»   » 125 ಕಿ.ಮೀ ಕಾಲ್ನಡಿಗೆಯಲ್ಲಿ ಸಾಗಿ ಸರ್ವಿಸ್ ಮಾಡಿದ ಶರಣ್-ಮಯೂರಿ

125 ಕಿ.ಮೀ ಕಾಲ್ನಡಿಗೆಯಲ್ಲಿ ಸಾಗಿ ಸರ್ವಿಸ್ ಮಾಡಿದ ಶರಣ್-ಮಯೂರಿ

Posted By:
Subscribe to Filmibeat Kannada

'ರಣವಿಕ್ರಮ' ಮತ್ತು 'ಜೆಸ್ಸಿ' ಚಿತ್ರದ ಯಶಸ್ಸಿನಲ್ಲಿರುವ ನಿರ್ದೇಶಕ ಪವನ್ ಒಡೆಯರ್ ಅವರು ಕಾಮಿಡಿ ಕಿಂಗ್ ಶರಣ್ ಮತ್ತು ನಟಿ ಮಯೂರಿ ಅವರನ್ನು ಸೇರಿಸಿಕೊಂಡು 'ನಟರಾಜ ಸರ್ವಿಸ್' ಸ್ಟೇಷನ್ ಓಪನ್ ಮಾಡಿರುವ ವಿಚಾರ ಎಲ್ಲರಿಗೂ ಗೊತ್ತು.

ಇದೀಗ ಚಿತ್ರದ ಶೂಟಿಂಗ್ ಕೊನೆಯ ಹಂತದವರೆಗೆ ತಲುಪಿದ್ದು, ಕೆಲವು ಹಾಡುಗಳ ಶೂಟಿಂಗ್ ಬಾಕಿ ಉಳಿದಿದೆ. ಅಂದಹಾಗೆ 'ನಟರಾಜ ಸರ್ವಿಸ್' ಚಿತ್ರತಂಡ, ನಟ ಶರಣ್ ಮತ್ತು ನಟಿ ಮಯೂರಿ ಅವರ ಜೊತೆಗೆ ಯಲ್ಲಾಪುರದ ಸುತ್ತ-ಮುತ್ತ ಶೂಟಿಂಗ್ ಗಾಗಿ ನಡೆದೇ ಕ್ರಮಿಸಿದ್ದಾರಂತೆ.[ಪವನ್ ಒಡೆಯರ್ 'ನಟರಾಜ ಸರ್ವೀಸ್' ಶೂಟಿಂಗ್ ದಿಢೀರ್ ನಿಂತಿದ್ಯಾಕೆ?]


Kannada Movie 'Nataraja Service' team walks the distance

ಸುಮಾರು 125 ಕಿ.ಮೀ ದೂರ ಕಾಲ್ನಡಿಗೆಯಲ್ಲೇ ಕ್ರಮಿಸಿ ಯಲ್ಲಾಪುರ ಸುತ್ತ-ಮುತ್ತ ಶೂಟಿಂಗ್ ಮುಗಿಸಿದ್ದು, ಚಿತ್ರೀಕರಣದ ವೇಳೆ ಕೂಡ ಕಾಲ್ನಡಿಗೆಯ ಮೂಲಕ ಸರ್ವಿಸ್ ಮಾಡಿದ್ದಾರೆ.


ಯಲ್ಲಾಪುರ ಪ್ರದೇಶಗಳಲ್ಲಿ ಪ್ರಯಾಣ ವ್ಯವಸ್ಥೆಗೆ ವಾಹನಗಳು ಸಿಗುವುದು ಕಷ್ಟಕರವಾದ್ದರಿಂದ ಆ ಪ್ರದೇಶದ ಬೇರೆ ಬೇರೆ ಜಾಗಗಳಿಗೆ ನಡೆದೇ ಹೋಗಬೇಕಾಯಿತು. ಸುಮಾರು 20 ದಿನಗಳಲ್ಲಿ 125 ಕಿ.ಮೀ ದೂರ ಕಾಲ್ನಡಿಗೆಯಲ್ಲಿ ಚಿತ್ರತಂಡ ಸಾಗಿದೆ.['ನಟರಾಜ ಸರ್ವಿಸ್' ಸ್ಟೇಷನ್ ನಲ್ಲಿ ಭರ್ಜರಿ ಟಪ್ಪಾಂಗುಚ್ಚಿ, ಡಾನ್ಸ್.!]


Kannada Movie 'Nataraja Service' team walks the distance

ಈಗಾಗಲೇ ಟಾಕಿ ಪೋರ್ಷನ್ ಪೂರ್ತಿಗೊಳಿಸಿರುವ ಚಿತ್ರತಂಡ ಹಾಡಿನ ಚಿತ್ರೀಕರಣ ಹಾಗೂ ಡಬ್ಬಿಂಗ್ ಕಾರ್ಯಕ್ಕೆ ತಯಾರಿ ನಡೆಸುತ್ತಿದೆ. ಸದ್ಯಕ್ಕೆ ನಿರ್ದೇಶಕ ಪವನ್ ಕುಮಾರ್ ಅವರಿಗೆ ಅತಿಯಾದ ಕಣ್ಣು ಬೇನೆ ಆರಂಭವಾದ ಹಿನ್ನಲೆಯಲ್ಲಿ ಶೂಟಿಂಗ್ ಗೆ ಕೆಲವು ದಿನಗಳ ಕಾಲ ಬ್ರೇಕ್ ಬಿದ್ದಿದೆ.['ನಟರಾಜ ಸರ್ವೀಸ್' ಸ್ಟೇಷನ್ ನಲ್ಲಿ ಶರಣ್ ಜೊತೆ ಮಯೂರಿ]


ದಾಂಡೇಲಿಯಲ್ಲಿ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ನಟಿ ಮಯೂರಿ ನಟ ಶರಣ್ ಮತ್ತು ನಿರ್ದೇಶಕ ಪವನ್ ಒಡೆಯರ್ ಮಾಡಿದ ಮೋಜು ಮಸ್ತಿ ನೋಡಿ ಈ ವಿಡಿಯೋದಲ್ಲಿ...


English summary
Kannada Movie 'Nataraja Service' team director Pawan Wadeyar along with lead actors Kannada Actor Sharan and Kannada Actress Mayuri walked for 125 km during the shoot that took place in and around locations of Yellapura.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada