'ಎಂ ಎಲ್ ಎ' ಅವತಾರದಲ್ಲಿ ಪ್ರಥಮ್ ಎಂಟ್ರಿಗೆ ವೇದಿಕೆ ಸಜ್ಜು

ಬಿಗ್ ಬಾಸ್ ವಿನ್ನರ್ ಪ್ರಥಮ್ ಅಭಿನಯದ 'ಎಂ ಎಲ್ ಎ' ಚಿತ್ರ ನವಂಬರ್ 9ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲ್ಲೇ ಪಿ.ಆರ್.ಕೆ ಆಡಿಯೋ ಮೂಲಕ ಬಿಡುಗಡೆಯಾಗಿರುವ ಚಿತ್ರದ ಹಾಡುಗಳು ಕೇಳುಗರ ಮನ ಗೆದ್ದಿದೆ.

ಇದೊಂದು ಪಕ್ಕಾ ಪೊಲಿಟಿಕಲ್ ಎಂಟರ್ ಟೈನ್ಮೆಂಟ್ ಎನ್ನುವುದು ಈ ಚಿತ್ರದ ಟ್ರೈಲರ್ ಪ್ರೂವ್ ಮಾಡಿದೆ. ಒಂದು ಕಡೆ ಪ್ರಥಮ್ ಮತ್ತೊಂದೆಡೆ ಸ್ಪರ್ಶಾ ರೇಖಾ ಪೊಲಿಟಿಶಿಯನ್ ಗಳಾಗಿ ಮಿಂಚಿದ್ದಾರೆ. ಇಬ್ಬರು ರಾಜಕಾರಣಿಗಳಾಗಿ ಪ್ರೇಕ್ಷಕರನ್ನ ರಂಜಿಸಲಿದ್ದಾರೆ. ಸಾಮಾನ್ಯ ವ್ಯಕ್ತಿಯೊಬ್ಬ ಶಾಸಕಿಯೊಬ್ಬರ ಅಕ್ರಮದ ವಿರುದ್ಧ ಸಿಡಿದೆದ್ದು, ತಾನೇ ಎಂಎಲ್ಎ ಆಗುವ ಕಥೆ ಇದು.

ಮೌರ್ಯ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನ ತ್ರಿವೇಣಿ ಲಾಂಛನದಲ್ಲಿ ವೆಂಕಟೇಶ್ ರೆಡ್ಡಿ ಅವರು ನಿರ್ಮಿಸಿದ್ದಾರೆ. ಪ್ರಥಮ್ ಗೆ ನಾಯಕಿಯಾಗಿ ಸೋನಾಲ್ ಮಾಂಟೆರೊ ಕಾಣಿಸಿಕೊಂಡಿದ್ದಾರೆ.

Kannada movie mla releasing on november 9th

ಇನ್ನುಳಿದಂತೆ ಸ್ಪರ್ಶರೇಖಾ, ಕುರಿ ಪ್ರತಾಪ್, ರಾಜಶೇಖರ್, ನವೀನ್, ಚಂದ್ರಕಲಾ ಮೋಹನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಮಾಜಿ ಸಚಿವ ಎಚ್.ಎಂ.ರೇವಣ್ಣ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.

Kannada movie mla releasing on november 9th

ವಿಕ್ರಂಸುಬ್ರಮಣ್ಯ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಕೃಷ್ಣಸಾರಥಿ ಅವರ ಛಾಯಾಗ್ರಹಣವಿದೆ. ಕೆ.ಆರ್.ಲಿಂಗರಾಜು ಸಂಕಲನ, ಕಲೈ ನೃತ್ಯ ನಿರ್ದೇಶನ ಹಾಗೂ ದೇವಿಪ್ರಕಾಶ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ವೆಂಕಿ ಪಾಲುಗುಳ್ಳ ಈ ಚಿತ್ರದ ಸಹ ನಿರ್ಮಾಪಕರು.

More from Filmibeat

English summary
Kannada actor Pratham starrer MLA movie releasing on november 9th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X