ಅನೀಶ್, ರಾಮ್ ದೀಪ್ 'ನನ್ ಲೈಫಲ್ಲಿ' ಚಿತ್ತಾರ

'ನಮ್ ಏರಿಯಾಲಿ ಒಂದಿನ', 'ಪೊಲೀಸ್ ಕ್ವಾಟ್ರಸ್' ಎಂಬೆರಡು ಚಿತ್ರಗಳಲ್ಲಿ ಈ ಮೊದಲು ಅಭಿನಯಿಸಿದ್ದ ನಟ ಅನೀಶ್ ತೇಜೇಶ್ವರ್, ನನ್ ಲೈಫಲ್ಲಿ ಚಿತ್ರದ ನಾಯಕ. ನಾಯಕಿಯಾಗಿ 'ಲೈಫು ಇಷ್ಟೇನೆ' ಖ್ಯಾತಿಯ ಸಿಂಧು ಲೋಕನಾಥ್ ಅಭಿನಯಸಿದ್ದಾರೆ. ಪ್ರಮುಖ ಪಾತ್ರಗಳಲ್ಲಿ ನಟರಾದ ಮಿತ್ರ ಹಾಗೂ ದಿಲೀಪ್ ರಾಜ್ ನಟಿಸಿದ್ದಾರೆ.
ಮಂಜು ಸ್ವರಾಜ್ ರ 'ಶಿಶಿರ' ಚಿತ್ರಕ್ಕೆ ಅಮೋಘವಾಗಿ ಸಂಗೀತ ನೀಡಿ ಪ್ರೇಕ್ಷಕರಿಂದ ಭೇಷ್ ಅನ್ನಿಸಿಕೊಂಡಿದ್ದ ಅಜನೀಶ್ ಲೋಕನಾಥ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಮನೋಹರ್ ಜೋಶಿ ಕ್ಯಾಮರಾ ಕೈಚಳಕ ಹಾಗೂ ಸಂತೋಷ್ ರಾಧಾಕೃಷ್ಣನ್ ಸಂಕಲನ ಚಿತ್ರಕ್ಕಿದೆ. ನಾಗತಿಹಳ್ಳಿ ಸಿನಿಕ್ರಿಯೇಶನ್ಸ್ ಜೊತೆ 'ರೋಡ್ ಶೋ ಸಿನಿಮಾಸ್' ಸಂಸ್ಥೆ ಸಹ ಈ ಚಿತ್ರ ನಿರ್ಮಾಣಕ್ಕೆ ಕೈಜೋಡಿಸಿದೆ.
ನಟರಾದ ರಮೇಶ್ ಅರವಿಂದ್ ಹಾಗೂ ಶ್ರೀನಗರ ಕಿಟ್ಟಿ ಈ ಚಿತ್ರದ ಒಂದು ಹಾಡಲ್ಲಿ ನರ್ತಿಸಿರುವುದು ಚಿತ್ರದ ಹೈಲೈಟ್ಸ್ ಗಳಲ್ಲಿ ಒಂದು. ಸಾಕಷ್ಟು ಹೋಮ್ ವರ್ಕ್ ಮಾಡಿಕೊಂಡು ಆತ್ಮವಿಶ್ವಾಸದಲ್ಲಿರುವ ಚಿತ್ರತಂಡ, ಚಿತ್ರದ ಪ್ರಚಾರ ಕಾರ್ಯವನ್ನು ವಿಭಿನ್ನ ರೀತಿಯಲ್ಲಿ ಮಾಡಿ ಬರುವ ತಿಂಗಳು, ಜೂನ್ ಎರಡನೇ ವಾರ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











