For Quick Alerts
  ALLOW NOTIFICATIONS  
  For Daily Alerts

  ಈ ವಾರ ಬೆಳ್ಳಿತೆರೆಯಲ್ಲಿ ಅನಾವರಣವಾಗಲಿದೆ ಮಿತ್ರನ 'ರಾಗ'

  By Bharath Kumar
  |

  ಹಾಸ್ಯ ನಟ ಮಿತ್ರ ಹಾಗೂ ನಟಿ ಭಾಮಾ ಅಭಿನಯದ 'ರಾಗ' ಈ ವಾರ ಬಿಡುಗಡೆಯಾಗುತ್ತಿದೆ. ಸೆನ್ಸಾರ್ ಮಂಡಳಿಯಿಂದ 'ಯು' ಸರ್ಟಿಫಿಕೆಟ್ ಪಡೆದುಕೊಂಡಿರುವ 'ರಾಗ' ಏಪ್ರಿಲ್ 21 ರಂದು ರಾಜ್ಯಾದ್ಯಂತ ಬೆಳ್ಳಿತೆರೆಮೇಲೆ ಮೂಡಲಿದೆ.

  ಈಗಾಗಲೇ ಫಸ್ಟ್ ಲುಕ್ ಪೋಸ್ಟರ್, ಟ್ರೈಲರ್, ಹಾಡುಗಳಿಂದ 'ರಾಗ' ವಿಶೇಷವೆನಿಸಿಕೊಂಡಿದೆ. ಅಂಧರು ತಮ್ಮದೇ ಆದ ಲೋಕದಲ್ಲಿ ಕಟ್ಟಿಕೊಳ್ಳುವ ಕನಸಿನ ಜೀವನವನ್ನು ಕಣ್ಣಿಗೆ ಕಟ್ಟುವ ಹಾಗೆ 'ರಾಗ' ಚಿತ್ರದಲ್ಲಿ ಬಿಂಬಿಸಲಾಗಿದೆ.[ಕನ್ನಡ ಚಿತ್ರರಂಗದ ಮತ್ತೊಂದು 'ಅದ್ಭುತ' ಮಿತ್ರನ 'ರಾಗ'! ]

  ಪಿ.ಸಿ.ಶೇಖರ್ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಮಿತ್ರ ಎಂಟರ್ ಟೈನರ್ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಸ್ವತಃ ಮಿತ್ರ ಅವರೇ ನಿರ್ಮಾಣ ಮಾಡಿದ್ದು, ವೈದಿ ಎಸ್ ಛಾಯಾಗ್ರಹಣ ಇದೆ.[ಹಾಸ್ಯ ನಟ 'ಮಿತ್ರ' ಅವರಿಂದ ನಿಮ್ಗೆಲ್ಲಾ ಫೋನ್ ಕಾಲ್ ಬರುತ್ತೆ! ಯಾಕೆ?]

  ಉಳಿದಂತೆ ಚಿತ್ರದಲ್ಲಿ ಅವಿನಾಶ್, ಜೈಜಗದೀಶ್, ರಮೇಶ್ ಭಟ್, ಸಿಹಿ ಕಹಿ ಚಂದ್ರು ರಂತಹ ದೊಡ್ಡ ಕಲಾವಿದರು ಅಭಿನಯಿಸಿದ್ದಾರೆ.

  English summary
  Kannada Actor Mitra and Kannada Actress Bhama Starrer Kannada Movie Raaga has releasing on 21st April. the Movie Directed by PC Shekar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X