'ಪಾತರಗಿತ್ತಿ' ಡೈಲಾಗ್ ಗಳು ಪಕ್ಕಾ ಸೂಪರ್ ಕಣೇ ಅಕ್ಕಾ
ಮಸ್ತ್ ಮಸ್ತ್ ಡೈಲಾಗ್ ಗಳು ಅಂದ್ರೆ ನೀವಂದ್ಕೊಳ್ಳೋದು, 'ಗಾಲಿ' ಅನ್ನೋ ಸಿನಿಮಾದ ಪೋಲಿ ಡೈಲಾಗ್ ಗಳೋ ಅಥವಾ ಒಂಥರಾ ಮಜವಾಗಿದೆ ಅನ್ನಿಸ್ತಿದ್ದ ಕಚಗುಳಿ ಇಡೋ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಡೈಲಾಗ್ ಗಳೋ ಅಲ್ಲ.
ಒಳ್ಳೆಯ ಸಿನಿಮಾನೇ ಕಲರ್ ಫುಲ್ಲಾಗೇ ಮಾಡಿದ್ದಾರೆ. ಕಥೇನೂ ಚೆನ್ನಾಗೇ ಇದೆ. ಆದ್ರೆ ಏನೋ ಒಂದು ವೀಕಾಗಿದೆ ಅಂಥ ತಲೆ ಕೆರೆದುಕೊಳ್ಳೋ ಕನ್ನಡ ಪ್ರೇಕ್ಷಕನಿಗೆ ನೆನಪಾಗೋ ಚಿತ್ರದಲ್ಲಿ ಒಳ್ಳೆಯ ಡೈಲಾಗ್ ಗಳಿಲ್ಲ ಅನ್ನೋದು. [ಅತ್ಯಾಚಾರಿಗಳ ಅತ್ಯಾಚಾರ ಮಾಡುತ್ತೆ 'ಪಾತರಗಿತ್ತಿ']

ಚಿತ್ರದಲ್ಲಿ ತಬಲಾ ನಾಣಿ ಮುಖ್ಯಪಾತ್ರ ಮಾಡಿದ್ದು, ಮಿತ್ರ ಸೇರಿದಂತೆ ಹಲವು ಕಾಮಿಡಿಯನ್ ಗಳಿಂದಲೂ ಮೀನಿಂಗ್ ಫುಲ್ ಡೈಲಾಗ್ ಹೇಳಿಸಿದ್ದಾರೆ ನಿರ್ದೇಶಕ ಮತ್ತು ಸಂಭಾಷಣೆಕಾರ ಈಶ್ವರ್.ಕೆ. ಸಾಧ್ಯವಾದ್ರೆ ನೀವೂ ಒಂದ್ಸಾರಿ ಟ್ರೇಲರ್ ನೋಡಿ ಹೊಸ ವರ್ಷಕ್ಕೆ ಸಿನಿಮಾ ನೋಡೋಕೆ ರೆಡಿಯಾಗಿ.
ಚಿತ್ರದಲ್ಲಿನ ಒಂದೆರಡು ಡೈಲಾಗ್ ಗಳು ಹೀಗಿವೆ. "ಲೋ ಮಗಾ ಕತ್ತೆ ಹಿಂದೆ ಬೇಕಾದರೂ ಹೋಗು, ಒಂದ್ಸಾರಿ ಒದ್ದು ಮತ್ತೆ ನನ್ನ ಹಿಂದೆ ಬರಬೇಡ ಅಂತಾ ಸೂಚನೆ ಕೊಡುತ್ತೆ. ಆದರೆ ಹುಡುಗೀರು ಹಂಗಲ್ಲ ಕಣೋ", "ಪ್ರೀತಿಯ ಹಿಂದೆ ನೀವು ಸುತ್ತೀ ಸುತ್ತೀ ಕಡೆಗೆ ಬೀಳೋದು ಕಾಮ ಅನ್ನೋ ಹಳ್ಳಕ್ಕೇ ತಾನೆ..."
"ಈ ಹುಡ್ಗೀರ್ ಮನಸ್ಸನ್ನು ಅರ್ಥ ಮಾಡಿಕೊಳ್ಳಬೇಕು ಅಂದ್ರೆ ಅದ್ಯಾವ ಯೂನಿವರ್ಸಿಟಿಯಲ್ಲಿ ಓದಬೇಕೋ ನನಗಂತೂ ಗೊತ್ತಿಲ್ಲ". "ಗಂಡು ಜೀವ ಉರಿಯೋ ದೀಪಕ್ಕೆ ಎಣ್ಣೆ ಇದ್ದಂಗೆ, ಹೆಣ್ಣು ದೀಪ ಇದ್ದಂಗೆ, ಕೊನೆಗೆ ಖಾಲಿ ಆಗೋದು ಎಣ್ಣೆ ಸುಟ್ಟೋಗೋದು ಬತ್ತಿ ಹುಷಾರು!"


Click it and Unblock the Notifications











