ಟ್ವಿಟ್ಟರ್ ನಲ್ಲಿ 'ಮಾಸ್ಟರ್ ಪೀಸ್' ಚಿಂದಿ ಚಿತ್ರಾನ್ನ

By Suneetha

ಕನ್ನಡ ಚಿತ್ರರಂಗದ ಈ ವರ್ಷದ ಬಹುನಿರೀಕ್ಷಿತ ಸಿನಿಮಾ 'ಮಾಸ್ಟರ್ ಪೀಸ್' ಇಂದು (ಡಿಸೆಂಬರ್ 24) ಬೆಳ್ಳಂಬೆಳಗ್ಗೆ 3.30ಕ್ಕೆ ಬಹಳ ಅದ್ಧೂರಿಯಾಗಿ ತೆರೆ ಕಂಡಿದ್ದು, ಅಭಿಮಾನಿಗಳು ಎಲ್ಲೆಡೆ ಹಬ್ಬದ ವಾತಾವರಣ ಸೃಷ್ಟಿಸಿದ್ದಾರೆ.

ಇಷ್ಟು ದಿನ ಸಂಭಾಷಣೆಗಾರರಾಗಿದ್ದ ನಿರ್ದೇಶಕ ಮಂಜು ಮಾಂಡವ್ಯ ಅವರು ಮೊಟ್ಟ ಮೊದಲ ಬಾರಿಗೆ ಆಕ್ಷನ್-ಕಟ್ ಹೇಳಿರುವ, ರಾಕಿಂಗ್ ಸ್ಟಾರ್ ಯಶ್ ಮತ್ತು ಶಾನ್ವಿ ಶ್ರೀವಾತ್ಸವ್ ಮುಖ್ಯ ಭೂಮಿಕೆಯಲ್ಲಿ ಮಿಂಚಿರುವ 'ಮಾಸ್ಟರ್ ಪೀಸ್' ಎಲ್ಲಾ ಕಡೆ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ.[ಯಶ್ 'ಮಾಸ್ಟರ್ ಪೀಸ್' ಏಕೆ ನೋಡಬೇಕು? ಇಲ್ಲಿದೆ ಕಾರಣ]

ಇಡೀ ವಿಶ್ವದಾದ್ಯಂತ ತೆರೆ ಕಂಡಿರುವ ಈ ಸಿನಿಮಾ, ಕರ್ನಾಟಕದಲ್ಲಿ ಸುಮಾರು 300 ಚಿತ್ರಮಂದಿರಗಳಲ್ಲಿ ತೆರೆ ಕಂಡಿದೆ. ಈಗಾಗಲೇ ಎಲ್ಲಾ ಕಡೆ ಟಿಕೆಟ್ ಗಳು ಸೋಲ್ಡ್ ಔಟ್ ಆಗಿದ್ದು, ನಮ್ಮ ಬೆಂಗಳೂರಿನ ಮುಖ್ಯ ಚಿತ್ರಮಂದಿರ ಸಂತೋಷ್ ಥಿಯೇಟರ್ ನಲ್ಲಿ 4 ಶೋಗಳ ಟಿಕೆಟ್ ಈಗಾಗಲೇ ಸೋಲ್ಡ್ ಔಟ್ ಆಗಿರುವುದರಿಂದ ಅಭಿಮಾನಿಗಳು ಟಿಕೆಟ್ ಬೇಕೇ ಬೇಕು ಅಂತ ರೊಚ್ಚಿಗೆದ್ದು ಪ್ರತಿಭಟನೆ ಮಾಡುತ್ತಿದ್ದಾರೆ.

ರಿಯಲ್ ಸ್ಟಾರ್ ಉಪೇಂದ್ರ ಅವರ 'ಉಪ್ಪಿ 2' ಸಿನಿಮಾದ ನಂತರ ಮತ್ತೊಮ್ಮೆ ಗಾಂಧಿನಗರದಲ್ಲಿ ಯಶ್ 'ಮಾಸ್ಟರ್ ಪೀಸ್' ಚಿತ್ರದ ಮೂಲಕ ಹಬ್ಬದ ವಾತಾವರಣ ಸೃಷ್ಟಿ ಆಗಿದೆ. ಒಟ್ನಲ್ಲಿ 'ಮಾಸ್ಟರ್ ಪೀಸ್' ಹವಾ ನೋಡುತ್ತಿದ್ದರೆ, ಈ ಬಾರಿ ಬಾಕ್ಸಾಫೀಸ್ ಫುಲ್ ಚಿಂದಿ ಚಿತ್ರಾನ್ನ ಆಗೋದು ಗ್ಯಾರಂಟಿ.[ಬಿಡುಗಡೆಗೆ ಮುನ್ನವೇ 'ಮಾಸ್ಟರ್ ಪೀಸ್' ಟಿಕೆಟ್ ಉಡೀಸ್]

