ಎಲ್ಲೆಡೆ ಸದ್ದು ಮಾಡ್ತಿವೆ 'ಒನ್ ಲವ್ 2 ಸ್ಟೋರಿ' ಹಾಡುಗಳು

ಇತ್ತೀಚೆಗಂತೂ ಸ್ಯಾಂಡಲ್ ವುಡ್ ನಲ್ಲಿ ನಿರ್ಮಾಣ ಆಗುತ್ತಿರುವ ಚಿತ್ರಗಳ ಶೀರ್ಷಿಕೆಗಳು ಒಂದಕ್ಕಿಂತ ಒಂದು ಆಕರ್ಷಕವಾಗಿವೆ. ಆ ಪಟ್ಟಿಗೆ ಹೊಸ ಸೇರ್ಪಡೆ 'ಒನ್ ಲವ್ 2 ಸ್ಟೋರಿ' ಸಿನಿಮಾ.

ಸದ್ಯದಲ್ಲೇ ಬಿಡುಗಡೆಯಾಗಲು ಸಿದ್ದವಾಗಿರುವ ಈ ಚಿತ್ರಕ್ಕೆ ವಸಿಷ್ಟ ಎಂಬುವರು ಆಕ್ಷನ್ ಕಟ್ ಹೇಳಿದ್ದಾರೆ. ವಸಿಷ್ಟ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದ ಹಾಡುಗಳ ಧ್ವನಿಸುರುಳಿ ಬಿಡುಗಡೆ ಸಮಾರಂಭ ಇತ್ತೀಚೆಗಷ್ಟೇ ನೆರವೇರಿತು.

ಸಂತೋಷ್, ಮನು ಈ ಚಿತ್ರದಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಇವರ ಜೊತೆ 'ಡೇಸ್ ಆಫ್ ಬೋರಾಪುರ', 'ಸದ್ದು' ಖ್ಯಾತಿಯ ಪ್ರಕೃತಿ ಹಾಗೂ ಆದ್ಯ ನಾಯಕಿಯರಾಗಿ ನಟಿಸಿದ್ದಾರೆ. ಎಸ್.ಐ.ಡಿ(ಸಿದ್ಧಾರ್ಥ್) ಸಂಗೀತ ನೀಡಿರುವ ಈ ಚಿತ್ರದ ಹಾಡುಗಳ ಸಿಡಿಯನ್ನು ನಟ ಅನಿರುದ್ಧ್ ಹಾಗೂ 'ಬಿಗ್ ಬಾಸ್' ಖ್ಯಾತಿಯ ಪ್ರಥಮ್ ಬಿಡುಗಡೆ ಮಾಡಿ ಶುಭ ಕೋರಿದರು. ಮುಂದೆ ಓದಿರಿ....

ಏನಿದು 'ಒನ್ ಲವ್ 2 ಸ್ಟೋರಿ'.?

ಏನಿದು 'ಒನ್ ಲವ್ 2 ಸ್ಟೋರಿ'.?

ಇದೇ ಮೊದಲ ಬಾರಿಗೆ ನಿರ್ದೇಶಕನಾಗಿ ಕನ್ನಡ ಚಿತ್ರರಂಗದಲ್ಲಿ ಹೊಸ ಹೆಜ್ಜೆ ಇಟ್ಟಿರುವ ವಸಿಷ್ಟ, ತಮ್ಮ ನಿರ್ದೇಶನದ 'ಒನ್ ಲವ್ 2 ಸ್ಟೋರಿ' ಚಿತ್ರದ ವಿಶೇಷತೆಗಳ ಕುರಿತಂತೆ ಮಾತನಾಡುತ್ತ, ''ನಮ್ಮ ಚಿತ್ರದ ಕಥೆಯ ಆರಂಭದಲ್ಲಿ ಮೂರು ಕಥೆಗಳು ಸಾಗಿದರೆ, ನಂತರ ದ್ವಿತೀಯಾರ್ಧದಲ್ಲಿ ಅವು ಎರಡು ಕಥೆಗಳಾಗಿ ಬದಲಾಗುತ್ತದೆ. ಅದು ಹೇಗೆ ಎಂಬುದನ್ನು ಚಿತ್ರದಲ್ಲಿ ಹೇಳಿದ್ದೇನೆ, ಅದೇ 'ಒನ್ ಲವ್ 2 ಸ್ಟೋರಿ' ಚಿತ್ರದ ವಿಶೇಷ'' ಎಂದರು.

ನಿರ್ದೇಶಕ ವಸಿಷ್ಠ ಹೇಳಿದಿಷ್ಟು.!

