ನಾಳೆ ಸಿನಿ ಹಬ್ಬ: ಹಬ್ಬಕ್ಕೆ ಬರ್ತಾರೆ ಶಿವಣ್ಣ, ದರ್ಶನ್, ಸುದೀಪ್, ರವಿಚಂದ್ರನ್

Recommended Video

ಹಬ್ಬಕ್ಕೆ ಬರ್ತಾರೆ ಶಿವಣ್ಣ,ದರ್ಶನ್, ಸುದೀಪ್, ರವಿಚಂದ್ರನ್ | SHIVRAJKUMAR | SUDEEP | DARSHAN | RAVICHANDRAN

ನಾಳೆ (ಜನವರಿ 14) ಸಂಕ್ರಾಂತಿ ಹಬ್ಬದ ವಿಶೇಷವಾಗಿ ಕನ್ನಡದ ಹೊಸ ಹೊಸ ಸಿನಿಮಾಗಳ ಕಡೆಯಿಂದ ವಿಶೇಷ ಉಡುಗೊರೆಗಳು ಅಭಿಮಾನಿಗಳಿಗೆ ಸಿಗುತ್ತಿದೆ. ಈ ಬಾರಿಯ ಹಬ್ಬದ ಖುಷಿಯನ್ನು ಶಿವಣ್ಣ, ದರ್ಶನ್, ಸುದೀಪ್, ರವಿಚಂದ್ರನ್, ಪ್ರೇಮ್ ಹೆಚ್ಚು ಮಾಡಲಿದ್ದಾರೆ.

ಶಿವರಾಜ್ ಕುಮಾರ್ ಅಭಿನಯದ 'ಭಜರಂಗಿ 2' ಸಿನಿಮಾದ ಪೋಸ್ಟರ್ ಬಿಡುಗಡೆಯಾಗಲಿದೆ. ಸಿನಿಮಾದ ಮೊದಲ ಪೋಸ್ಟರ್ ಇದಾಗಿದೆ. ನಿರ್ದೇಶಕ ಹರ್ಷ ಹಾಗೂ ಶಿವರಾಜ್ ಕುಮಾರ್ ಕಾಂಬಿನೇಶನ್ ನ ಹ್ಯಾಟ್ರಿಕ್ ಸಿನಿಮಾ ಇದಾಗಿದೆ.

'ರಾಬರ್ಟ್' ಚಿತ್ರದ ಮತ್ತೊಂದು ಪೋಸ್ಟರ್ ರಿಲೀಸ್ ಆಗಲಿದೆ. ದರ್ಶನ್, ಆಶಾ ಭಟ್ ಚಿತ್ರದಲ್ಲಿ ನಟಿಸಿದ್ದಾರೆ. ತರುಣ್ ಸುಧೀರ್ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ಉಮಾಪತಿ ಚಿತ್ರದ ನಿರ್ಮಾಪಕ.

Kannada movie posters and songs releasing for Sankranti

ಸುದೀಪ್ ನಟನೆಯ 'ಕೋಟಿಗೊಬ್ಬ 3' ಸಿನಿಮಾದ ಮೋಷನ್ ಪೋಸ್ಟರ್ ಕೂಡ ಹಬ್ಬದ ವಿಶೇಷವಾಗಿ ರಿಲೀಸ್ ಆಗಲಿದೆ. ಚಿತ್ರದ ಮೊದಲ ಪೋಸ್ಟರ್ ಇದಾಗಿದೆ.

ರವಿಚಂದ್ರನ್ ನಟನೆಯ 'ರವಿ ಬೋಪಣ್ಣ' ಸಿನಿಮಾದ ಟೀಸರ್ ನಾಳೆ ರಿಲೀಸ್ ಆಗುತ್ತಿದೆ. ಈ ಸಿನಿಮಾದ ನಿರ್ದೇಶಕವನ್ನು ಕ್ರೇಜಿಸ್ಟಾರ್ ಅವರೇ ಮಾಡಿದ್ದಾರೆ.

ಇದರೊಂದಿಗೆ ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ' ಸಿನಿಮಾದ ಹಾಡು ಸಹ ಸಂಕ್ರಾತಿಗೆ ಬರುತ್ತಿದೆ. ರಕ್ಷಿತಾ ಸಹೋದರ ರಾಣಾ ಈ ಸಿನಿಮಾದ ಮೂಲಕ ಲಾಂಚ್ ಆಗುತ್ತಿದ್ದಾರೆ.

More from Filmibeat

English summary
Kannada Movie Posters And Songs Releasing For Sankranti.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X