ಅಂದಹಾಗೆ ಇಂದು ಬೆಂಗಳೂರಿನಲ್ಲಿ ಬೆಳಗ್ಗೆ 6 ಘಂಟೆಗೆ ಫಸ್ಟ್ ಶೋ ನೋಡಿದ ಯಶ್ ಅಭಿಮಾನಿಗಳು ಹಾಗೂ ವಿಮರ್ಶಕರು ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯವನ್ನು ಟ್ವಿಟ್ಟರ್ ನಲ್ಲಿ ವ್ಯಕ್ತಪಡಿಸಿದ್ದಾರೆ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ..

ಯಶ್ ಹಬ್ಬ ಮಾಸ್ಟರ್ ಪೀಸ್

ಯಶ್ ಹಬ್ಬ ಮಾಸ್ಟರ್ ಪೀಸ್

'ಮಾಸ್ಟರ್ ಪೀಸ್' ಪ್ರೀಮಿಯರ್ ಲವ್ವೇಬಲ್, ಆಕ್ಷನೇಬಲ್, ಕಾಮಿಡಿ, 'ಮಾಸ್ಟರ್ ಪೀಸ್' ಅದ್ಭುತ, ಶಾನ್ವಿ ಶ್ರೀವಾತ್ಸವ್ ಬಬ್ಲಿ, ನಿಮ್ಮ ಯಶ್ ರಾಕಿಂಗ್. ಅಂತ ಯಶ್ ಹಬ್ಬ ಮಾಸ್ಟರ್ ಪೀಸ್ ಬಳಗ ಟ್ವೀಟ್ ಮಾಡಿದ್ದಾರೆ.

Due to unprecedented demand from audience #Masterpiece early morning shows have been organized across the state....

Posted by Yash on Wednesday, December 23, 2015

ರಾಕಿಂಗ್ ಸ್ಟಾರ್ ಯಶ್

ಅಭಿಮಾನಿಗಳ ಒತ್ತಾಯದ ಮೇರೆಗೆ 'ಮಾಸ್ಟರ್ ಪೀಸ್' ಮುಂಜಾನೆ ಶೋ ರಾಜ್ಯಾದ್ಯಂತ ಎಲ್ಲಾ ಕಡೆ ಮಾಡಲಾಗಿದೆ. ಆದ್ದರಿಂದ ನಮ್ಮ ಬೆಂಗಳೂರು ಕೂಡ ಬೆಳಗ್ಗೆ 5.45 ಕ್ಕೆ ಶೋ ಶುರು ಮಾಡಿದ್ದಾರೆ ಎಂದು ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಫೇಸ್ ಬುಕ್ಕಿನಲ್ಲಿ ಹಾಕಿಕೊಂಡಿದ್ದಾರೆ.

ನಮ್ ಸಿನಿಮಾ ಡಾಟ್ ಕಾಂ

ಇಂಟರ್ ವಲ್ ಬಾಸ್: ಪರದೆಯ ಮೇಲೆ ಯಶ್ ಅವರು ತಮ್ಮ ವಿಶ್ವಾಸಭರಿತ ನಟನೆಯಿಂದ ಬೆರಗುಗೊಳಿಸಿದ್ದಾರೆ. ಅವರೊಂದಿಗೆ ಕಾಮಿಡಿ ನಟ ಚಿಕ್ಕಣ್ಣ ಅವರ ಟೈಮಿಂಗ್ ಮತ್ತು ಲೈವ್ಲಿನೆಸ್ ಸಾಥ್ ಕೊಟ್ಟಿದೆ. ಫಸ್ಟ್ ಹಾಫ್ ಹೀರೋ ಚಿಕ್ಕಣ್ಣ.

ಸಿನಿಲೋಕ

ಕರ್ನಾಟಕದ ಕೆಲವು ಥಿಯೇಟರ್ ನಲ್ಲಿ ಬೆಳ್ಳಂಬೆಳಗ್ಗಿನ ಶೋ ಈಗಾಗಲೇ ಆರಂಭಗೊಂಡು, ಮುಗಿಯುತ್ತಾ ಬಂದಿದೆ.

