For Quick Alerts
  ALLOW NOTIFICATIONS  
  For Daily Alerts

  ಖ್ಯಾತ ನಿರ್ಮಾಪಕ ರಾಮು ಕೋವಿಡ್‌ಗೆ ಬಲಿ

  |

  ಕನ್ನಡ ಸಿನಿಮಾ ರಂಗದ ಖ್ಯಾತ ನಿರ್ಮಾಪಕ, ನಟಿ ಮಾಲಾಶ್ರಿ ಪತಿ ರಾಮು ಅವರು ಕೊರೊನಾ ಸೋಂಕಿನಿಂದಾಗಿ ನಿಧನ ಹೊಂದಿದ್ದಾರೆ.

  Recommended Video

  ಕನ್ನಡ ಚಿತ್ರರಂಗದ ನಿರ್ಮಾಪಕ ಕೋಟಿ ರಾಮು ವಿಧಿವಶ | Filmibeat Kannada

  ಹಲವಾರು ಕನ್ನಡ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ರಾಮು ಅವರಿಗೆ ಕಳೆದ ವಾರ ಕೋವಿಡ್ ದೃಢವಾಗಿತ್ತು. ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಮು ಇಂದು ಸಂಜೆವೇಳೆಗೆ ಕೊನೆ ಉಸಿರೆಳೆದಿದ್ದಾರೆ.

  ಭಾರಿ ದೊಡ್ಡ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದ ರಾಮು ಅವರಿಗೆ 'ಕೋಟಿ ರಾಮು' ಎಂದೇ ಕರೆಯುತ್ತಿದ್ದರು.

  ಕನ್ನಡದ 'ಗೋಲಿಬಾರ್' ಸಿನಿಮಾ ಮೂಲಕ ಚಿತ್ರನಿರ್ಮಾಣ ಆರಂಭ ಮಾಡಿದ ರಾಮು ಅವರು, 'ಎಕೆ 47', 'ಲಾಕಪ್‌ ಡೆತ್', 'ಕಿಚ್ಚ', 'ಹಾಲಿವುಡ್', 'ಸಿಂಹದ ಮರಿ' ಇನ್ನೂ ಹಲವಾರು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.

  ಪ್ರಸ್ತುತ ಪ್ರಜ್ವಲ್ ದೇವರಾಜ್ ನಟಿಸಿರುವ 'ಅರ್ಜುನ್ ಗೌಡ' ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಸಿನಿಮಾ ಬಹುತೇಕ ಮುಗಿದಿತ್ತು ಬಿಡುಗಡೆಗೆ ಕಾಯುತ್ತಿದ್ದರು. ಈ ನಡುವೆ ರಾಮು ವಿಧಿವಶವಾಗಿದ್ದಾರೆ.

  ರಾಮು ಅವರು ಕನ್ನಡದ ಖ್ಯಾತ ನಟಿ ಮಾಲಾಶ್ರಿ ಅವರೊಟ್ಟಿಗೆ ವಿವಾಹವಾಗಿದ್ದರು. ಈ ಜೋಡಿಗೆ ಅನನ್ಯ ಹಾಗೂ ಅಯಾನ್ ಹೆಸರಿನ ಮಕ್ಕಳಿದ್ದಾರೆ. ಮಾಲಾಶ್ರಿ ಅವರು ಆಗಾಗ್ಗೆ ತಮ್ಮ ಕುಟುಂಬದ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದರು.

  English summary
  Kannada movie producer Ramu died because of COVID 19 on April 26. He is husband of actress Malashree.
  Tuesday, April 27, 2021, 9:40
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X