For Quick Alerts
  ALLOW NOTIFICATIONS  
  For Daily Alerts

  ಪಾದರಸ, ಅರಣ್ಯಕಾಂಡ ಚಿತ್ರಗಳ ಚಿತ್ರೀಕರಣ ಮುಕ್ತಾಯ

  By Bharath Kumar
  |

  'ಅರಣ್ಯಕಾಂಡ' (ದಾರಿ ಯಾವುದಯ್ಯಾ ವೈಕುಂಠಕೆ..!) ಚಿತ್ರದ ಚಿತ್ರೀಕರಣ ಸದ್ದು ಗದ್ದಲವಿಲ್ಲದೆ ಪೂರೈಸಿದೆ. ರಘುನಂದನ್ ಎಸ್ ನಿರ್ದೇಶನದ ಈ ಚಿತ್ರಕ್ಕೆ ಹೇಮಂತ್ ಜೋಯಿಸ್ ಸಂಗೀತ ನೀಡಿದ್ದಾರೆ. ಅಮರ್, ಅರ್ಚನ ಕೊಟ್ಟಿಗೆ, ಗುರುರಾಜ್ ಶೆಟ್ಟಿ, ಪವನ್ ದಾಮೋದರ್, ಆಯುಶ್ ಸೇರಿದಂತೆ ಹಲವರು ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.

  ನಾಯಕ ಒಬ್ಬ ಸಾಮಾನ್ಯ, ಆದರೆ ಬುದ್ದಿವಂತ ಕಳ್ಳ, ನಾಯಕಿ ವಾರಪತ್ರಿಕೆಯೊಂದರಲ್ಲಿ ಪತ್ರಕರ್ತೆ, ಕಾಡಿನಲ್ಲಿ ಹುದುಗಿರುವ ವಿಷಯದ ಮಾಹಿತಿ ದೊರಕುತ್ತದೆ. ಅದರ ಬೆನ್ನಟ್ಟಲು ನಾಯಕ ಜನರ ತಂಡವೊಂದನ್ನು ರಚಿಸಿ ಹುಡುಕಾಟಕ್ಕೆ ಹೊರಡುತ್ತಾನೆ. ಅಲ್ಲಿ ಜರುಗುವ ನೋವು-ನಲಿವು ಹತಾಶೆಗಳ ಯಥಾವತ್ ಚಿತ್ರಣ ವೈಭವೀಕರಸಿದೆ ನೈಜವಾಗಿ ಚಿತ್ರಿಸಲಾಗಿದೆ.

  'ಪಾದರಸ' ಮೊದಲ ಪ್ರತಿ ಸಿದ್ದ
  "ಪಾದರಸ" ಚಿತ್ರದ ಪ್ರಥಮ ಪ್ರತಿ ಸಿದ್ಧವಾಗಿದ್ದು ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈ ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ಹೃಷಿಕೇಶ್ ಜಂಬಗಿ ನಿರ್ದೇಶನ ಮಾಡಿದ್ದಾರೆ.

  ಸಂಚಾರಿ ವಿಜಯ್, ವೈಷ್ಣವಿ ಮೆನನ್, ಮನಸ್ವಿನಿ, ನಿರಂಜನ್ ದೇಶಪಾಂಡೆ, ಜೈಜಗದೀಶ್, ಚಿ.ಗುರುದತ್, ಶೋಭರಾಜ್, ಭವ್ಯ, ಹನುಮಂತೇಗೌಡ, ವಿಜಯ್ ಚೆಂಡೂರ್, ರವಿಕಲ್ಯಾಣ್, ಮುಂತಾದವರಿದ್ದಾರೆ.

  'ವಜ್ರಮುಖಿ' ಗೆ ಡಿಟಿಎಸ್
  ಶಶಿಕುಮಾರ್ ಕಥೆ-ಚಿತ್ರಕಥೆ ಬರೆದು ನಿರ್ಮಾಣ ಮಾಡಿರುವ 'ವಜ್ರಮುಖಿ' ಚಿತ್ರಕ್ಕೆ ರಾಜೇಶ್ ರಾಮನಾಥ್ ಸ್ಟುಡಿಯೋವಿನಲ್ಲಿ ಡಿಟಿಎಸ್ ಹಾಗೂ ಸ್ಪೆಷಲ್ ಎಫೆಕ್ಟ್ ಕಾರ್ಯ ಪೂರ್ಣಗೊಂಡಿದೆ.

  ನೀತು, ದಿಲೀಪ್ ಪೈ, ಸಂಜನಾ, ಶೋಭಿತಾ, ಪ್ರಕಾಶ್ ಹೆಗ್ಗೋಡು, ರವಿಕಿರಣ್, ನೇಹಾ, ರಾಘವೇಂದ್ರ ರೈ, ಶಶಿಕುಮಾರ್, ಅನಿಲ್ ಕುಮಾರ್, ಸ್ವಪ್ನಶ್ರೀ, ಕು||ಪ್ರೇಕ್ಷಾ ಮುಂತಾದವರಿದ್ದಾರೆ. ಇವರು ಈ ಹಿಂದೆ ಸಿಗಂದೂರು ಚೌಡೇಶ್ವರಿ ಮಹಿಮೆ ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದ್ದರು.

  English summary
  Kannada movie Padarasa shooting is complete. the movie directed by rushikesh jambagi and also starrer sanchari vijay in lead role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X