'ನನ್ನ ನಿನ್ನ ಪ್ರೇಮಕಥೆ' ನೋಡಲು ಇನ್ನೊಂದು ವಾರ ಕಾಯ್ಲೇಬೇಕು
ವಿಜಯ ರಾಘವೇಂದ್ರ ಮತ್ತು ನಿಧಿ ಸುಬ್ಬಯ್ಯ ಅವರು ಒಂದಾಗಿ ಕಾಣಿಸಿಕೊಂಡಿರುವ ಅದ್ಭುತ ಪ್ರೇಮಕಾವ್ಯ 'ನನ್ನ ನಿನ್ನ ಪ್ರೇಮಕಥೆ' ಜುಲೈ 8ಕ್ಕೆ ಇಡೀ ಕರ್ನಾಟಕದಾದ್ಯಂತ ತೆರೆ ಕಾಣಬೇಕಿತ್ತು.
ಆದರೆ ಕೆಲವು ಕಾರಣಗಳಿಂದ ಚಿತ್ರ ಬಿಡುಗಡೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಇದೀಗ 'ನನ್ನ ನಿನ್ನ ಪ್ರೇಮಕಥೆ' ಒಂದು ವಾರಗಳ ಮಟ್ಟಿಗೆ ಪೋಸ್ಟ್ ಪೋನ್ ಆಗಿದ್ದು, ಜುಲೈ ಎರಡನೇ ವಾರ ಅಂದ್ರೆ ಜುಲೈ 15ಕ್ಕೆ ಚಿತ್ರ ತೆರೆಗೆ ಬರಲಿದೆ.[ವಿನಯ್ ರಾಜ್ ಜೊತೆಗೆ ಪೈಪೋಟಿಗಿಳಿದ ವಿಜಯ ರಾಘವೇಂದ್ರ]

ಹಾಗೆ ನೋಡಿದರೆ ಇತ್ತೀಚೆಗೆ ಇಡೀ ಚಿತ್ರತಂಡ ಪ್ರೆಸ್ ಮೀಟ್ ಮಾಡಿ ಜುಲೈ 8ಕ್ಕೆ ಅದೇನೇ ಆದ್ರೂ ಸಿನಿಮಾ ಬಿಡುಗಡೆ ಮಾಡ್ತೀವಿ ಎಂದಿದ್ದರು. ಆದರೆ ಇದೀಗ ಕೆಲವಾರು ಬದಲಾವಣೆಗಳಿಂದ ಚಿತ್ರ ಬಿಡುಗಡೆ ಮುಂದಕ್ಕೆ ಹೋಗಿದೆ.
ಇನ್ನು ವಿಜಯ ರಾಘವೇಂದ್ರ ಅವರಿಗೆ ಇದು ವಿಶೇಷ ಸಿನಿಮಾ ಆದರೆ, ನಿಧಿ ಸುಬ್ಬಯ್ಯ ಅವರು ಲಾಂಗ್ ಗ್ಯಾಪ್ ನ ನಂತರ ಮತ್ತೆ ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಕಮ್ ಬ್ಯಾಕ್ ಆಗಿದ್ದಾರೆ.['ಪ್ರೇಮಕಥೆ'ಗೆ ಚಿಕ್ಕಣ್ಣನಿಂದ ಒಂದು ಶೋಕ ಗೀತೆ]

ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಭಾಷೆಯಲ್ಲಿ ಮಾತನಾಡಿರುವ ನಟ ವಿಜಯ ರಾಘವೇಂದ್ರ ಅವರು ತಮ್ಮ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ. ಇನ್ನುಳಿದಂತೆ ಚಿತ್ರದಲ್ಲಿ ನಟ ತಿಲಕ್ ಶೇಖರ್, ಸುಧಾ ಬೆಳವಾಡಿ, ಚಿಕ್ಕಣ್ಣ, ರಚನಾ, ಗುರುರಾಜ್ ಹೊಸಕೋಟೆ ಸೇರಿದಂತೆ ಹಲವರು ಪ್ರಮುಖ ಪಾತ್ರ ವಹಿಸಿದ್ದಾರೆ.['ನನ್ನ ನಿನ್ನ ಪ್ರೇಮಕಥೆ'ಯಲ್ಲಿ ಉಪ್ಪಿ ಮತ್ತು ಪುನೀತ್ ರ ಕಮಾಲ್]

ಇಷ್ಟುದಿನ ಗೀತರಚನೆಕಾರರಾಗಿದ್ದ ಶಿವು ಜಮಖಂಡಿ ಅವರು 'ನನ್ನ ನಿನ್ನ ಪ್ರೇಮಕಥೆ'ಗೆ ತಾವೇ ಕಥೆ-ಚಿತ್ರಕಥೆ ಬರೆದು ನಿರ್ದೇಶನದ ಜವಾಬ್ದಾರಿ ಜೊತೆಗೆ ಸಂಗೀತ ನಿರ್ದೇಶನ ಕೂಡ ಮಾಡಿದ್ದಾರೆ. ನಿರ್ಮಾಪಕ ಆನಂದ ಸಿ ನ್ಯಾಮಗೌಡ ಅವರು ಎ.ಬಿ.ಸಿನಿಮಾ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.['ನನ್ನ ನಿನ್ನ ಪ್ರೇಮಕಥೆ'ಗೆ ಪ್ರೇಮ ಪತ್ರ ಬರೆಯಿರಿ ಲಕ್ಷ ಬಹುಮಾನ ಗೆಲ್ಲಿ]

ಒಟ್ನಲ್ಲಿ ಅಪರೂಪದ ಪ್ರೇಮಕಥೆಯನ್ನು ತೆರೆ ಮೇಲೆ ನೋಡಲು ಕಾದಿದ್ದ ಅಭಿಮಾನಿಗಳು ಅನಿವಾರ್ಯವಾಗಿ ಇನ್ನೂ ಒಂದು ವಾರ ಕಾಯಲೇಬೇಕಾಗಿದೆ.


Click it and Unblock the Notifications











