'ಬಿಗ್ ಬಾಸ್' ನಂತರ ಮತ್ತೆ ನಿಮ್ಮ ಮುಂದೆ ಬರ್ತಿದ್ದಾರೆ ಜೆಕೆ

By Bharath Kumar

ಬಿಗ್ ಬಾಸ್ ಕನ್ನಡ 5ನೇ ಅವೃತ್ತಿ ಮುಗಿದಿದೆ. ಬಿಗ್ ಬಾಸ್ ಸ್ಪರ್ಧಿಗಳ ಮುಂದಿನ ಹಾದಿ ಏನು? ಮುಂದಿನ ಯೋಜನೆ ಏನು? ಎಂಬುದು ಕುತೂಹಲವಾಗಿತ್ತು. ಈ ಕುತೂಹಲದ ಮಧ್ಯೆ ಜೆ.ಕೆ ಅಭಿನಯಿಸುತ್ತಿರುವ ಹೊಸ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಜೆಕೆ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.

ಹೌದು, ಕಾರ್ತಿಕ್ ಜಯರಾಂ ಅಭಿನಯದ 'ಮೇ 1' ಸಿನಿಮಾದ ಟೀಸರ್ ತೆರೆಕಂಡಿದೆ. ಟೈಟಲ್ ನಿಂದಲೇ ನಿರೀಕ್ಷೆ ಮೂಡಿಸಿರುವ ಈ ಚಿತ್ರ ಹಾರರ್ ಸಬ್ಜೆಕ್ಟ್ ಹೊಂದಿರುವುದು ವಿಶೇಷ. ಲವ್, ಸೆಂಟಿಮೆಂಟ್ ಜೊತೆ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಇದಾಗಿದೆ.

ಹೇಮಂತ್‌ ಹೆಗಡೆ ನಿರ್ದೇಶನದ 'ಸ' ಚಿತ್ರದ ಬಳಿಕ ಜೆಕೆ ಎಲ್ಲೂ ಸುದ್ದಿಯಾಗಲಿಲ್ಲ. ಅವರು ಬಾಲಿವುಡ್‌ ಅಂಗಳಕ್ಕೆ ಜಿಗಿದು, ಅಲ್ಲಿ ಹಿಂದಿ ಧಾರಾವಾಹಿಯಲ್ಲಿ ನಟಿಸಿ ವಾಪಸ್ ಬಂದಿದ್ದರು. ಅದಾದ ನಂತರ ಈ ಚಿತ್ರದಲ್ಲಿ ನಟಿಸುತ್ತಿದ್ದರು. ಇದರ ಮಧ್ಯೆ ಬಿಗ್ ಬಾಸ್ ಮನೆಗೆ ಎಂಟ್ರಿಯಾಗಿದ್ದರು.

Kannada movie may 1st trailer released

ಅಂದ್ಹಾಗೆ, ಈ ಚಿತ್ರವನ್ನ ನಾಗೇಂದ್ರ ಅರಸ್ ನಿರ್ದೇಶನ ಮಾಡಿದ್ದು, ಸ್ವತಃ ಜೆಕೆ ಅವರೇ ಕತೆ ಮತ್ತು ಚಿತ್ರಕತೆ ಬರೆದಿದ್ದಾರೆ. ಶ್ರೀ ಲಕ್ಷ್ಮೀ ಸಾಯಿ ಕ್ರಿಯೇಷನ್ಸ್ ಸಂಸ್ಥೆಯಡಿ ವಾಣಿ ರಾಜು ಈ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ಜೆಕೆಗೆ ಇಬ್ಬರು ನಾಯಕಿಯರಿದ್ದು, ರಕ್ಷಾ ಸೋಮಶೇಖರ್ ಮತ್ತು ಪೂರ್ವಿ ಜೋಷಿ ಅಭಿನಯಿಸಿದ್ದಾರೆ. ಇನ್ನುಳಿದಂತೆ ಈ ಚಿತ್ರಕ್ಕೆ ಸತೀಶ್ ಬಾಬು ಸಂಗೀತ, ಕಿರಣ್ ಸತೀಶ್ ಛಾಯಾಗ್ರಹಣ ಮಾಡುತ್ತಿದ್ದಾರೆ.

More from Filmibeat

English summary
Kannada actor karthik jayaram starrer may 1st movie trailer released. the movie directed by nagendra uras.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X