»   » 'ಕಾಮಿಡಿ ಕಿಲಾಡಿ' ಲೋಕೇಶ್ ಅವರ 'ನಾವೇ ಭಾಗ್ಯವಂತರು' ಚಿತ್ರ ಸೆಟ್ಟೇರಿತು

'ಕಾಮಿಡಿ ಕಿಲಾಡಿ' ಲೋಕೇಶ್ ಅವರ 'ನಾವೇ ಭಾಗ್ಯವಂತರು' ಚಿತ್ರ ಸೆಟ್ಟೇರಿತು

Posted By:
Subscribe to Filmibeat Kannada

'ಕಾಮಿಡಿ ಕಿಲಾಡಿಗಳು' ಖ್ಯಾತಿಯ ಲೋಕೇಶ್ ಕುಮಾರ್ ಅಭಿನಯದ ಹೊಸ ಚಿತ್ರ 'ನಾವೇ ಭಾಗ್ಯವಂತರು' ಸೆಟ್ಟೇರಿದೆ. ಅಡಕಮಾರನಳ್ಳಿಯ ಬೈಲಾಂಜನೇಯ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನೆರವೇರಿದ್ದು, ನಿರ್ಮಾಪಕ ಇ.ಕೃಷ್ಣಪ್ಪ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರು. ಬಿ ನಾರಾಯಣ ರಾವ್ ಕ್ಯಾಮೆರಾಗೆ ಚಾಲನೆ ನೀಡಿದರು.

ಮೂವರು ವಿದ್ಯಾವಂತ ನಿರುದ್ಯೋಗಿಯ ಕಥೆ ಇದಾಗಿದ್ದು, ಕಾಮಿಡಿ ಕಿಲಾಡಿಗಳು ಖ್ಯಾತಿಯ ಲೋಕೇಶ್ ಕುಮಾರ್, ನಟ ಶ್ರವಂತ್ ಮತ್ತು ಕಿರುತೆರೆ ನಟ ಸೂರಜ್ ಕೂಡ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

'ಕಾಮಿಡಿ ಕಿಲಾಡಿ' ಲೋಕೇಶ್ ಕುಮಾರ್ ಈಗ 'ಭಾಗ್ಯವಂತ'

Kannada Movie 'Naave Bhagyavantharu' Lunched

ಕಥೆ-ಚಿತ್ರಕಥೆ ಬರೆದು ಈ ಚಿತ್ರವನ್ನ ನಿರ್ದೇಶನ ಮಾಡುತ್ತಿರುವುದು ಎಂ. ಹರಿಕೃಷ್ಣ. ಎಂ ಪ್ರಕಾಶ್ ಕುಮಾರ್ ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಬಸವಣ್ಣ ಮೆಳ್ಳಹಳ್ಳಿ ಅವರ ಸಂಗೀತ, ಕುಮಾರ್ ಗೌಡ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

Kannada Movie 'Naave Bhagyavantharu' Lunched

ಇನ್ನುಳಿದಂತೆ ದಿವ್ಯ, ಶಿಲ್ಪ ರೈ, ಶ್ರೀನಾಥ್, ಸುಧಾರಾಣಿ, ಸುಚೇಂದ್ರ ಪ್ರಸಾದ್, ಹಾಗೂ ಕಾಮಿಡಿ ಕಿಲಾಡಿಗಳು ಖ್ಯಾತಿಯ ಪ್ರವೀಣ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸರಳವಾಗಿ ಶುರುವಾದ 'ನಾವೇ ಭಾಗ್ಯವಂತರು' ಬೆಂಗಳೂರು, ನೆಲಮಂಗಲ, ಕುಮಟಾ, ಮಂಗಳೂರು, ಹಾಗೂ ಹೊನ್ನಾವರ ಸೇರಿದಂತೆ ಹಲವು ಕಡೆ ಚಿತ್ರೀಕರಣ ನಡೆಸಲಿದೆ.

English summary
Kannada Movie 'Naave Bhagyavantharu' Lunched. The Movie Directed By M Harikrishna and features Lokesh Kumar, Shravanth, Suraj in the Lead Role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada