For Quick Alerts
  ALLOW NOTIFICATIONS  
  For Daily Alerts

  'ಮಫ್ತಿ' ಯಶಸ್ಸಿನ ಬಳಿಕ ಬರುತ್ತಾ 'ಮಫ್ತಿ ಪಾರ್ಟ್ 2'?

  By Naveen
  |

  'ಮಫ್ತಿ' ಸಿನಿಮಾ ನೋಡಿದವರು ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ. ಸಿನಿಮಾದ ಮೇಕಿಂಗ್, ಮ್ಯೂಸಿಕ್, ಶಿವಣ್ಣ ಮತ್ತು ಶ್ರೀಮುರಳಿ ನಟನೆ ಎಲ್ಲ ಸೇರಿ ಸಿನಿಮಾ ನೋಡುಗರಿಗೆ ಬೇರೆಯದೇ ಫೀಲ್ ನೀಡುತ್ತಿದೆ.

  'ಭೈರತಿ ರಣಗಲ್ಲು' ಪಾತ್ರದ ಹುಟ್ಟಿನ ಬಗ್ಗೆ 'ಮಫ್ತಿ' ನಿರ್ದೇಶಕರ ಮಾತು!'ಭೈರತಿ ರಣಗಲ್ಲು' ಪಾತ್ರದ ಹುಟ್ಟಿನ ಬಗ್ಗೆ 'ಮಫ್ತಿ' ನಿರ್ದೇಶಕರ ಮಾತು!

  ಇದೆಲ್ಲದರ ಜೊತೆಗೆ 'ಮಫ್ತಿ' ಸಿನಿಮಾ ನೋಡಿದ ಅನೇಕರಲ್ಲಿ 'ಮಫ್ತಿ ಪಾರ್ಟ್ 2' ಬರುತ್ತಾ ಎಂಬ ಸಣ್ಣ ಪ್ರಶ್ನೆ ಕೂಡ ಹುಟ್ಟುತ್ತದೆ. ಸಿನಿಮಾದ ಕ್ಲೈಮ್ಯಾಕ್ಸ್ ಭಾಗವನ್ನು ಸರಿಯಾಗಿ ಗಮನಿಸಿದರೆ ಸಿನಿಮಾ 'ಪಾರ್ಟ್ 2' ಆಗಿ ಮುಂದುವರೆಯುತ್ತದೆಯಾ ಎಂಬ ಡೌಟ್ ಬರುತ್ತದೆ.

  ಕ್ಲೈಮ್ಯಾಕ್ಸ್ ನಲ್ಲಿ ಭೈರತಿ ರಣಗಲ್ಲು (ಶಿವರಾಜ್ ಕುಮಾರ್) ಪೊಲೀಸ್ ಅಧಿಕಾರಿ ಆದ ಗಣ(ಶ್ರೀ ಮುರಳಿ)ಗೆ ಬಂದಿಯಾಗುತ್ತಾನೆ. ಆ ನಂತರ ಆ ಎರಡು ಪಾತ್ರಗಳು ಮತ್ತೆ ಸೇರುವುದಿಲ್ಲ. ಭೈರತಿ ರಣಗಲ್ಲುಗೆ ಗಣ ಪೊಲೀಸ್ ಎಂದು ಮೊದಲೇ ಗೊತ್ತಿದೆ ಎಂಬ ಅಂಶವನ್ನು ಕಥೆಯಲ್ಲಿ ಹೇಳಿದ್ದಾರೆ. ಆದರೆ ಈ ಬಗ್ಗೆಯೂ ಸ್ವಲ್ಪ ಸ್ಪಷ್ಟತೆ ಇಲ್ಲ. ಚಿತ್ರದಲ್ಲಿ ಇರುವ ಓಪನ್ ಎಂಡಿಂಗ್ 'ಮಫ್ತಿ 2' ಬರುತ್ತದೆಯಾ ಎಂಬ ಅನುಮಾನ ಹುಟ್ಟಿಸಿದೆ.

  ಈ ಹಿಂದೆ ಶಿವಣ್ಣನ 'ಕಡ್ಡಿಪುಡಿ' ಚಿತ್ರದಲ್ಲಿ ಸೂರಿ ಇದೇ ರೀತಿಯ ಹೊಸತನದ ಕ್ಲೈಮ್ಯಾಕ್ಸ್ ಕೊಟ್ಟಿದ್ದರು. ಸಿನಿಮಾ ನೋಡುತ್ತಿದ್ದ ಹಾಗೆ ಇದ್ದಕ್ಕಿದ್ದ ಹಾಗೆ ಸಿನಿಮಾ ಮುಗಿದಿತ್ತು. ಆ ವೇಳೆಯೂ 'ಕಡ್ಡಿಪುಡಿ 2' ಬರುತ್ತದೆ ಎಂಬ ಸುದ್ದಿ ಇತ್ತಾದರೂ ಸಿನಿಮಾ ಬರಲಿಲ್ಲ. ಆದರೆ 'ಮಫ್ತಿ 2' ಬರುತ್ತದೆಯಾ ಎಂಬ ಕುತೂಹಲವನ್ನು ಚಿತ್ರದ ಕ್ಲೈಮ್ಯಾಕ್ಸ್ ಮೂಡಿಸಿದೆ.

  English summary
  Srimurali and Shiva Rajkumar starrer Kannada Movie 'Mufti' has hit the screens last friday (December 1st). 'Mufti' has abrupt ending without conclusion. Does this mean director Narthan is planning for 'Mufti -2'?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X