»   » ಅತ್ಯಾಚಾರಿಗಳ ಅತ್ಯಾಚಾರ ಮಾಡುತ್ತೆ 'ಪಾತರಗಿತ್ತಿ'

ಅತ್ಯಾಚಾರಿಗಳ ಅತ್ಯಾಚಾರ ಮಾಡುತ್ತೆ 'ಪಾತರಗಿತ್ತಿ'

Posted By:
Subscribe to Filmibeat Kannada

'ಒಲವೇ ಮಂದಾರ' ಶ್ರೀಕಿ ಅಭಿನಯದ ಚಿತ್ರ 'ಪಾತರಗಿತ್ತಿ' ಸ್ಯಾಂಡಲ್ ವುಡ್ ಪ್ರೇಕ್ಷಕರ ಕಣ್ಮನ ಸೆಳೆಯೋಕೆ ತೆರೆಗೆ ಬರ್ತಿದೆ. ಪಾತರಗಿತ್ತಿ ಚಿತ್ರದ ಟೈಟಲ್ ಡಿಸೈನ್ ಎಲ್ಲರಿಂದಲೂ ಪ್ರಶಂಸೆ ಪಡ್ಕೋತಿದೆ. ಟೈಟಲ್ ಮಾತ್ರ ಅಲ್ಲ ಈಶ್ವರ್ ನಿರ್ದೇಶನ ಮಾಡ್ತಿರೋ ಚಿತ್ರದ ತಿರುಳು ಕೂಡ ಅಷ್ಟೇ ಸುಂದರವಾಗಿದೆ.

ಅವ್ಯಾಹತವಾಗಿ ನಡೀತಾ ಇರೋ ಅತ್ಯಾಚಾರಗಳ ಹಿಂದಿನ ಮರ್ಮ ಮತ್ತು ಅದಕ್ಕೊಂದು ಪಕ್ಕಾ ಪರಿಹಾರ ಇವೆರಡನ್ನೂ ಚಿತ್ರದ ಕಥೆಯಲ್ಲಿ ನೀಡಲಾಗಿದೆಯಂತೆ. ಅತ್ಯಾಚಾರಿಗಳ ಎದೆ ಝಲ್ಲೆನಿಸುವ ಒಂದು ಶಾಕ್ ಟ್ರೀಟ್ಮೆಂಟ್ ಚಿತ್ರದಲ್ಲಿರಲಿದೆಯಂತೆ.

Kannada movie Pataragitti ready for release

ಒಂದು ಸುಂದರ ಪ್ರೇಮಕಥೆಯ ಜೊತೆ ಕಾಡುವ ಸೆಂಟಿಮೆಂಟ್ ಕೂಡ ಪಾತರಗಿತ್ತಿಯ ಹೈಲೈಟ್ ಎನ್ನುತ್ತದೆ ಚಿತ್ರತಂಡ. ಶ್ರೀಕಿಗೆ ಕೊಡಗಿನ ಬೆಡಗಿ ಪ್ರಜ್ಜೂ ಪೂವಯ್ಯ ಜೋಡಿಯಾಗಿದ್ದು ತಬಲಾನಾಣಿ ಇಲ್ಲೊಂದು ಮರೆಯಲಾಗದ ಪಾತ್ರ ಮಾಡಿದ್ದಾರೆ.

ಅತ್ಯಾಚಾರಿಗಳನ್ನ ಬೆತ್ತಲಾಗಿಸೋ ಚಿತ್ರದ ಆಡಿಯೋ ರಿಲೀಸ್ ನಡೆದಿದ್ದು ಹಾಡುಗಳೂ ಕೂಡ ಚಿತ್ರಪ್ರೇಮಿಗಳಿಗೆ ಮೋಡಿ ಮಾಡ್ತಿವೆ. ಚಿತ್ರ ಡಿಸೆಂಬರ್ ನಲ್ಲಿ ತೆರೆಗೆ ಬರಲಿದ್ದು ವಿಭಿನ್ನ ಕಥೆಯ ಮೂಲಕ ನಿರೀಕ್ಷೆ ಹುಟ್ಟಿಸ್ತಿದೆ.

English summary
Kannada movie Pataragitti all set to ready for release. The movie had a story of rape incidents and solution to them. The movie is directed by K Eshwar. The film also has Shanthamma, Lucky Shankar, Tabla Nani, Bullet Prakash and Lyendra in significant roles.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada