ರೈತರ ಪರ ದನಿ ಎತ್ತಿ ಮೆಚ್ಚುಗೆ ಗಳಿಸಿದ 'ರಣಹೇಡಿ'

ರೈತಾಪಿ ವರ್ಗ, ರೈತರ ಸಮಸ್ಯೆ, ಅವರ ಕಷ್ಟ, ನೋವು... ಹೀಗೆ ಹಳ್ಳಿ ಜೀವನ ಕುರಿತು ಹಲವು ಸಿನಿಮಾಗಳು ಬಂದಿದೆ. ಈಗ ರೈತರ ಪರ ದನಿ ಎತ್ತುವ ಮೂಲಕ ರಣಹೇಡಿ ಎಂಬ ಚಿತ್ರ ಗಾಂಧಿನಗರದಲ್ಲಿ ಗಮನ ಸೆಳೆಯುತ್ತಿದೆ.

ಕಳೆದ ವಾರವಷ್ಟೇ ಬಿಡುಗಡೆಯಾಗಿದ್ದ ಚಿತ್ರ ರೈತಾಪಿ ಜನರಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಸಂಪೂರ್ಣವಾಗಿ ಹಳ್ಳಿ ಸೊಗಡಿನಲ್ಲಿ ತಯಾರಾಗಿದ್ದ ಈ ಚಿತ್ರ ಕಮರ್ಷಿಯಲ್ ಆಗಿ ಕೂಡ ಸದ್ದು ಮಾಡಿತ್ತು. ಹಳ್ಳಿ ಜೀವನ, ಕಷ್ಟ, ದ್ವೇಷ, ಪ್ರೀತಿ, ಅಸೂಯೆ, ಎಲ್ಲದರ ಮೇಲೂ ಬೆಳಕು ಚೆಲ್ಲಿದೆ.

Kannada Movie Ranahedi released

ಒಳ್ಳೆಯ ಕಥೆ ಇಟ್ಟುಕೊಂಡು ಸಿನಿಮಾ ಮಾಡಬೇಕು ಎನ್ನುವ ನಿರ್ದೇಶಕರ ಆಸೆ ಈ ಮೂಲಕ ಈಡೇರಿದೆ. ರಣಹೇಡಿ ಎಂದು ಹೆಸರಿಟ್ಟು ರೈತರ ಪರ ಸಿನಿಮಾ ಎಂದರೆ ಹೇಗೆ ಎಂಬ ಸಿನಪ್ರಿಯರಲ್ಲಿ ಕಾಡಬಹುದು. ಆದರೆ, 'ರೈತ ರಣಹೇಡಿಯಲ್ಲ ಅವನು ಯೋಧ' ಎಂದು ಚಿತ್ರದಲ್ಲಿ ತೋರಿಸಲಾಗಿದೆ. ಇದು ಸಿನಿಮಾದ ಪ್ರಮುಖ ಶಕ್ತಿ ಮತ್ತು ಆಕರ್ಷಣೆ ಎಂದು ಹೇಳಬಹುದು.

ಅಂದ್ಹಾಗೆ, ಈ ಚಿತ್ರವನ್ನು ಮನು ಕೆ ಶೆಟ್ಟಿಹಳ್ಳಿ ನಿರ್ದೇಶನ ಮಾಡಿದ್ದಾರೆ. ಕರ್ಣ ಕುಮಾರ್ ಸಿನಿಮಾದ ನಾಯಕನಾಗಿದ್ದಾರೆ. ಈಗಾಗಲೇ ಅನೇಕ ಸಿನಿಮಾಗಳಲ್ಲಿ ಖಳನಾಯಕ, ಪೋಷಕ ಪಾತ್ರದಲ್ಲಿ ನಟಿಸಿದ್ದ ಕರ್ಣ ಕುಮಾರ್ ಇಲ್ಲಿ ಹೀರೋ ಆಗಿದ್ದಾರೆ.

Kannada Movie Ranahedi released

ಕರ್ಣ ಕುಮಾರ್ ಗೆ ಐಶ್ವರ್ಯ ರಾವ್ ಜೋಡಿಯಾಗಿದ್ದಾರೆ. ಈ ಹಿಂದೆ 'ರವಿ ಹಿಸ್ಟರಿ' ಸಿನಿಮಾದಲ್ಲಿ ನಟಿಸಿದ್ದರು. ಇಲ್ಲಿ ಹಳ್ಳಿ ಹುಡುಗಿ ಪಾತ್ರವನ್ನು ನಿರ್ವಹಿಸಿದ್ದಾರೆ. ಡಿ ಗ್ಲಾಮರ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅಚ್ಚುತ್ ಕುಮಾರ್, ವಿ ಮನೋಹರ್, ಗಿರಿ ಚಿತ್ರದ ಪಾತ್ರಗಳಲ್ಲಿ ನಟಿಸಿದ್ದಾರೆ. ಸುರೇಶ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

More from Filmibeat

English summary
Ranahedi kannada movie running successfully. movie has released on November 29th
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X