For Quick Alerts
  ALLOW NOTIFICATIONS  
  For Daily Alerts

  ಕನಸಿನ ಚಿತ್ರದೊಂದಿಗೆ 'ರಾ' ರಾಜಿಸೋಕೆ ಬಂದ ಜರ್ನಲಿಸ್ಟ್ ರಾಜೇಶ್ ಗೌಡ

  |

  ಸಿನಿಮಾ ಮಾಡೋದೇ ಒಂದು ಸಾಹಸ, ಮಾಡಿದ್ಮೇಲೆ ಅದನ್ನು ಚಿತ್ರಮಂದಿರಕ್ಕೆ ತರುವುದು ಹರಸಾಹಸ. ಇಂತಹ ಪ್ರಯತ್ನಗಳಲ್ಲಿ ಘಟಾನುಘಟಿಗಳೇ ಸೋಲು ಕಂಡಿರುವ ಅನೇಕ ಉದಾಹರಣೆಗಳು ಸ್ಯಾಂಡಲ್‌ವುಡ್ ಇಂಡಸ್ಟ್ರಿಯಲ್ಲಿದೆ. ಅದ್ದೂರಿಯಾಗಿ ಸಿನಿಮಾ ಲಾಂಚ್ ಮಾಡಿ, ಶೂಟಿಂಗ್ ಮಾಡಿ ಆಮೇಲೆ ರಿಲೀಸ್ ಮಾಡಲು ಸಾಧ್ಯವಿಲ್ಲದೇ ಅದೇಷ್ಟೋ ಚಿತ್ರಗಳು ಮೂಲೆಗುಂಪಾಗಿವೆ.

  ಇಂತಹದ್ರಲ್ಲಿ ಸಿನಿಮಾ ಮಾಡೇ ಮಾಡ್ತಿನಿ, ಅದನ್ನು ಬಿಡುಗಡೆ ಮಾಡೇ ಮಾಡ್ತೀನಿ ಅಂತ ಏಕಾಂಗಿಯಾಗಿ ಮುನ್ನುಗ್ಗಿ ತಾನು ಅಂದುಕೊಂಡಿದ್ದನ್ನು ಸಾಧಿಸಿ ತೋರಿಸಿದ್ದಾರೆ ಜರ್ನಲಿಸ್ಟ್ ರಾಜೇಶ್ ಗೌಡ.

  'ಹಿಟ್' ಗೀತೆಗಳ ಸೃಷ್ಟಿಕರ್ತ: ಈ ಗೀತೆ ರಚನೆಕಾರನ ಬದುಕಲ್ಲಿ ಮೂಡುತ್ತಾ 'ಚಿತ್ತಾರ'?

  ಸುಮಾರು ಹದಿನೈದು ವರ್ಷದಿಂದ ಸಿನಿಮಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದ ರಾಜೇಶ್ ಗೌಡ ತಮ್ಮ ಕನಸಿನ ಚಿತ್ರವನ್ನು ಪ್ರೇಕ್ಷಕರ ಮುಂದೆ ತರ್ತಿದ್ದಾರೆ. ಫೆಬ್ರವರಿ 12 ರಂದು ಪತ್ರಕರ್ತ ರಾಜೇಶ್ ಗೌಡ ನಿರ್ದೇಶಿಸಿ, ನಟಿಸಿ, ನಿರ್ಮಾಣ ಮಾಡಿರುವ ''ರಾ..?'' ಸಿನಿಮಾ ಥಿಯೇಟರ್‌ಗೆ ಬರ್ತಿದೆ. ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ''ರಾ'' ಚಿತ್ರ ರಿಲೀಸ್ ಆಗುತ್ತಿದೆ.

  ಸಿನಿಮಾ ಹಾಗಿರುತ್ತೆ, ಹೀಗಿರುತ್ತೆ ಅಂತ ಹೇಳಲ್ಲ.. ಆದ್ರೆ ಹೊಸಬರ ಸಿನಿಮಾ ಹೊಸತನಕ್ಕೆ ಮೋಸ ಇರಲ್ಲ ಅನ್ನೋ ಭರವಸೆಯೊಂದಿಗೆ ರಾಜೇಶ್ ಗೌಡ ಈ ಚಿತ್ರ ತಯಾರಿಸಿದ್ದಾರೆ. ನಿನ್ನೆಯಷ್ಟೇ ರಾ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

  ಆನಂದ್ ಯ್ಯೂಟ್ಯೂಬ್ ಚಾನಲ್‌ನಲ್ಲಿ ರಾ ಟ್ರೈಲರ್ ರಿಲೀಸ್ ಆಗಿದ್ದು, ಸದ್ದು ಮಾಡ್ತಿದೆ. ಮೊದಲೇ ಹೇಳಿದಂತೆ ಇದೊಂದು ಕ್ರೈಂ ಥ್ರಿಲ್ಲರ್ ಚಿತ್ರವಾಗಿರುವುದರಿಂದ, ಟ್ರೈಲರ್‌ನ ಪ್ರತಿ ದೃಶ್ಯದಲ್ಲೂ ಆ ಥ್ರಿಲ್ ಉಳಿಸಿಕೊಂಡಿದೆ.

  ಧ್ವನಿಗೆ ಬೆಲೆ; ಗುಣಮಟ್ಟಕ್ಕಿಲ್ಲ ಮನ್ನಣೆ: ಕಲಾವಿದೆ ದೀಪಾ ಸಂದರ್ಶನ

  ಜೇಮ್ಸ್ ಆರ್ಕಿಟೆಕ್ಟ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು, ಟ್ರೈಲರ್‌ನಲ್ಲಿ ಮ್ಯೂಸಿಕ್ ವಿಶೇಷವಾಗಿ ಗಮನ ಸೆಳೆಯುತ್ತಿದೆ. ಛಾಯಾಗ್ರಹಣವೂ ಅಷ್ಟೇ ಚೆನ್ನಾಗಿ ಮೂಡಿಬಂದಿದೆ. ಕ್ರೈಂ ಕತೆಗೆ ಬೇಕಾದ ಸಂಗೀತ ಹಾಗೂ ಕ್ಯಾಮೆರ ಕೆಲಸ ಈ ಟ್ರೈಲರ್‌ನಲ್ಲಿ ಕಾಣ್ತಿದೆ.

  ವಿದೇಶದಲ್ಲಿ KGF 2 ಗೆ ಎದುರಾಯ್ತು ಅಡ್ಡಿ | Filmibeat Kannada

  ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ರಾ ಸಿನಿಮಾ ಬಿಡುಗಡೆಯಾಗುತ್ತಿದ್ದು, ಚಿತ್ರದಲ್ಲಿ ಹಲವು ಸರ್ಪ್ರೈಸ್ ಒಳಗೊಂಡಿದೆ. ಫೆಬ್ರವರಿ 12 ರಂದು ಸಿನಿಮಾ ಥಿಯೇಟರ್‌ಗೆ ಅಂಗಳಕ್ಕೆ ಲಗ್ಗೆಯಿಡ್ತಿದೆ.

  English summary
  Journalist Rajesh gowda acted and directional movie RA trailer released on February 5th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X