ಸಿನಿ ಪ್ರಿಯರಿಗಾಗಿ ಬಂದ ಹಬ್ಬದ ಉಡುಗೊರೆಗಳು

ದೀಪಾವಳಿ ಹಬ್ಬದ ಸಂಭ್ರಮ ಎಲ್ಲೆಡೆ ಜೋರಾಗಿದೆ. ಆದರೆ, ಸಿನಿಮಾ ಮಂದಿಗೆ ನಿಜವಾದ ದೀಪಾವಳಿ ಹಬ್ಬ ಬರುವುದು ಸಿನಿಮಾ ಹಿಟ್ ಆದಾಗ. ಹೀಗಿರುವಾಗ ಕನ್ನಡದ ಅನೇಕ ಚಿತ್ರತಂಡಗಳು ಈ ಹಬ್ಬವನ್ನು ತಮ್ಮ ಸಿನಿಮಾಗಳ ಜೊತೆಗೆ ಆಚರಣೆ ಮಾಡಿವೆ.

'ಎಸ್ ಆರ್ ಕೆ', 'ಸೀತಾರಾಮ ಕಲ್ಯಾಣ' 'ಆದಿ ಲಕ್ಷ್ಮಿ ಪುರಾಣ', 'ಡಾಟರ್ ಆಫ್ ಪಾರ್ವತಮ್ಮ', 'ಯಾನ', 'D 53' ಹೀಗೆ ಸಾಲು ಸಾಲು ಕನ್ನಡದ ಹೊಸ ಸಿನಿಮಾಗಳ ಹೊಸ ಪೋಸ್ಟರ್ ಗಳು ಹಬ್ಬದ ವಿಶೇಷವಾಗಿ ಅಭಿಮಾನಿಗಳ ಮುಂದೆ ಬಂದಿದೆ.

ದೀಪಾವಳಿಗೆ ಪಟಾಕಿಯ ರೀತಿ ಸೌಂಡ್ ಮಾಡುತ್ತಿರುವ ಈ ಸಿನಿಮಾಗಳ ಪೋಸ್ಟರ್ ಗಳು ಮುಂದಿವೆ ನೋಡಿ...

D 53

D 53

ನಟ ದರ್ಶನ್ ಹಾಗೂ ನಿರ್ದೇಶಕ ತರುಣ್ ಸುಧೀರ್ ಕಾಂಬಿನೇಶನ್ ನಲ್ಲಿ ಬರುತ್ತಿರುವ ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿದೆ. ದೀಪಾವಳಿ ಹಬ್ಬದ ವಿಶೇಷವಾಗಿ ನಿನ್ನೆ ಸಂಜೆ 6 ಗಂಟೆಗೆ ರಿಲೀಸ್ ಆದ ಪೋಸ್ಟರ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ''ಈ ಕೈಗೆ ಶಬರಿ ಮುಂದೆ ಸೋಲೋದು ಗೊತ್ತು, ರಾವಣನ ಮುಂದೆ ಗೊಲ್ಲೋದು ಗೊತ್ತು'' ಎಂಬ ಸಾಲು ಎಲ್ಲರಿಗೆ ಇಷ್ಟವಾಗಿದೆ.

ಎಸ್ ಆರ್ ಕೆ

ಎಸ್ ಆರ್ ಕೆ

ಶಿವಣ್ಣನ 'ಎಸ್ ಆರ್ ಕೆ' ಸಿನಿಮಾದ ಹೊಸ ಪೋಸ್ಟರ್ ದೀಪಾವಳಿಗೆ ಬಿಡುಗಡೆಯಾಗಿದೆ. ರಾಜ್ ಕುಟುಂಬದವರೇ ಆದ ಲಕ್ಕಿ ಗೋಪಾಲ್ ಈ ಚಿತ್ರದ ನಿರ್ದೇಶಕರಾಗಿದ್ದು, ಕಿರಣ್ ಕುಮಾರ್ ಸಿ ಗೌಡ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ. 'ಮಫ್ತಿ' ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದ ನವೀನ್ ಕುಮಾರ್ ಕ್ಯಾಮರಾ ಕೆಲಸವನ್ನು ನಿಭಾಯಿಸುತ್ತಿದ್ದಾರೆ.

