ಯುಗಾದಿ ಹಬ್ಬಕ್ಕೆ ಬಂದ ಹೊಸ ಸಿನಿಮಾ ಪೋಸ್ಟರ್ ಗಳು
ಬೇವು ಬೆಲ್ಲದ ಯುಗಾದಿ ಹಬ್ಬವನ್ನು ಎಲ್ಲರೂ ಸಡಗರದಿಂದ ಆಚರಿಸುತ್ತಿದ್ದಾರೆ. ಹಬ್ಬದ ವಿಶೇಷವಾಗಿ ಅನೇಕ ಸಿನಿಮಾಗಳ ಪೋಸ್ಟರ್ ಗಳು ಬಂದಿವೆ.
ಸ್ಟಾರ್ ಸಿನಿಮಾಗಳ ಜೊತೆಗೆ ಹೊಸಬರ ಸಿನಿಮಾಗಳ ಪೋಸ್ಟರ್ ಗಳು ಇಂದು ಬಿಡುಗಡೆಯಾಗಿದೆ. ಈ ಮೂಲಕ ಪ್ರೇಕ್ಷಕರಿಗೆ ಹಬ್ಬದ ಶುಭಾಶಯವನ್ನು ತಿಳಿಸಿವೆ.
'ಪೈಲ್ವಾನ್', 'ಭರಾಟೆ', ಕನ್ನಡ ಗೊತ್ತಿಲ್ಲ, 'ಡಾಟರ್ ಆಫ್ ಪಾರ್ವತಮ್ಮ', 'ಪ್ರಾರಂಭ', 'ಖದರ್', 'ಯಾನ, 'ಕಾಳಿದಾಸ ಕನ್ನಡ ಮೇಷ್ಟ್ರು', 'ಜಂಟಲ್ ಮ್ಯಾನ್', 'ರವಿಚಂದ್ರ', 'ಪುಸ್ಕಟ್ಟೆ ಲೈಫ್' ಹೀಗೆ ಅನೇಕ ಸಿನಿಮಾಗಳ ಫೋಸ್ಟರ್ ಗಳು ಬಿಡುಗಡೆಯಾಗಿವೆ.

'ಪೈಲ್ವಾನ್' ಪೋಸ್ಟರ್
'ಪೈಲ್ವಾನ್' ಸಿನಿಮಾ ವಿಶೇಷ ಪೋಸ್ಟರ್ ಯುಗಾದಿ ಹಬ್ಬದ ವಿಶೇಷವಾಗಿ ಬಿಡುಗಡೆಯಾಗಿದೆ. ಇದರ ಜೊತೆಗೆ ಸುದೀಪ್ ಅವರ ಹೊಸ ಯೂ ಟ್ಯೂಬ್ ಚಾನಲ್ ಕೂಡ ಲಾಂಚ್ ಆಗಿದೆ. 'ಪೈಲ್ವಾನ್' ಕೃಷ್ಣ ನಿರ್ದೇಶನದ ಚಿತ್ರವಾಗಿದೆ. ಅಕಾಂಕ್ಷ ಸಿಂಗ್ ಚಿತ್ರದ ನಾಯಕಿಯಾಗಿದ್ದಾರೆ.

'ಭರಾಟೆ' ಸೌಂಡು
ರಚಿತಾ ರಾಮ್ 'ಭರಾಟೆ' ಸಿನಿಮಾದ ಒಂದು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಹಬ್ಬದ ವಿಶೇಷವಾಗಿ ರಚಿತಾ ರಾಮ್ ಹಾಡಿನ ಮೇಕಿಂಗ್ ಬಿಡುಗಡೆ ಮಾಡಿದ್ದಾರೆ. ಇದರೊಂದಿಗೆ ಚಿತ್ರದ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಚೇತನ್ ಕುಮಾರ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಶ್ರೀಮುರಳಿ, ಶ್ರೀಲೀಲಾ ಚಿತ್ರದಲ್ಲಿ ನಟಿಸಿದ್ದಾರೆ.

ಹರಿಪ್ರಿಯಾ ಹೊಸ ಚಿತ್ರಗಳು
ಹರಿಪ್ರಿಯಾ ನಟನೆಯ 'ಕನ್ನಡ್ ಗೊತ್ತಿಲ್ಲ' ಮತ್ತು 'ಡಾಟರ್ ಆಫ್ ಪಾರ್ವತಮ್ಮ' ಸಿನಿಮಾಗಳು ತನ್ನ ಹೊಸತನದ ಮೂಲಕ ಗಮನ ಸೆಳೆಯುತ್ತಿವೆ. 'ಡಾಟರ್ ಆಫ್ ಪಾರ್ವತಮ್ಮ'ದಲ್ಲಿ ಹರಿಪ್ರಿಯಾ ಹಾಗೂ ಸುಮಲತಾ ಅಂಬರೀಶ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಂಕರ್ ಜೆ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ. 'ಕನ್ನಡ್ ಗೊತ್ತಿಲ್ಲ'ಗೆ ಆರ್ ಜೆ ಮಯೂರ್ ಆಕ್ಷನ್ ಕಟ್ ಕೇಳಿದ್ದಾರೆ.

'ಖಡಕ್' ಆಗಿ 'ಪ್ರಾರಂಭ'
ಮನೋರಂಜನ್ ರವಿಚಂದ್ರನ್ ನಟನೆಯ ಪ್ರಾರಂಭ, ಹಾಗೂ ಧರ್ಮ ಕೀರ್ತಿರಾಜ್ ಅಭಿನಯದ 'ಖಡಕ್' ಪೋಸ್ಟರ್ ಗಳು ಸಹ ಬಿಡುಗಡೆಯಾಗಿವೆ. ಈ ಎರಡೂ ಚಿತ್ರಗಳು ಮಾಸ್ ಸಿನಿಮಾಗಳಾಗಿವೆ. ಮನು ಕಲ್ಯಾಡಿ 'ಪ್ರಾರಂಭ' ಚಿತ್ರದ ನಿರ್ದೇಶನ ಮಾಡುತ್ತಿದ್ದರೆ, 'ಖಡಕ್'ಗೆ

ಅನೇಕ ಸಿನಿಮಾಗಳ ಪೋಸ್ಟರ್ ಗಳು
ಈ ಚಿತ್ರಗಳ ಜೊತೆಗೆ 'ಯಾನ, 'ಕಾಳಿದಾಸ ಕನ್ನಡ ಮೇಷ್ಟ್ರು', 'ಜಂಟಲ್ ಮ್ಯಾನ್', 'ರವಿಚಂದ್ರ', 'ಪುಸ್ಕಟ್ಟೆ ಲೈಫ್' ಹೀಗೆ ಸಾಕಷ್ಟು ಪೋಸ್ಟರ್ ಗಳು ಇಂದು ಬಂದಿವೆ. ನವ ನಿರ್ದೇಶಕ ಶ್ರೀಧರ್ ಶಿಕಾರಿಪುರ ಅವರ ಹೊಸ ಸಿನಿಮಾದ ಮೊದಲ ಸಹ ಪೋಸ್ಟರ್ ಹೊರಬಂದಿದೆ. ಸದ್ಯಕ್ಕೆ, 'ಪ್ರೊಡಕ್ಷನ್ ನಂಬರ್ 1' ಹೆಸರಿನಲ್ಲಿ ಚಿತ್ರದ ಪೋಸ್ಟರ್ ಅನ್ನು ಹಂಚಿಕೊಳ್ಳಲಾಗಿದೆ.


Click it and Unblock the Notifications











