twitter
    For Quick Alerts
    ALLOW NOTIFICATIONS  
    For Daily Alerts

    ಸರಣಿ ಕೊಲೆಗಳ ಸುತ್ತ ಹೊಸಬರ ಚಿತ್ರ 'ಮರೀಚಿಕೆ'

    By Rajendra
    |

    ಕನ್ನಡ ಚಿತ್ರರಂಗದಲ್ಲಿ ಹೊಸಬರ ಚಿತ್ರಗಳು ತಾಂತ್ರಿಕತೆ ಹಾಗೂ ವಿಭಿನ್ನ ಶೈಲಿಯ ನಿರೂಪಣೆಯಿಂದಲೇ ಗೆಲುವು ಸಾಧಿಸಿವೆ. ಇದಕ್ಕೆ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ. ದೊಡ್ಡ ಸ್ಟಾರ್ ಇಲ್ಲದಿದ್ದರೂ ಆ ಸಿನಿಮಾಗಳು ಪ್ರೇಕ್ಷಕರನ್ನು ಆಕರ್ಷಿಸುವ ಈ ನಿಟ್ಟಿನಲ್ಲಿ ಬರುತ್ತಿರುವ ಮತ್ತೊಂದು ಚಿತ್ರವೇ 'ಮರೀಚಿಕೆ.

    ಕಲಾವಿದರು, ತಂತ್ರಜ್ಞರನ್ನೊಳಗೊಂಡಂತೆ ಸಂಪೂರ್ಣವಾಗಿ ಹೊಸಬರೇ ಸೇರಿಕೊಂಡು ಈ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇತ್ತೀಚೆಗೆ ಆರ್.ಪಿ.ಸಿ.ಲೇಔಟ್ ನ ಸಂಕಷ್ಟಹರ ಗಣಪತಿ ದೇವಸ್ಥಾನದಲ್ಲಿ ಈ ಚಿತ್ರದ ಮುಹೂರ್ತ ನಡೆಯಿತು. [ಸ್ಯಾಂಡಲ್ ವುಡ್ ನಲ್ಲಿ 105 ಡಿಗ್ರಿ ಹಾರರ್ ಫೀವರ್]

    ಸಂಜಯ್, ಮಾನಸ ಚಿತ್ರದ ಪ್ರಮುಖ ಪಾತ್ರಧಾರಿಗಳು. ಈ ಚಿತ್ರಕ್ಕೆ ರಾಜ್ ಮಯೂರ್ ಹಿರೇಮಠ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ವಿರಾಟ್, ಮುರಾರಿ, ಕಿಲಾಡಿ ಕೃಷ್ಣ ಅಭಿನೇತ್ರಿ ಸೇರಿದಂತೆ 12 ಸಿನಿಮಾಗಳಲ್ಲಿ ರಾಜ್ ಮಯೂರ್ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

    ಒಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆ ರೆಡಿ ಮಾಡಿಕೊಂಡು ಗಾಂಧಿನಗರದಲ್ಲಿ ಸಾಕಷ್ಟು ಅಲೆದಾಡಿದರೂ ಹೊಸಬರೆಂದು ಯಾವ ನಿರ್ಮಾಪಕರು ಒಪ್ಪದಿದ್ದಾಗ ನಿರ್ದೇಶಕರ ರಾಜ್ ಮಯೂರ್, ನಾಯಕ ಸಂಜಯ್ ಸೇರಿದಂತೆ 4 ಜನ ಗೆಳೆಯರು ಸೇರಿ ಈ ಚಿತ್ರವನ್ನು ನಿರ್ಮಿಸಲು ಹೊರಟಿದ್ದಾರೆ.