ಸೀತಾರಾಮ ಕಲ್ಯಾಣ

ಸೀತಾರಾಮ ಕಲ್ಯಾಣ

ನಟ ನಿಖಿಲ್ ಕುಮಾರ್ ಹಾಗೂ ರಚಿತಾ ರಾಮ್ ಅಭಿನಯದ 'ಸೀತಾರಾಮ ಕಲ್ಯಾಣ' ಸಿನಿಮಾದ ಎರಡು ಹೊಸ ಲುಕ್ ಗಳು ಹೊರಬಂದಿದೆ. ಸ್ಟೈಲಿಷ್ ಲುಕ್ ನಲ್ಲಿ ನಿಖಿಲ್, ರಚಿತಾ ಕಾಣಿಸಿಕೊಂಡಿದ್ದಾರೆ. ಎ ಹರ್ಷ ಈ ಚಿತ್ರದ ನಿರ್ದೇಶನ ಮಾಡುತ್ತಿದ್ದು, ಅನಿತಾ ಕುಮಾರಸ್ವಾಮಿ ಸಿನಿಮಾದ ನಿರ್ಮಾಣ ಮಾಡುತ್ತಿದ್ದಾರೆ.

ಆದಿ ಲಕ್ಷ್ಮಿ ಪುರಾಣ

ಆದಿ ಲಕ್ಷ್ಮಿ ಪುರಾಣ

ನಟಿ ರಾಧಿಕಾ ಪಂಡಿತ್ ಮದುವೆಯ ನಂತರ ನಟಿಸುತ್ತಿರುವ ಮೊದಲ ಸಿನಿಮಾ 'ಆದಿ ಲಕ್ಷ್ಮಿ ಪುರಾಣ'. ಇದೀಗ ಈ ಸಿನಿಮಾ ಮೊದಲ ಪೋಸ್ಟರ್ ರಿಲೀಸ್ ಆಗಿದೆ. ಪ್ರಿಯಾ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ರಾಕ್ ಲೈನ್ ವೆಂಕಟೇಶ್ ಬ್ಯಾನರ್ ನಲ್ಲಿ ಸಿನಿಮಾ ಮೂಡಿ ಬರುತ್ತಿದೆ.

ಡಾಟರ್ ಆಫ್ ಪಾರ್ವತಮ್ಮ

ಡಾಟರ್ ಆಫ್ ಪಾರ್ವತಮ್ಮ

'ಡಾಟರ್ ಆಫ್ ಪಾರ್ವತಮ್ಮ' ಚಿತ್ರ ಹರಿಪ್ರಿಯಾ ಅವರ 25ನೇ ಸಿನಿಮಾವಾಗಿದೆ. ಈ ಸಿನಿಮಾದ ಹೊಸ ಪೋಸ್ಟರ್ ಇಂದು ಬಿಡುಗಡೆಯಾಗಿದೆ. ಮೊದಲ ಬಾರಿಗೆ ಹರಿಪ್ರಿಯಾ ತನಿಖಾಧಿಕಾರಿ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ಚಿತ್ರದ ಪ್ರತಿ ಪೋಸ್ಟರ್ ಗಳು ನೋಡುಗರ ಗಮನ ಸೆಳೆಯುತ್ತಿವೆ. ಪಾರ್ವತಮ್ಮನ ಪಾತ್ರದಲ್ಲಿ ಸುಮಲತಾ ಅಂಬರೀಶ್ ನಟಿಸುತ್ತಿದ್ದಾರೆ.

ಯಾನ

ಯಾನ

ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಅವರ ಮೂರು ಪುತ್ರಿಯರು ನಟಿಸಿರುವ 'ಯಾನ' ಸಿನಿಮಾದ ಹೊಸ ಪೋಸ್ಟರ್ ರಿಲೀಸ್ ಆಗಿದೆ. ಬಾಲಿವುಡ್ ಚಿತ್ರದ ರೀತಿ ಸಿನಿಮಾ ಪೋಸ್ಟರ್ ಇದೆ. ವೈನಿಧಿ, ವೈಸಿರಿ ಹಾಗೂ ವೈಭವಿ ಸಿನಿಮಾದ ನಾಯಕಿಯರಾಗಿದ್ದಾರೆ.

More from Filmibeat

English summary
kannada movie posters released on the occasion of deepavali.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X