twitter
    For Quick Alerts
    ALLOW NOTIFICATIONS  
    For Daily Alerts

    ಪರಭಾಷೆ ಚಿತ್ರಗಳ ಹಾವಳಿ: 'ಓಲ್ಡ್ ಮಾಂಕ್' ಚಿತ್ರಕ್ಕೆ ಥಿಯೇಟರ್ ಸಮಸ್ಯೆ!

    |

    ಲಾಕ್‌ ಡೌನ್‌ ಬಳಿಕ ಕನ್ನಡದ ಸಾಲು, ಸಾಲು ಸಿನಿಮಾಗಳು ರಿಲೀಸ್ ಆಗುತ್ತಿವೆ. ಈ ವಾರ ಒಂಭತ್ತು ಚಿತ್ರಗಳು ತೆರೆಗೆ ಬಂದಿವೆ. ಆದರೆ ಹೆಸರಿಗೆ ಮಾತ್ರ ಸಿನಿಮಾಗಳು ರಿಲೀಸ್ ಆಗುತ್ತಿವೆ ಎನ್ನುವಂತಾಗಿದೆ. ಯಾಕೆಂದರೆ ರಿಲೀಸ್ ಆಗುತ್ತಿರುವ ಚಿತ್ರಗಳಿಗೆ ಚಿತ್ರಮಂದಿರಗಳ ಕೊರತೆ ಉಂಟಾಗುತ್ತಿದೆ. ಚಿತ್ರಕ್ಕೆ ಅವಶ್ಯಕ ಇರುವಷ್ಟು ಥಿಯೇಟರ್‌ಗಳು ಸಿಗುತ್ತಿಲ್ಲ.

    ಪರಭಾಷೆ ಚಿತ್ರಗಳ ಹಾವಾಳಿಯಿಂದ ಕನ್ನಡ ಚಿತ್ರಗಳಿಗೆ ತೊಂದರೆ ಆಗುತ್ತಿರುವುದು ಇದೇ ಮೊದಲೇನಲ್ಲಾ, ಈ ಹಿಂದೆಯೂ ಹಲವಾರು ಸಿನಿಮಾಗಳು ಬೇರೆ ಭಾಷೆ ಚಿತ್ರಗಳ ಹಾವಳಿಗೆ ಸಿಲುಕಿ ನರಳಾಡಿವೆ. ಈಗ ಮತ್ತದೇ ಪರಿಸ್ಥಿತಿ ಎದುರಾಗಿದೆ. ಅದರಲ್ಲೂ ಪ್ಯಾನ್‌ ಇಂಡಿಯಾ ಹೆಸರಲ್ಲಿ ರಿಲೀಸ್ ಆಗುವ ಸಿನಿಮಾಗಳು, ಹಲವು ಭಾಷೆಗಳಲ್ಲಿ ಹಲವು ಚಿತ್ರಮಂದಿರಗಳನ್ನು ಆಕ್ರಮಿಸಿ ಬಿಡುತ್ತವೆ.

    Old Monk Movie Review: ಕಾಮಿಡಿ ಪಂಚ್ ಮೂಲಕವೇ ನಶೆ ಏರಿಸುವ 'ಓಲ್ಡ್ ಮಾಂಕ್'!Old Monk Movie Review: ಕಾಮಿಡಿ ಪಂಚ್ ಮೂಲಕವೇ ನಶೆ ಏರಿಸುವ 'ಓಲ್ಡ್ ಮಾಂಕ್'!