ನಿರ್ದೇಶಕ ವಸಿಷ್ಠ ಹೇಳಿದಿಷ್ಟು.!

''ಇತ್ತೀಚೆಗಷ್ಟೇ ನಮ್ಮ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದೆ. ನಮ್ಮ ಚಿತ್ರದ ಮೊದಲ ಹಾಡನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಬಿಡುಗಡೆ ಮಾಡಿ, ಹಾಡನ್ನು ಕೇಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೊಂದು ಸಲ ಲವ್ವಾಯ್ತು ಎಂಬ ಆ ಹಾಡನ್ನು ಸಿಂಪಲ್ ಸುನಿ ಅವರು ಬರೆದಿದ್ದಾರೆ. ನಮ್ಮ ಚಿತ್ರದಲ್ಲಿ ಹಾಡುಗಳಿಗೆ ಹಾಗೂ ಸಂಗೀತಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದೇವೆ. ಅಲ್ಲದೆ ಚಿತ್ರದ ಸಂಭಾಷಣೆಗಳಲ್ಲಿ ಫಿಲಾಸಫಿ ಜಾಸ್ತಿ ಇದೆ'' ಅಂತಾರೆ ನಿರ್ದೇಶಕ ವಸಿಷ್ಠ.

ಆಡಿಯೋ ರಿಲೀಸ್

ಆಡಿಯೋ ರಿಲೀಸ್

ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕನ್ನಡ ಸೇನೆಯ ಅಧ್ಯಕ್ಷ ಕೆ.ಆರ್. ಕುಮಾರ್, ಮುನೇಗೌಡ್ರು, ಶ್ರೀನಿವಾಸ್, ಅಲೋಕ್ ಹಾಗೂ ಇತರೆ ಗಣ್ಯರು ಭಾಗವಹಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಅನಿರುದ್ಧ್ ಏನಂದರು.?

ಅನಿರುದ್ಧ್ ಏನಂದರು.?

ಚಿತ್ರದ ಆಡಿಯೋ ಸಿಡಿ ಬಿಡುಗಡೆ ಮಾಡಿದ ನಟ ಅನಿರುದ್ಧ್ ಮಾತನಾಡಿ, ''ವಸಿಷ್ಟ ತುಂಬಾ ದೊಡ್ಡ ಜವಾಬ್ದಾರಿ ಹೊತ್ತಿದ್ದಾರೆ. ಚಿತ್ರದ ಹಾಡುಗಳನ್ನು ವಿಭಿನ್ನ ಶೈಲಿಯಲ್ಲಿ ಚಿತ್ರೀಕರಿಸಿದ್ದಾರೆ. ದೇವರು ಅವರ ಪ್ರಯತ್ನಕ್ಕೆ ಫಲ ನೀಡಲಿ'' ಎಂದು ಶುಭ ಹಾರೈಸಿದರು.

ಹೀರೋ ಸಂತೋಷ್ ಮಾತು

ಹೀರೋ ಸಂತೋಷ್ ಮಾತು

'ಒನ್ ಲವ್ 2 ಸ್ಟೋರಿ' ಚಿತ್ರದ ನಾಯಕ ನಟ ಸಂತೋಷ್ ಮಾತನಾಡಿ, ''ವಸಿಷ್ಟ ಅವರು ನನ್ನ ಮೇಲೆ ನಂಬಿಕೆಯಿಟ್ಟು ಈ ಚಿತ್ರದಲ್ಲಿ ಪಾತ್ರ ಕೊಟ್ಟಿದ್ದಾರೆ. ನನ್ನದು ಒಬ್ಬ ಕಾಲೇಜು ವಿದ್ಯಾರ್ಥಿಯ ಪಾತ್ರ, ಹುಡುಗಿಯರನ್ನು ಚುಡಾಯಿಸುವುದೇ ತನ್ನ ಜೀವನ ಅಂದುಕೊಂಡಿದ್ದವನಿಗೆ ಸೀರಿಯಸ್ ಆಗಿ ಲವ್ ಆದಾಗ ಅದು ಏನೇನು ತಿರುವುಗಳನ್ನು ತೆಗೆದುಕೊಳ್ಳುತ್ತದೆ ಅನ್ನೋದೇ 'ಒನ್ ಲವ್ 2 ಸ್ಟೋರಿ' ಚಿತ್ರದ ಕಥೆ'' ಎಂದು ಹೇಳಿಕೊಂಡರು.

More from Filmibeat

English summary
Kannada Movie One Love Two Story audio released.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X