ಪ್ರೇಮಿಗಳ ದಿನಕ್ಕೆ ಮುತ್ತಿನ ಮಳೆ ಸುರಿಸಿದ ತಾರೆಯರು
Recommended Video
ನಿನ್ನೆ (ಫೆಬ್ರವರಿ 14) ಪ್ರೇಮಿಗಳ ದಿನದ ವಿಶೇಷವಾಗಿ ಕನ್ನಡದ ಅನೇಕ ಸಿನಿಮಾದ ಪೋಸ್ಟರ್ ಗಳು ಟೀಸರ್ ಗಳು ಬಂದವು. ಅದರಲ್ಲಿ ಬಹುತೇಕ ಸಿನಿಮಾಗಳ ಪೋಸ್ಟರ್ ಗಳು ಮುತ್ತಿನ ದೃಶ್ಯವೇ ಆಗಿವೆ.
ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ' ಸಿನಿಮಾದ ಲಿಪ್ ಕಿಸ್ ದೊಡ್ಡ ಸುದ್ದಿ ಮಾಡುತ್ತಿದೆ. ಚಿತ್ರದ ಒಂದು ಕಿಸ್ಸಿಂಗ್ ದೃಶ್ಯದಲ್ಲಿ ರಚಿತಾ ರಾಮ್ ಹಾಗೂ ರಾಣಾ ಕಾಣಿಸಿಕೊಂಡಿದ್ದಾರೆ.
'ಮೆಲೊಬ್ಬ ಮಾಯಾವಿ' ಸಿನಿಮಾದ ಪೋಸ್ಟರ್ ಸಹ ಪ್ರೇಮಿಗಳ ದಿನಕ್ಕೆ ಹೊರಬಂದಿದೆ. ನಟ ಸಂಚಾರಿ ವಿಜಯ್ ಹಾಗೂ ಅನನ್ಯ ಶೆಟ್ಟಿ ನಡುವಿನ ಮುತ್ತಿನ ಪೋಟೋ ಪೋಸ್ಟರ್ ನಲ್ಲಿದೆ. ಬಿ ನವೀನ್ ಕೃಷ್ಣ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಂದ್ರಚೂಡ್ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

'ಶಿವ 143' ಸಿನಿಮಾದ ಪೋಸ್ಟರ್ ಕೂಡ ನಿನ್ನೆ ಬಿಡುಗಡೆಯಾಗಿದೆ. ಈ ಪೋಸ್ಟರ್ ನಲ್ಲಿ ನಟ ಧೀರೇನ್ ರಾಜ್ಕುಮಾರ್ ಹಾಗೂ ಮಾನ್ವಿತಾ ಕಾಮತ್ ನಡುವಿನ ಕಿಸ್ಸಿಂಗ್ ದೃಶ್ಯವಿದೆ. ಇದು ತೆಲುಗಿನ 'ಆರ್ ಎಕ್ಸ್ 100' ರಿಮೇಕ್ ಆಗಿದ್ದು, ಅನಿಲ್ ನಿರ್ದೇಶನ ಮಾಡುತ್ತಿದ್ದಾರೆ.

ಮನು ರಂಜನ್ ನಟನೆಯ 'ಮುಗಿಲ್ ಪೇಟೆ' ಸಿನಿಮಾ ಕೂಡ ಇದೇ ರೀತಿಯ ಪೋಸ್ಟರ್ ಬಿಡುಗಡೆ ಮಾಡಿದೆ. ಭರತ್ ಎಸ್ ನಾವುಂದ ಆಕ್ಷನ್ ಕಟ್ ಹೇಳಿದ್ದಾರೆ.


Click it and Unblock the Notifications