ನಿರ್ಮಾಪಕ ಕಾರ್ತಿಕ್ ಗೌಡ

ಬಳ್ಳಾರಿಯ ಮೂರು ಚಿತ್ರಮಂದಿರಗಳಲ್ಲಿ ಮುಂಜಾನೆ 3 ಘಂಟೆಗೆ ಸಿನಿಮಾ ಶೋ ಆರಂಭವಾಗಿದೆ. ಈಗ ಎಲ್ಲೆಡೆ ಆಕ್ಷನ್ ಎಂರ್ಟಟೈನರ್ 'ಮಾಸ್ಟರ್ ಪೀಸ್' ನಿಮ್ಮ ಬಳಿ ಇದೆ ಸಿನಿಮಾ ನೋಡಿ. ಎಂದು 'ಮಾಸ್ಟರ್ ಪೀಸ್' ನಿರ್ಮಾಪಕ ಕಾರ್ತಿಕ್ ಗೌಡ ಟ್ವೀಟ್ ಮಾಡಿದ್ದಾರೆ.

ಯಶ್ ಬಳಗ

ಕನ್ನಡದ ಮೊದಲ ಸಿನಿಮಾ 'ಮಾಸ್ಟರ್ ಪೀಸ್' ಇದು ಲಾಭದಾಯಕ ಶೋ ಮತ್ತು ಅಭಿಮಾನಿಗಳ ಶೋ ಎಂದು ಹೇಳಿಕೊಳ್ಳಲು ಹೆಮ್ಮೆ ಆಗುತ್ತಿದೆ. ಕೆಲವು ಚಿತ್ರಮಂದಿರಗಳಲ್ಲಿ ಮುಂಜಾನೆ 3 ಘಂಟೆ ಮತ್ತು 5 ಘಂಟೆಗೆ ಸಿನಿಮಾ ಬಿಡುಗಡೆ ಆಗಿದೆ.

ನಟಿ ಶಾನ್ವಿ ಶ್ರೀವಾತ್ಸವ್

'ಮಾಸ್ಟರ್ ಪೀಸ್' ಕ್ರೇಜಿ ನಿರ್ದೇಶಕರ ಜೊತೆ ಸೆಲ್ಫಿ, ಇಲ್ಲಿಂದ ಸುಮಾರು 5 ಘಂಟೆಗಳವರೆಗೆ, ನಿದ್ದೆ ಇಲ್ಲ, ಬಹಳ ರೋಮಾಂಚನ ಆಗುತ್ತಿದೆ. ಎಂದು 'ಮಾಸ್ಟರ್ ಪೀಸ್' ನಟಿ ಸಾನ್ವಿ ಶ್ರೀವಾತ್ಸವ್ ಟ್ವೀಟ್ ಮಾಡಿದ್ದಾರೆ.

ಜಯಂತ್ ಹೀರೆಮಠ್

ಸಿನಿಮಾ ಫುಲ್ ಆಕ್ಷನ್ ಜೊತೆಗೆ ಪ್ರೇಕ್ಷಕರ ಪ್ರಯಾಣ. ಆಲ್ ದ ಬೆಸ್ಟ್ ಎಲ್ಲಾ ಮಾಸ್ಟರ್ ಪೀಸ್ ಬಳಗಕ್ಕೆ

ಸಿನಿಲೋಕ

'ಮಾಸ್ಟರ್ ಪೀಸ್' ಫಸ್ಟ್ ಹಾಫ್- ಮಂಜು ಮಾಂಡವ್ಯ ಅವರು ಬರೆದಿರುವ ಸುಂದರವಾಗಿರುವ ಡೈಲಾಗ್ ಗಳು ಯಶ್ ಅವರ ಇಮೇಜ್ ಅನ್ನು ಎತ್ತಿತೋರಿಸಿದೆ. ಒಟ್ನಲ್ಲಿ 'ಭಲೇ ಬಸವ' ಬಿಲ್ಡಪ್.

ಪಾವನಿ ಗೌಡ

ಫಸ್ಟ್ ಹಾಪ್ ಹೀರೋ ಚಿಕ್ಕು, ಸೆಕೆಂಡ್ ಹಾಫ್ ಒಳ್ಳೆ ಫರ್ಫಾಮೆನ್ಸ್, ರೇಟಿಂಗ್ 3.5 ರಿಂದ 3.75. ನನಗೆ ಅನಿಸಿದ್ದು ಅಷ್ಟೆ. ಒಳ್ಳೆ ಸಿನಿಮಾ ಆದರೆ.?... ಎಂದು ಸಿನಿಮಾ ನೋಡಿದ ಪಾವನಿ ಗೌಡ ಅವರು ಟ್ವೀಟ್ ಮಾಡಿದ್ದಾರೆ.

More from Filmibeat

English summary
Twitter reaction to Kannada movie 'Masterpiece' which got released on December 24. The movie is directed by Manju Mandavya, Actor Yash and Actress Shanvi Shrivastava in the lead role.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X