ಅನಂತ್ 'ಪ್ಲಸ್' ಚಿತ್ರಕ್ಕೆ ಸೆನ್ಸಾರ್ ನಿಂದ ಪಾಸಿಟಿವ್ ಪ್ರತಿಕ್ರಿಯೆ

By Suneetha

'ದ್ಯಾವ್ರೇ' ಚಿತ್ರದ ಖ್ಯಾತಿಯ ನಿರ್ದೇಶಕ ಗಡ್ಡಾ ವಿಜಿಯವರ ಹೊಸ 'ಪ್ಲಸ್' ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯಾವುದೇ ರೀತಿಯಲ್ಲೂ ಕತ್ತರಿ ಹಾಕದೆ ತಥಾಸ್ತು ಎಂದಿದೆ.

ಹೌದು ಖ್ಯಾತ ನಿರ್ದೇಶಕ ಹಾಗು ಫೇಮಸ್ ಸಾಹಿತ್ಯ ಬರಹಗಾರ ಯೋಗರಾಜ ಭಟ್ಟರನ್ನೇ ನಟನಾ ಕ್ಷೇತ್ರಕ್ಕೆ ಇಳಿಸಿದ ನಿರ್ದೇಶಕ ಗಡ್ಡಾ ವಿಜಿಯವರ ಈ ವರ್ಷದ ಬಹುನಿರೀಕ್ಷಿತ ಚಿತ್ರ 'ಪ್ಲಸ್' ಗೆ ಸೆನ್ಸಾರ್ ಮಂಡಳಿ ಯಾವುದೇ ಕಟ್ಸ್ ನೀಡದೆ ಯು/ಎ ಪ್ರಮಾಣ ಪತ್ರ ನೀಡುವ ಮೂಲಕ ಪಾಸಿಟಿವ್(+) ರೆಸ್ಪಾನ್ಸ್ ಕೊಟ್ಟಿದೆ.

ಆರು ಥರದ ಸೈಕಾಲಾಜಿಕಲ್ ಸಮಸ್ಯೆಗಳನ್ನು ಹೈಲೈಟ್ ಮಾಡುವ 'ಪ್ಲಸ್' ಚಿತ್ರದಲ್ಲಿ ಸ್ಯಾಂಡಲ್ ವುಡ್ ನ ಎವರ್ ಗ್ರೀನ್ ನಟ ಅನಂತ್ ನಾಗ್ ಅವರು ವಿಚಿತ್ರವಾಗಿ ಕಾಣಿಸಿಕೊಳ್ಳುವ ಮೂಲಕ ವಿಶೇಷ ಪಾತ್ರದಲ್ಲಿ ಮಿಂಚಿದ್ದಾರೆ. ['ಅನಂತ್ ನಾಗ್ ಗೆ ಡಿಫರೆಂಟ್ ಲುಕ್ ಕೊಟ್ಟ ಹೆಗ್ಗಳಿಕೆ ನನ್ನದು']

ಬಹಳ ದಿನಗಳ ನಂತರ ಚೇತನ್ ಚಂದ್ರ ಅವರು '+' ಸಿನಿಮಾದ ಮೂಲಕ ತಮ್ಮ ಅದೃಷ್ಟ ಪರೀಕ್ಷೆ ಮಾಡಲು ಹೊರಟಿದ್ದಾರೆ. ಜೊತೆಗೆ ರಿತೇಶ್, ಐಶಾನಿ ಶೆಟ್ಟಿ, ಶಾಲಿನಿ, ಮುಂತಾದವರು '+' ಮೂಲಕ ಡಿಫರೆಂಟಾಗಿ ತೆರೆಯ ಮೇಲೆ ಮಿಂಚಲಿದ್ದಾರೆ.

ನಿರ್ದೇಶಕ ಗಡ್ಡಾ ವಿಜಿಯವರು 'ದ್ಯಾವ್ರೇ' ಚಿತ್ರದ ನಂತರ ಅದರ ಛಾಯೆ ಎಲ್ಲೂ ಕಾಣಬಾರದು ಜೊತೆಗೆ ಸಿನಿಮಾವನ್ನು ಡಿಫರೆಂಟ್ ಲುಕ್ ನಲ್ಲಿ ಮಾಡಬಹುದು ಅಂತ ಯೋಚಿಸಿ 'ಪ್ಲಸ್' ಚಿತ್ರವನ್ನು ಕೊಂಚ ಡಿಫರೆಂಟಾಗೇ ಮಾಡಿದ್ದಾರೆ. ['ಪ್ಲಸ್; ಚಿತ್ರದಲ್ಲಿ ಮೈನಸ್ ಇಲ್ವೆ, ಇಲ್ವಂತೆ!!]

ಯೋಗರಾಜ್ ಮೂವೀಸ್ ನಲ್ಲಿ ನಿರ್ಮಾಣಗೊಳ್ಳುತ್ತಿರುವ ಸೈಕಾಲಾಜಿಕಲ್ ಥ್ರಿಲ್ಲರ್ '+' ಚಿತ್ರದಲ್ಲಿ ಸಖತ್ ಬ್ಯೂಟಿಫುಲ್ ಹಾಗೂ ಧಮಾಕೇದಾರ್ 'ಸಂಡೇ ಬಂತು', 'ಸರಿ ತಪ್ಪು ಕೇಳದ ಮೋಹ' ಮುಂತಾದ ಹಾಡುಗಳಿವೆ. ಚಿತ್ರದ ಹಾಡುಗಳಿಗೆ ವಿ.ಜೆ ಭರತ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

ಇನ್ನುಳಿದಂತೆ ಸುಧಾರಾಣಿ, ರವಿಶಂಕರ್, ಚೇತನ್ ಚಂದ್ರ, ರಾಜೇಶ್ ನಟರಂಗ್, ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.[ಅನಂತ್ ನಾಗ್ 'ಪ್ಲಸ್' ಆ ಇನ್ನಿಬ್ಬರು ಯಾರು?]

ಒಟ್ನಲ್ಲಿ 'ರಂಗಿತರಂಗ'ದ ನಂತರ '+' ಅಂತ ಮತ್ತೊಂದು ಥ್ರಿಲ್ಲರ್ ಚಿತ್ರ ತೆರೆ ಮೇಲೆ ಅಪ್ಪಳಿಸಲಿದ್ದು, ಅಭಿಮಾನಿಗಳಿಗೆ ಧಮಾಕೇದರ್ ಸೆಪ್ಟೆಂಬರ್ ಆಗೋದು ಗ್ಯಾರಂಟಿ. ಸೆಪ್ಪೆಂಬರ್ 18 ರಂದು ಚಿತ್ರ ಬಿಡುಗಡೆಗೊಳ್ಳಲಿದೆ.

More from Filmibeat

English summary
Kannada movie 'Plus' gets U/A Certificate from the Censor Board. 'Plus' features Kannada actor Anant Nag, Actress Aishani Shetty, Actor Chetan Chandra in the lead role. The movie is directed by Gadda Viji.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X