    ಈಗ ಈ ವಿಚಾರದ ಬಗ್ಗೆ ಮಾತನಾಡಲು ಕಾರಣ ಕನ್ನಡದ 'ಓಲ್ಡ್ ಮಾಂಕ್' ಚಿತ್ರ. ಈ ಚಿತ್ರ ರಿಲೀಸ್ ಆಗಿ ಎರಡು ವಾರ ಆಗುತ್ತಿದೆ. ಈಗ ಚಿತ್ರ ತಂಡಕ್ಕೆ ದೊಡ್ಡ ಸಂಕಷ್ಟ ಎದುರಾಗಿದೆ. ಸಿನಿಮಾ ನೋಡಲು ಪ್ರೇಕ್ಷಕರು ಬಯಸಿದರೂ ಕೂಡ, ಅವರಿಗೆ ಸಿನಿಮಾ ತೋರಿಸಲು ಸಾಧ್ಯ ಆಗುತ್ತಿಲ್ಲ. ಯಾಕೆಂದರೆ ಕರ್ನಾಟಕದ ಹಲವೆಡೆ ಈ ಚಿತ್ರಕ್ಕೆ ಥಿಯೇಟರ್ ಸಿಗುತ್ತಿಲ್ಲವಂತೆ.

    'ಓಲ್ಡ್ ಮಾಂಕ್' ಚಿತ್ರಕ್ಕಿಲ್ಲ ಥಿಯೇಟರ್ ಬೇಸರಗೊಂಡ ನಟ ಶ್ರೀನಿ!

    'ಓಲ್ಡ್ ಮಾಂಕ್' ಚಿತ್ರಕ್ಕಿಲ್ಲ ಥಿಯೇಟರ್ ಬೇಸರಗೊಂಡ ನಟ ಶ್ರೀನಿ!

    'ಓಲ್ಡ್ ಮಾಂಕ್' ಚಿತ್ರಕ್ಕೆ ಥಿಯೇಟರ್‌ಗಳು ಸಿಗ್ತಿಲ್ಲವಂತೆ. ಬೇಡಿಕೆ ಇರುವ ಜಾಗಗಳಲ್ಲಿ ಹೆಚ್ಚಿನ ಚಿತ್ರಮಂದಿರಗಳಲ್ಲಿ ಚಿತ್ರವನ್ನು ಪ್ರದರ್ಶನ ಮಾಡಬೇಕೆಂದು, ಚಿತ್ರತಂಡ ಹರಸಾಹಸ ಮಾಡುತ್ತಿದೆಯಂತೆ. ಆದರೆ ಪರಭಾಷೆ ಚಿತ್ರಗಳಿಗೆ ಥಿಯೇಟರ್ ನೀಡಿರುವ ಕಾರಣಕ್ಕೆ ಕನ್ನಡದ ಈ ಚಿತ್ರಕ್ಕೆ ಸುಲಭವಾಗಿ ಚಿತ್ರಮಂದಿರಗಳು ದೊರೆಯುತ್ತಿಲ್ಲವಂತೆ. ಈ ವಿಚಾರವನ್ನು ಹಂಚಿಕೊಂಡ ಚಿತ್ರದ ನಿರ್ದೇಶಕ, ನಟ ಶ್ರೀನಿ ಬೇಸರ ವ್ಯಕ್ತಪಡಿಸಿದ್ದಾರೆ.

    ಒಂದೇ ದಿನ ಒಂಬತ್ತು ಸಿನಿಮಾ ಬಿಡುಗಡೆ: ನಿಮ್ಮ ಆಯ್ಕೆ ಯಾವುದು?ಒಂದೇ ದಿನ ಒಂಬತ್ತು ಸಿನಿಮಾ ಬಿಡುಗಡೆ: ನಿಮ್ಮ ಆಯ್ಕೆ ಯಾವುದು?

    ಟ್ವಿಟ್ಟರ್‌ನಲ್ಲಿ ಪರಿಸ್ಥಿತಿ ವಿವರಿಸಿದ ಶ್ರೀನಿ!

    ಟ್ವಿಟ್ಟರ್‌ನಲ್ಲಿ ಚಿತ್ರಕ್ಕೆ ಆಗುತ್ತಿರವ ತೊಂದರೆಯನ್ನು ಶ್ರೀನಿ ವಿವರಿಸಿದ್ದಾರೆ. "ನನಗೆ ನಿಜವಾಗಲೂ ಬೇಜಾರಾಗೋದು, ಬೇರೆ ಭಾಷೆ ಸಿನಿಮಾ ರಿಲೀಸ್ ಆಗ್ತಿದೆ ಅನ್ನೋದಲ್ಲ. ಆದ್ರೆ ಬೇರೆ ಭಾಷೆ ಸಿನಿಮಾಗಳಿಗೆ ಸಿಗೋ ಹೆಚ್ಚಿನ ಸಂಖ್ಯೆಯ ಶೋಗಳು, ಥಿಯೇಟರ್‌ಗಳು ನಮಗೆ ಸಿಗಲ್ಲ. ಅದಕ್ಕೆ ತಕ್ಕಂತೆ ಸಾಕಷ್ಟು ಜನರು ಬೇರೆ ಭಾಷೆ ಸಿನಿಮಾ ನೋಡುವುದಕ್ಕೆ ಮೊದಲು ಪ್ರಾಮುಖ್ಯತೆ ಕೊಡುತ್ತಾರೆ. ತುಂಬಾ ಜನ ಕನ್ನಡ ಸಿನಿಮಾ ಒಂದು ಚೆನ್ನಾಗಿದೆ ಅಂತ ಹೇಳಿದ ಮೇಲೆ ನಮ್ಮ ಕನ್ನಡ ಸಿನಿಮಾ ನೋಡ್ತಾರೆ. ಆದ್ರೆ ಅಷ್ಟರಲ್ಲಿ ಶೋಗಳು ಕಡಿಮೆ ಆಗುತ್ತೆ. ಚಿತ್ರಮಂದಿರಗಳಿಂದ ಚಿತ್ರ ಎತ್ತಂಗಡಿ ಆಗುತ್ತೆ. ಎಲ್ಲರಲ್ಲೂ ಒಂದು ಮನವಿ ಏನ್ ಅಂದರೆ, ನಾವು ಕೂಡ ಒಳ್ಳೆ ಸಿನಿಮಾ ಮಾಡುವ ಎಲ್ಲಾ ಕೆಪಾಸಿಟಿ ಇದೆ. ಮೊದಲ ಪ್ರಾಮುಖ್ಯತೆ ದಯಮಾಡಿ ಕನ್ನಡ ಸಿನಿಮಾಗಳ್ಳನ್ನು ನೋಡಾದ್ರಲ್ಲಿ ಇರಲಿ. ಎಂದು ಬರೆದುಕೊಂಡಿದ್ದಾರೆ.

    ಈ ವಾರವಾದರು ಸಿನಿಮಾ ನೋಡಿ ಎಂದು ಕೈ ಮುಗಿದ ಶ್ರೀನಿ!

    ಈ ವಾರವಾದರು ಸಿನಿಮಾ ನೋಡಿ ಎಂದು ಕೈ ಮುಗಿದ ಶ್ರೀನಿ!

