಿ.ಆರ್ ಶೆಟ್ಟಿ ಚಿತ್ರದ ಹಾಡೊಂದರಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಈ ಹಾಡು ಈಗಾಗಲೇ ಬಹಳ ಪ್ರಸಿದ್ಧಿಯನ್ನು ಪಡೆದಿದೆ. ಜೊತೆಗೆ ನಿರ್ಮಾಪಕ ಹರೀಶ್ ಶೇರಿಗಾರ್ ಹಾಗೂ ಅಕ್ಷತಾ ರಾವ್ ಹಾಡಿರುವ "ಪ್ರೀತಿಗೊಂದು ಸಲಾಂ ಅಂತ ಮನ್ಸು ಅಂತೈತೆ..." ಸುಮಧುರ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸೆಪ್ಟಂಬರ್ ತಿಂಗಳಲ್ಲಿ ಮುಂಬೈ ಹಾಗೂ ಗಲ್ಫ್ ರಾಷ್ಟ್ರಗಳಲ್ಲಿ ಚಿತ್ರ ಬಿಡುಗಡೆ ಮಾಡುವ ಪ್ಲಾನ್ ಕೂಡ ನಿರ್ಮಾಪಕರಲ್ಲಿದೆ.

ಆರ್ಯವರ್ಧನ್ ಮತ್ತು ಕಿರಣ್ ರಾಜ್ ನಾಯಕರಾಗಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ಮೇಘಶ್ರೀ ಮತ್ತು ದೀಪ್ತಿ ಶೆಟ್ಟಿ ನಾಯಕಿಯರು. ಉಳಿದಂತೆ ನಟ ಅನಂತ್ ನಾಗ್, ವಿನಯಾ ಪ್ರಸಾದ್, ಗೀತಾ, ಶರತ್ ಲೋಹಿತಾಶ್ವ, ಅಶೀಷ್ ವಿದ್ಯಾರ್ಥಿ, ಸಾಧು ಕೋಕಿಲಾ, ಜೈಜಗದೀಶ್ ತಾರಾಗಣದಲ್ಲಿದ್ದಾರೆ.

English summary
Kannada Movie 'March 22' to release on August 25th

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada