'ನಾಗರಹಾವು' ತೆರೆ ಮೇಲೆ ಯಾವಾಗ ಬರುತ್ತೆ.?
ಸ್ಯಾಂಡಲ್ ವುಡ್ ನಲ್ಲಿ ಬಹಳ ನಿರೀಕ್ಷೆ ಹುಟ್ಟಿಸಿರುವ ''ನಾಗರಹಾವು" ಚಿತ್ರತಂಡದಿಂದ ಅಭಿಮಾನಿಗಳಿಗೆ ಒಂದು ಖಾಸ್ ಖಬರ್ ಹೊರಬಿದ್ದಿದೆ. ಜುಲೈ 14 ರಂದು ಚಿತ್ರದ ನಿರ್ಮಾಪಕ ಸಾಜೀದ್ ಖುರೇಷಿ ಅವರು ಚಿತ್ರದ ಹಾಡುಗಳ ಬಿಡುಗಡೆ ದಿನಾಂಕ ಮತ್ತು ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಲಿದ್ದಾರೆ.
ತೆಲುಗಿನಲ್ಲಿ 'ಅರುಂಧತಿ'ಯಂತಹ ಬಿಗ್ ಹಿಟ್ ಸಿನಿಮಾಗಳನ್ನು ಮಾಡಿರುವ ಖ್ಯಾತ ನಿರ್ದೇಶಕ ಕೋಡಿ ರಾಮಕೃಷ್ಣ ಅವರು ಆಕ್ಷನ್-ಕಟ್ ಹೇಳಿರುವ 'ನಾಗರಹಾವು' ಚಿತ್ರ ಟೀಸರ್ ಮೂಲಕ ಭಾರಿ ಕುತೂಹಲ ಸೃಷ್ಟಿ ಮಾಡಿತ್ತು. ಜೊತೆಗೆ ಅಭಿನಯ ಭಾರ್ಗವ ವಿಷ್ಣುವರ್ಧನ್ ಅವರನ್ನು ಮತ್ತೆ ಈ ಸಿನಿಮಾದ ಮೂಲಕ ತೆರೆಯ ಮೇಲೆ ನೋಡಬಹುದು ಅಂತ ಅಭಿಮಾನಿಗಳು ಕೂಡ ಫುಲ್ ಖುಷ್ ಆಗಿದ್ದಾರೆ.[ಕರ್ನಾಟಕದಲ್ಲಿ 'ಕಬಾಲಿ' ಗಿಂತ 'ನಾಗರಹಾವು' ಟ್ರೆಂಡಿಂಗ್.!]

ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಕ್ವೀನ್ ನಟಿ ರಮ್ಯಾ ಅವರು ಕೂಡ ಹಲವು ಗ್ಯಾಪ್ ಗಳ ಬಳಿಕ ಮತ್ತೆ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ಜೊತೆ ನಟ ದಿಗಂತ್ ಅವರು ರೋಮ್ಯಾನ್ಸ್ ಮಾಡುತ್ತಿದ್ದಾರೆ.
ಹಲವಾರು ವಿಶೇಷತೆಗಳನ್ನು ಒಳಗೊಂಡಿರುವ ಈ ಚಿತ್ರದಲ್ಲಿ ನಟಿ ರಮ್ಯಾ ಮತ್ತು ಡಾ.ವಿಷ್ಣುವರ್ಧನ್ ಅವರನ್ನು ಅಭಿಮಾನಿಗಳು ಹಾವಿನ ಅವತಾರದಲ್ಲಿ ನೋಡುವ ಅಪರೂಪದ ಅವಕಾಶ ಸಿಗಲಿದೆ. ಸಂಗೀತ ನಿರ್ದೇಶಕ ಗುರುಕಿರಣ್ ಅವರು ಚಿತ್ರದ ಹಾಡುಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.['ಬಾಹುಬಲಿ' ಚಿತ್ರಕ್ಕೆ ಸವಾಲ್ ಹಾಕಿದ ಕನ್ನಡದ 'ನಾಗರಹಾವು'.!]

ಅಂತೂ-ಇಂತೂ ಜುಲೈ 14 ರಂದು ಚಿತ್ರ ಬಿಡುಗಡೆಯ ದಿನಾಂಕ ಹೊರಬೀಳಲಿದ್ದು, ಸದ್ಯದಲ್ಲೇ ಅಭಿಮಾನಿಗಳು ವಿಷ್ಣುದಾದಾ ಅವರನ್ನು ತೆರೆಯ ಮೇಲೆ ಕಣ್ತುಂಬಿಕೊಳ್ಳಬಹುದು.['ನಾಗರಹಾವು' ಬಗ್ಗೆ 'ನಾಗಿಣಿ' ರಮ್ಯಾ ಉದುರಿಸಿದ ಮಾತಿನ ಮುತ್ತು]


Click it and Unblock the Notifications