    'ಓಲ್ಡ್ ಮಾಂಕ್' ರಿಲೀಸ್ ಆದ ಎರಡನೇ ವಾರಕ್ಕೆ ಚಿತ್ರಮಂದಿರಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಹಾಗಾಗಿ ಚಿತ್ರತಂಡ ಈವಾರವಾದರೂ ಸಿನಿಮಾ ನೋಡಿ ಎಂದು ಮನವಿ ಮಾಡಿಕೊಂಡಿದೆ. ಈ ಬಗ್ಗೆ ಸಾಲು ಸಾಲು ಟ್ವೀಟ್ ಮಾಡಿರುವ ಶ್ರೀನಿ ಕೈ ಮುಗಿದು, ದಯವಿಟ್ಟು ಸಿನಿಮಾ ನೋಡಿ ಎಂದಿದ್ದಾರೆ. "ತುಂಬಾ ಜನ ನನ್ನನು ಕರ್ನಾಟಕದ ಎಲ್ಲಾ ಕಡೆ ಯಾಕೆ ಸಿನಿಮಾ ರಿಲೀಸ್ ಮಾಡಿಲ್ಲ ಅಂತ ಕೇಳ್ತಿದಾರೆ. ಅದಕ್ಕೆ ಕಾರಣ ಸಿಂಪಲ್ ಆಗಿದೆ, ನಮಗೆ ಥೀಯೇಟರ್ ಸಿಕ್ತಿಲ್ಲ. ಬೇರೆ ಭಾಷೆ ಸಿನಿಮಾಗಳ ಮೇಲೆ ಇರೋ ನಂಬಿಕೆ ನಮ್ಮ ಕನ್ನಡ ಚಿತ್ರಗಳ ಮೇಲಿಲ್ಲ. ಚಿತ್ರ ಮೊದಲ ವಾರದಲ್ಲೇ ನೋಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಅದೇ ಟೈಮ್‌ನಲ್ಲಿ ಬೇರೆ ಭಾಷೆ ಸಿನಿಮಾಗಳನ್ನ ನೋಡಿದವರಿಗೆ ಮನವಿ. ಕಡೆಪಕ್ಷ ಈವಾರ ಆದ್ರೂ ನಮ್ಮ ಸಿನಿಮಾ ನೋಡಿ, ಇನ್ನು ಹೆಚ್ಚು ಥೀಯೇಟರ್‌ಗಳಲ್ಲಿ ಒಂದು ಒಳ್ಳೆ ಕನ್ನಡ ಚಿತ್ರ ಗೆಲ್ಲಲು ಅವಕಾಶ ಮಾಡಿಕೊಡಿ." ಎಂದು ಮನವಿ ಮಾಡಿದ್ದಾರೆ.

    ವಿಡಿಯೋ ಮೂಲಕ ಚಿತ್ರ ನೋಡುವಂತೆ ಅದಿತಿ ಮನವಿ!

    ವಿಡಿಯೋ ಮೂಲಕ ಚಿತ್ರ ನೋಡುವಂತೆ ಅದಿತಿ ಮನವಿ!

    ಚಿತ್ರತಂಡ ಸಾಕಷ್ಟು ಪ್ರಯತ್ನ ಪಟ್ಟ ಬಳಿಕ ಕರ್ನಾಟಕದಾದ್ಯಂತ 30 ಚಿತ್ರಗಳು ಹೆಚ್ಚುವರಿಯಾಗಿ ಸಿಕ್ಕಿವೆ. ಹಾಗಾಗಿ ಚಿತ್ರದ ನಾಯಕ ನಟಿ ಅದಿತಿ ಪ್ರಭುದೇವ ಕೂಡ ಸಿನಿಮಾ ನೋಡುವಂತೆ ಎಲ್ಲರಲ್ಲೂ ಮನವಿ ಮಾಡಿದ್ದಾರೆ. ವಿಡಿಯೋ ಮೂಲಕ ಮನವಿ ಮಾಡಿದ್ದಾರೆ. "ಎಲ್ಲರಿಗೂ ಧನ್ಯವಾದಗಳು, ಓಲ್ಡ್ ಮಾಕ್ ಚಿತ್ರಕ್ಕೆ ನೀವೆಲ್ಲಾ ಉತ್ತಮ ಬೆಂಬಲ ನೀಡಿದ್ದೀರಿ. ಈಗ ಕರ್ನಾಕಟದಾದ್ಯಂತ 30 ಹೆಚ್ಚು ಚಿತ್ರಮಂದಿರಗಳಲ್ಲಿ 'ಓಲ್ಡ್ ಮಾಂಕ್' ತೆರೆ ಕಾಣುತ್ತಿದೆ. ಹಾಗಾಗಿ ಎಲ್ಲರೂ ತಪ್ಪದೆ ಸಿನಿಮಾ ನೋಡಿ ಎಂದು ಅದಿತಿ ಮನವಿ ಮಾಡಿದ್ದಾರೆ.

    English summary
    Adithi Prabhudeva, Srini Strarrer Old Monk Not Getting Theaters Because Of Other Language Films, Srini Sad About It,
    Saturday, March 5, 2022, 13:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X