ಮೇ ತಿಂಗಳಲ್ಲೇ ಮೆಲ್ಲಗೆ ಬರುತ್ತಿದ್ದಾರೆ ಮಿಸ್ ಮಲ್ಲಿಗೆ

By Rajendra

ಕಳೆದ ವರ್ಷದಿಂದ ಸ್ಯಾಂಡಲ್ ವುಡ್ ನಲ್ಲಿ ಭರ್ಜರಿ ಸದ್ದು ಮಾಡುತ್ತಿರುವ ಚಿತ್ರ 'ಮಿಸ್ ಮಲ್ಲಿಗೆ'. ಇದೀಗ ನಿಮ್ಮ ನೆಚ್ಚಿನ ಚಿತ್ರಮಂದಿರಕ್ಕೆ ಮೆಲ್ಲಗೆ ಅಡಿಯಿಡಲು ಸಿದ್ಧವಾಗಿದ್ದಾರೆ. ಇದಕ್ಕೂ ಮುನ್ನ ಚಿತ್ರಕ್ಕೆ ಮೈಸೂರು ಮಲ್ಲಿಗೆ ಎಂದು ಹೆಸರಿಡಲಾಗಿತ್ತು. ಆದರೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ 'ಮಿಸ್ ಮಲ್ಲಿಗೆ'ಯಾಗಿ ಬದಲಾಯಿತು.

ಸಮಾಜದಲ್ಲಿ ಹೆಣ್ಣಿನ ಶೋಷಣೆ ಹಾಗೂ ಒಂಟಿ ಹೆಣ್ಣಿನ ಮೇಲೆ ನಿತ್ಯ ನಡೆಯುತ್ತಿರುವ ದಬ್ಬಾಳಿಕೆ ದೌರ್ಜನ್ಯದಂತಹ ಗಹನವಾದ ವಾಸ್ತವಾಂಶ ಹೊಂದಿರುವ ಕಥಾವಸ್ತುವನ್ನು ಚಿತ್ರ ಒಳಗೊಂಡಿದೆ. ಚಾಮುಂಡೇಶ್ವರಿ ಮೂವೀಸ್ ಮತ್ತು ವಿಸ್ಮಯ ವಿಶುಯಲ್ಸ್ ಸಂಸ್ಥೆಯಿಂದ ನಿರ್ಮಾಣವಾಗಿರುವ 'ಮಿಸ್ ಮಲ್ಲಿಗೆ'ಚಿತ್ರದ ಪ್ರಥಮ ಪ್ರತಿ ಸಿದ್ದವಾಗಿದ್ದು ಮೇ ತಿಂಗಳ ಕೊನೆಯ ವಾರದಲ್ಲಿ ಚಿತ್ರವು ಬಿಡುಗಡೆಯಾಗಲಿದೆ. ['ಮಿಸ್ ಮಲ್ಲಿಗೆ'ಯಾಗಿ ಬದಲಾದ ಮೈಸೂರು ಮಲ್ಲಿಗೆ]

ಈ ಹಿಂದೆ 'ಆಸ್ಕರ್' ಎಂಬ ವಿನೂತನ ಶೈಲಿಯ ಚಿತ್ರ ನಿರ್ದೇಶಿಸಿದ್ದ ಆಸ್ಕರ್ ಕೃಷ್ಣ 'ಮೈಸೂರು ಮಲ್ಲಿಗೆ' ಚಿತ್ರಕ್ಕೆ ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶಿಸುವುದರೊಂದಿಗೆ ನಿರ್ಮಾಣದ ಜವಾಬ್ದಾರಿಯನ್ನು ಕೂಡ ಹೊತ್ತಿದ್ದಾರೆ.

ತಮ್ಮ ಚಿತ್ರದಲ್ಲಿ ಯಾವುದೇ ಅಶ್ಲೀಲತೆ ಇಲ್ಲ. ಸಮಾಜಕ್ಕೆ ಕೆಟ್ಟ ಸಂದೇಶವೂ ಇಲ್ಲ. ಮಹಿಳೆಯರ ಮೇಲಿನ ಶೋಷಣೆಯನ್ನು ಚಿತ್ರದಲ್ಲಿ ತೋರಿಸಲು ಪ್ರಯತ್ನಿಸಿದ್ದೇವೆ. ಈ ಚಿತ್ರದಲ್ಲಿ ಮಹಿಳೆಯರಿಗೆ ಆತ್ಮವಿಶ್ವಾಸ ತುಂಬುದ ಕೆಲಸ ಮಾಡಿದ್ದೇವೆ ಎನ್ನುತ್ತಾರೆ ಆಸ್ಕರ್ ಕೃಷ್ಣ.

ಆಸ್ಕರ್ ಕೃಷ್ಣ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಎಸ್.ನಾಗು ಸಂಗೀತ, ಸೂರ್ಯಕಾಂತ್ ಛಾಯಗ್ರಹಣ, ರಘು,ಮನು ನೃತ್ಯ ನಿರ್ದೇಶನ, ಕೃಷ್ಣ ಮತ್ತು ಕುಮಾರ್ ಸಾಹಿತ್ಯ, ಹರೀಶ್ ಸಂಕಲನ ಇರುತ್ತದೆ. ರಂಜನ್ ಶೆಟ್ಟಿ, ರೂಪಾ ನಟರಾಜ್, ಶ್ರೀಶ್ವೇತಾ, ವಿಕ್ರಂ, ದಶಾವತಾರ ಚಂದ್ರು, ವಿಕ್ಟರಿ ವಾಸು, ಮಾಸ್ಟರ್ ರಾಕಿನ್ ಇನ್ನು ಮುಂತಾದವರು ತಾರಬಳಗದಲ್ಲಿ ಇದ್ದಾರೆ. (ಒನ್ಇಂಡಿಯಾ ಕನ್ನಡ)

More from Filmibeat

English summary
Kannada movie Miss Mallige ready for release. Miss Mallige is about an innocent girl, who faces tough time, as she grows up. The film looks into whether a woman in society gets the right share to live or not. It is a good mixture of reality and imagination". 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X