For Quick Alerts
  ALLOW NOTIFICATIONS  
  For Daily Alerts

  'ಮುತ್ತಣ್ಣ'ನಾಗಿ ಮತ್ತೆ ಚಿತ್ರಮಂದಿರಕ್ಕೆ ಬರ್ತಾರೆ ಶಿವಣ್ಣ

  By Bharath Kumar
  |

  ಕೆಲವು ಸಿನಿಮಾಗಳು ಹಾಗೆ, ಕಾಲಗಳು ಉರುಳಿದರು ನೆನಪು ಮಾತ್ರ ಮಾಸಲ್ಲ. ಹಾಗಾಗಿಯೇ ಈ ಚಿತ್ರಗಳಿಗೆ ಹೊಸ ತಂತ್ರಜ್ಞಾನವನ್ನ ಅಳವಡಿಸಿ ಮತ್ತೆ ಮತ್ತೆ ತೆರೆಮೇಲೆ ತರಲಾಗುತ್ತೆ. ಇಂತಹ ಚಿತ್ರಗಳಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಮುತ್ತಣ್ಣ' ಚಿತ್ರವೂ ಒಂದು.

  90ರ ದಶಕದಲ್ಲಿ ಬಿಡುಗಡೆಯಾಗಿದ್ದ ಸೂಪರ್ ಹಿಟ್ ಚಿತ್ರ 'ಮುತ್ತಣ್ಣ' ಮತ್ತೆ ತೆರೆ ಮೇಲೆ ಬರಲಿದೆಯಂತೆ. 7.1 ಡಿಜಿಟಲ್ ಸೌಂಡ್, 4k HD ತಂತ್ರಜ್ಞಾನದೊಂದಿಗೆ ಮತ್ತೊಮ್ಮೆ ಬೆಳ್ಳಿತೆರೆಯಲ್ಲಿ ರಾರಾಜಿಸಲಿದೆ.

  ನಿರ್ದೇಶಕ ಪ್ರೇಮ್ ಅವರ ನಾಲ್ಕು ಸಾಲಿನಿಂದ ಸೃಷ್ಟಿಯಾಯ್ತು 'ಜೋಗಿ' ಸಿನಿಮಾ

  1994 ರಲ್ಲಿ ತೆರೆಕಂಡಿದ್ದ 'ಮುತ್ತಣ್ಣ' ಭರ್ಜರಿ ಯಶಸ್ಸು ಕಂಡಿತ್ತು. ಸೆಂಚುರಿಸ್ಟಾರ್ ಶಿವರಾಜ್ ಕುಮಾರ್ ಈ ಚಿತ್ರದಲ್ಲಿ ದ್ವಿಪಾತ್ರದಲ್ಲಿ ಅಭಿನಯಿಸಿದ್ದರು. ಎಂ.ಎಸ್.ರಾಜಶೇಖರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಸೋಮಣ್ಣಗೌಡ ನಿರ್ಮಾಣ ಮಾಡಿದ್ದರು. ಹಂಸಲೇಖ ಅವರು ಮಧುರವಾದ ಸಂಗೀತ ಈ ಚಿತ್ರಕ್ಕಿತ್ತು.

  ಸೈಮಾ ಪ್ರಶಸ್ತಿ ಗೆದ್ದ ನಟ-ನಟಿಯರು ಯಾರು? ಸಂಪೂರ್ಣ ಪಟ್ಟಿ ಇಲ್ಲಿದೆ..

  ಉಳಿದಂತೆ ಚಿತ್ರದಲ್ಲಿ ಸುಪ್ರಿಯಾ, ಸ್ನೇಹ, ಶಶಿಕುಮಾರ್, ದೊಡ್ಡಣ್ಣ, ಸತ್ಯಜಿತ್, ಭವ್ಯಶ್ರೀ. ತೂಗುದೀಪ್ ಶ್ರೀನಿವಾಸ್, ಸೇರಿದಂತೆ ಹಲವರು ಕಾಣಿಸಿಕೊಂಡಿದ್ದರು. ಇನ್ನು ವಿಶೇಷ ಅಂದ್ರೆ ಶಿವರಾಜ್ ಕುಮಾರ್ ಅವರ ಮಗಳು ನಿರುಪಮಾ ಅವರು ಬಾಲನಟಿ ಆಗಿ ಅಭಿನಯಿಸಿದ್ದರು. ಈಗಾಗಲೇ ಮರು ಬಿಡುಗಡೆಯಾಗಲು ಸಿದ್ದವಾಗುತ್ತಿರುವ 'ಮುತ್ತಣ್ಣ' ಆಗಸ್ಟ್ ತಿಂಗಳಲ್ಲಿ ಗಾಂಧಿನಗರಕ್ಕೆ ಕಾಲಿಡಲಿದೆಯಂತೆ.

  ಕರುನಾಡ ಚಕ್ರವರ್ತಿ ಜೊತೆ ಬಾಲಿವುಡ್ ಸೂಪರ್ ಸ್ಟಾರ್ ನಟನೆ.!

  English summary
  Kannada Movie 'Mutthanna' is now Re releasing with a new print with 5.1 sound. Hatric Hero Shiva rajkumar starrer 'Mutthanna' was a super hit movie in 1994. MS Rajashekar was the director for 'Mutthanna'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X