    ದಕ್ಷಿಣ ಭಾರತದ ಪ್ರಸಿದ್ಧ ದೇವಸ್ಥಾನವೊಂದರ ಸುತ್ತ ನಡೆಯುವಂಥ ಕಥೆ ಇದಾಗಿದ್ದು, ಕರ್ನಾಟಕ, ಆಂಧ್ರ, ತಮಿಳುನಾಡು ಹಾಗೂ ಕೇರಳದಲ್ಲಿ ಸುಮಾರು 50 ದಿನಗಳ ಕಾಲ ಶೂಟಿಂಗ್ ನಡೆಸಲಾಗುವುದು. ಚಿತ್ರದ ಶೇ.60ರಷ್ಟು ಚಿತ್ರೀಕರಣ ಫಾರೆಸ್ಟ್ ನಲ್ಲಿ ನಡೆಸಲು ಉದ್ದೇಶಿಸಲಾಗಿದೆ.

    ಇದೊಂದು ಮರ್ಡರ್ ಮಿಸ್ಟರಿಯಾಗಿದ್ದು 4 ಜನ ಗೆಳೆಯರು ಸೇರಿ ಟ್ರಾವೆಲ್ ಮಾಡುವಾಗ ನಡೆಯುವ ಅಪರೂಪದ ಘಟನೆಗಳೇ ಚಿತ್ರದ ಹೈಲೈಟ್ಸ್. ಒಟ್ಟಾರೆ ಹಣದ ಹಿಂದೆ ಮನುಷ್ಯ ಹೋದಾಗ ಆತ ಯಾವ ಮಟ್ಟ ತಲುಪುತ್ತಾನೆ. ಸ್ನೇಹ ಸಂಬಂಧಗಳು ಹೇಗೆ ಬೆಲೆ ಕಳೆದುಕೊಳ್ಳುತ್ತವೆ ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗಿದೆಯಂತೆ.

    ಈ ಚಿತ್ರದ ನಾಯಕ ಸಂಜಯ್ ಮೂಲತಃ ಬೆಳಗಾವಿಯವರು. ಅಭಿನಯಿಸಬೇಕೆಂಬ ಆಸೆಯಿಂದ ತರಬೇತಿ ಕೂಡ ಪಡೆದಿದ್ದಾರೆ. ಅಲ್ಲದೆ ನಿರ್ದೇಶಕ ರಾಜ್ ಮಯೂರ್ ಇವರ ಸ್ನೇಹಿತ. ಇನ್ನು ನಾಯಕಿ ಮಾನಸಿ ಈಗಾಗಲೇ ಸಾಕಷ್ಟು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 'ಮೊಗ್ಗಿನ ಮನಸ್ಸು', 'ಬ್ಲಾಕ್ ರೋಜ್' ಇವರ ಪ್ರಮುಖ ಸಿನಿಮಾಗಳು.

    ಈ ತರಹದ ಸಿನಿಮಾ ಈ ಹಿಂದೆ ಬಂದಿಲ್ಲ ಎಂದು ಹೇಳಿಕೊಂಡ ನಿರ್ದೇಶಕ ರಾಜ್ ಮಯೂರ್ ಹೊಸಬರ ಹೊಸ ಪ್ರಯತ್ನಕ್ಕೆ ಜನ ಖಂಡಿತ ಪ್ರೋತ್ಸಾಹಿಸುವರೆಂದು ಹೇಳಿದರು. ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ಅವರು ಸಮಾರಂಭಕ್ಕೆ ಆಗಮಿಸಿ ತಂಡಕ್ಕೆ ಶುಭ ಕೋರಿದರು.

    ಕಳೆದ 5-6 ವರ್ಷಗಳಿಂದ ಸೌಂಡ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಮನೋಜ್.ಎಸ್. ಮೊದಲ ಬಾರಿಗೆ ಈ ಚಿತ್ರದ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾಗಿದ್ದಾರೆ. ಸಂದೀಪ್ ಈ ಚಿತ್ರಕ್ಕೆ ಛಾಯಾಗ್ರಾಹಕರು. (ಒನ್ಇಂಡಿಯಾ ಕನ್ನಡ)

    English summary
    Newcomers Kannada movie 'Mareechike' (mirage) launched recently at Vijayanagar, Bangalore. The murder mystery movie starring Sanjay and Manasi directed by Raj Mayur.
    Thursday, March 6, 2014, 13:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X