For Quick Alerts
  ALLOW NOTIFICATIONS  
  For Daily Alerts

  'ರಾಮಾ ರಾಮಾ ರೇ' ಚಿತ್ರದ ರೀಮೇಕ್ ರೈಟ್ಸ್ ಗೆ ಭಾರಿ ಡಿಮ್ಯಾಂಡ್!

  By Bharath Kumar
  |

  'ರಾಮಾ ರಾಮಾ ರೇ' ಸೈಲಾಂಟ್ ಆಗಿ ತೆರೆಕಂಡು, ಇಡೀ ಸ್ಯಾಂಡಲ್ ವುಡ್ ಪ್ರೇಕ್ಷಕರನ್ನ ಮೋಡಿ ಮಾಡಿದ ಸಿನಿಮಾ. ಅಕ್ಟೋಬರ್ 21 ರಂದು ಬಿಡುಗಡೆಯಾದ ಈ ಚಿತ್ರ, ಸದ್ಯ ಮಲ್ಟಿಫ್ಲೆಕ್ಸ್ ಗಳಲ್ಲಿ ಅದ್ಭುತ ಪ್ರದರ್ಶನ ಕಾಣುತ್ತಿದೆ.

  ಇತ್ತೀಚೆಗೆ ಯಶಸ್ವಿ 50 ದಿನಗಳನ್ನ ಪೂರೈಸಿದ 'ರಾಮಾ ರಾಮಾ ರೇ' ಈಗ 70 ಪೂರೈಸಿ ಮುನ್ನುಗ್ಗುತ್ತಿದೆ. ಹೀಗಿರುವಾಗ ಚಿತ್ರತಂಡದಿಂದ ಹೊಸ ಸುದ್ದಿವೊಂದು ಹೊರಬಿದ್ದಿದೆ.['ರಾಮಾ ರಾಮಾ ರೇ' ವಿಮರ್ಶೆ: ಕ್ಲಾಸ್ ಪ್ರೇಕ್ಷಕರಿಗೆ ಹೇಳಿ ಮಾಡಿಸಿದ ಸಿನಿಮಾ]

  ಅದೇನಪ್ಪಾ ಅಂದ್ರೆ, ಕನ್ನಡದ 'ರಾಮಾ ರಾಮಾ ರೇ' ಚಿತ್ರದ ರೀಮೇಕ್ ಹಕ್ಕು ಸೇಲ್ ಆಗಿದ್ದು, ದಕ್ಷಿಣದ ಎಲ್ಲಾ ಭಾಷೆಗಳಲ್ಲೂ ಸಿನಿಮಾ ಮೂಡಲಿದೆಯಂತೆ. ಹೌದು, ಸತ್ಯಪ್ರಕಾಶ್ ನಿರ್ದೇಶನದ ರಾಮಾ ರಾಮಾ ರೇ' ಈಗ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗೆ ರಿಮೇಕ್ ಆಗುತ್ತಿದೆಯಂತೆ.['ರಾಮಾ ರಾಮಾ ರೇ' ಚಿತ್ರಕ್ಕೆ ವಿಮರ್ಶಕರ ಮಾರ್ಕ್ಸ್ ಎಷ್ಟು ?]

  Kannada Movie Rama Rama Re Remake Rights Sold

  ಅಂದ್ಹಾಗೆ, ಈ ಚಿತ್ರದ ರೀಮೇಕ್ ರೈಟ್ಸ್ ಖರೀದಿ ಮಾಡಿರುವುದು ಹೆಬ್ಬುಲಿ' ಚಿತ್ರದ ನಿರ್ಮಾಪಕರಲ್ಲೊಬ್ಬರಾದ ಉಮಾಪತಿ. ಈಗಾಗಲೇ ಈ ವಿಷ್ಯದ ಕುರಿತು ಸತ್ಯಪ್ರಕಾಶ್ ಅವರು ಜೊತೆಗೆ ಒಂದು ಸುತ್ತಿನ ಮಾತುಕತೆ ನಡೆದಿದ್ದು, ಅಂತಿಮ ಪ್ರಕ್ರಿಯೆ ಮಾತ್ರ ಬಾಕಿಯಿದೆಯಂತೆ.

  ಈ ಮಧ್ಯೆ 'ರಾಮಾ ರಾಮಾ ರೇ' ಚಿತ್ರವನ್ನ ಹಿಂದಿಯಲ್ಲೂ ರೀಮೇಕ್ ಮಾಡಲು ಕೆಲವು ನಿರ್ಮಾಪಕರು ಒಲವು ತೋರಿಸಿದ್ದಾರಂತೆ. ಇನ್ನೂ ವಿತರಕ ಸುಧೀರ್ ಹಿಂದಿಯಲ್ಲಿ ನಿರ್ಮಾಣದ ಕುರಿತು ಚರ್ಚಿಸಿದ್ದು, ರೀಮೇಕ್ ಸಾಧ್ಯವಾಗದಿದ್ದರೂ, ಡಬ್ ಮಾಡಲಿದ್ದಾರಂತೆ.

  ಒಟ್ನಲ್ಲಿ, ಕನ್ನಡದ ಚಿತ್ರವೊಂದು ಈ ಮಟ್ಟದ ಬೇಡಿಕೆ ಹುಟ್ಟುಹಾಕಿದೆ ಅಂದ್ರೆ ಇದು ಸ್ಯಾಂಡಲ್ ವುಡ್ ಗೆ ಖುಷಿಯ ವಿಚಾರವೇ ಸರಿ. ಸತ್ಯಪ್ರಕಾಶ್ ನಿರ್ದೇಶನ ಮಾಡಿದ್ದ 'ರಾಮಾ ರಾಮಾ ರೇ' ಚಿತ್ರದಲ್ಲಿ ಕೆ.ಜಯರಾಂ, ನಟರಾಜ್, ಧರ್ಮಣ್ಣ ಕಡೂರು, ಬಿಂಬಶ್ರೀ ನೀನಾಸಂ ಸೇರಿದಂತೆ ಹಲವರು ಅಭಿನಯಿಸಿದ್ದರು. ವಾಸುಕಿ ವೈಭವ ಸಂಗೀತ ಸಂಯೋಜನೆ ಮಾಡಿದ್ದರು.

  English summary
  Kannada Movie 'Rama Rama Re' Remake rights has been bought by Umapathy, one of the producers of Sudeep's Hebbuli. The Movie was Released in October 21st 2016.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X