»   » ದಿನೇಶ್ ಬಾಬು ನಿರ್ದೇಶನದ 'ಪ್ರಿಯಾಂಕ' ಬಿಡುಗಡೆ ಮುಂದಕ್ಕೆ!

ದಿನೇಶ್ ಬಾಬು ನಿರ್ದೇಶನದ 'ಪ್ರಿಯಾಂಕ' ಬಿಡುಗಡೆ ಮುಂದಕ್ಕೆ!

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಪತ್ನಿ ಪ್ರಿಯಾಂಕ ಉಪೇಂದ್ರ ನಟಿಸಿರುವ 'ಪ್ರಿಯಾಂಕ' ಸಿನಿಮಾ ಇದೇ ತಿಂಗಳು ನಿಮ್ಮ ಮುಂದೆ ಬರಲಿದೆ ಅಂತ ಸುದ್ದಿ ಆಗಿತ್ತು. ಆದ್ರೀಗ, ಅನಿವಾರ್ಯ ಕಾರಣಗಳಿಂದ 'ಪ್ರಿಯಾಂಕ' ಚಿತ್ರ ಬಿಡುಗಡೆ ಮುಂದಕ್ಕೆ ಹೋಗಿದೆ.

ಎಲ್ಲವೂ ಪ್ಲಾನ್ ಪ್ರಕಾರ ನಡೆದಿದ್ದರೆ, 'ಪ್ರಿಯಾಂಕ' ಚಿತ್ರ ಜನವರಿ 15 ರಂದು ರಿಲೀಸ್ ಆಗ್ಬೇಕಿತ್ತು. ಈಗ ಫೆಬ್ರವರಿ 5 ರಂದು 'ಪ್ರಿಯಾಂಕ' ರಿಲೀಸ್ ಡೇಟ್ ಫಿಕ್ಸ್ ಆಗಿದೆ.['ಪ್ರಿಯಾಂಕ' ಇದೇ ತಿಂಗಳು ನಿಮ್ಮ ಮುಂದೆ ಬರ್ತಿದ್ದಾಳೆ!]

Kannada Movie 'Priyanka' release postponed

ಮಹಿಳಾ ಪ್ರಧಾನ ಚಿತ್ರವಾಗಿರುವ 'ಪ್ರಿಯಾಂಕ' ನೈಜ ಘಟನೆಯನ್ನಾಧರಿಸಿರುವ ಚಿತ್ರ. 27 ವರ್ಷದ ಯುವಕ ಮತ್ತು 34 ವರ್ಷದ ವಿವಾಹಿತ ಮಹಿಳೆ ನಡುವಿನ ಪ್ರೇಮ ಕಥೆ 'ಪ್ರಿಯಾಂಕ'.

ವಿವಾಹಿತ ಮಹಿಳೆ ಪ್ರಿಯಾಂಕ ಪಾತ್ರದಲ್ಲಿ ಪ್ರಿಯಾಂಕ ಉಪೇಂದ್ರ ನಟಿಸಿದ್ದರೆ, ಲವ್ವರ್ ಬಾಯ್ ಆಗಿ ತೆಲುಗು ನಟ ತೇಜಸ್ ಅಭಿನಯಿಸಿದ್ದಾರೆ. ಚಿತ್ರಕ್ಕೆ ದಿನೇಶ್ ಬಾಬು ಆಕ್ಷನ್ ಕಟ್ ಹೇಳಿದ್ದಾರೆ.

English summary
Kannada Actress Priyanka Upendra starrer Kannada Movie 'Priyanka' release is postponed to February 5th.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X