ಅಂಕಲ್ ಸ್ಯಾಮ್ ಅಂಗಳದಲ್ಲಿ ರಂಗಿತರಂಗ 50 ದಿನದ ಸಂಭ್ರಮ!

By Suneetha

ಸ್ಯಾಂಡಲ್ ವುಡ್ ನಲ್ಲಿ 'ರಂಗಿತರಂಗ' ಅಬ್ಬರ ಹೆಚ್ಚಾಗಿದ್ದು, ಭಂಡಾರಿ ಸಹೋದರರ ರಂಗ್ ರಂಗೀನ್ ಚಿತ್ರ ಆಗಸ್ಟ್ 22ರಂದು ಬರೋಬ್ಬರಿ 50 ದಿನಗಳನ್ನು ಪೂರೈಸಿ ಇದೀಗ 100ನೇ ದಿನಗಳತ್ತ ದಾಪುಗಾಲಿಕ್ಕುತ್ತಿದೆ.

ಟೈಟಲ್ ನೋಡಿ ಇದೇನಿದು ಮೊನ್ನೆ ಮೊನ್ನೆ ಇನ್ನು ಅಮೆರಿಕದಲ್ಲಿ ಚಿತ್ರ ರಿಲೀಸ್ ಆಗಿದೆ ಇಷ್ಟು ಬೇಗ 50 ದಿನದ ಸಂಭ್ರಮ ಹೇಗೆ ಎಂದು ಹುಬ್ಬೇರಿಸಬೇಡಿ. 'ರಂಗಿತರಂಗ' ಚಿತ್ರ ಕರ್ನಾಟಕದಲ್ಲಿ 50 ದಿನಪೂರೈಸಿದೆ. ಚಿತ್ರ ತಂಡ ಈಗ ಯುಎಸ್ ನಲ್ಲಿ ಟೂರ್ ಹೊಡೆಯುತ್ತಿದ್ದು, 50 ದಿನದ ಸಂಭ್ರಮವನ್ನು ಯುಎಸ್ ನಲ್ಲೇ ಆಚರಿಸಿಕೊಂಡಿದೆ.[ರಂಗಿತರಂಗ ಅಮೆರಿಕದಲ್ಲಿ ಕೋಟಿಗಟ್ಟಲೇ ಗಳಿಕೆ]

ಆಗಸ್ಟ್ 22ರಂದು ನ್ಯೂ ಜೆರ್ಸಿಯಲ್ಲಿ ಚಿತ್ರದ 50 ರ ಸಂಭ್ರಮವನ್ನು ಭಂಡಾರಿ ಸಹೋದರರು ಆಚರಿಸಿದ್ದು, ಆಗಸ್ಟ್ 27 ರಂದು ಕರ್ನಾಟಕದ ನಮ್ಮ ರಾಜಧಾನಿ ಬೆಂಗಳೂರಿನಲ್ಲಿ 'ರಂಗಿತರಂಗ' 50 ದಿನ ಪೂರೈಸಿದ ಸಂಭ್ರಮವನ್ನು ಚಿತ್ರತಂಡ ಭರ್ಜರಿಯಾಗಿ ಆಚರಿಸಲಿದೆ.

ಇದೀಗ ಕನ್ನಡ ಫಿಲ್ಮಿಬೀಟ್ ಗೆ ಮಾಹಿತಿ ಸಿಕ್ಕ ಪ್ರಕಾರ ಚಿತ್ರದ ನಿರ್ದೇಶಕ ಅನುಪ್ ಭಂಡಾರಿ ಅವರು ಸದ್ಯಕ್ಕೆ ಅಮೇರಿಕಾ ಪ್ರವಾಸದಲ್ಲಿರುವುದರಿಂದ ಚಿತ್ರದ 50 ದಿನದ ಸಂಭ್ರಮವನ್ನು ಯುಎಸ್ ನಲ್ಲಿ ಆಚರಿಸಲು ಚಿತ್ರತಂಡ ನಿರ್ಧರಿಸಿದ್ದಾರಂತೆ.[ಸಂದರ್ಶನ : ರಂಗಿತರಂಗ ಯಶಸ್ಸಿನ ಅಲೆಯ ನಾವಿಕ ಅನುಪ್]

ಮೊನ್ನೆ ಮೊನ್ನೆ ಅಮೇರಿಕಾದಲ್ಲಿ ತೆರೆ ಕಂಡು ವೀಕೆಂಡ್ ನಲ್ಲಿ ಕೋಟಿಗಟ್ಟಲೇ ರೂಪಾಯಿ ಗಳಿಕೆ ಮಾಡಿ ಬಾಕ್ಸಾಫೀಸ್ ಚಿಂದಿ ಉಡಾಯಿಸಿದ 'ರಂಗಿತರಂಗ' ವಿದೇಶದಲ್ಲಿರುವ ಕನ್ನಡಿಗರನ್ನು ಭಾರಿ ಆಕರ್ಷಿಸುತ್ತಿದೆ.

ಎಲ್ಲಾ ಹೊಸಬರೇ ಸೇರಿಕೊಂಡು ಮಾಡಿರುವ ಚಿತ್ರ ದಾಖಲೆ ಮೇಲೆ ದಾಖಲೆ ಸೃಷ್ಟಿಸುತ್ತಿದೆ. ಒಟ್ನಲ್ಲಿ ಭಂಡಾರಿ ಸಹೋದರರು ಪ್ರೇಕ್ಷಕರನ್ನು ಕಮಾಲ್ ಮಾಡಿದ್ದು ಅಂತೂ ಸತ್ಯ.

ವಿಭಿನ್ನ ಕಥೆ ಜೊತೆಗೆ ಭರ್ಜರಿ ಮಿಸ್ಟರಿ-ಥ್ರಿಲ್ಲರ್ ಕಥೆಯನ್ನಾಧರಿಸಿದ 'ರಂಗಿತರಂಗ' ಚಿತ್ರದಲ್ಲಿ ಅಷ್ಟೇ ಸುಂದರ ಹಾಡುಗಳು ಹಾಗೂ ನಿರೂಪಣಾ ಶೈಲಿ ಎಲ್ಲವೂ ಹೈಲೈಟ್ ಆಗಿತ್ತು.

ಸದ್ಯಕ್ಕೆ ಚಂದನವನದ ಈ ಹೊಸಬರ ಪ್ರಯತ್ನ ಎಲ್ಲರ ಬಾಯಲ್ಲಿ ಮೆಚ್ಚುಗೆಗೆ ಪಾತ್ರವಾಗುತ್ತಿದೆ, ಮಾತ್ರವಲ್ಲದೇ ವಿಶ್ವದ ಈ ವರ್ಷದ ಅತ್ಯುತ್ತಮ ಚಿತ್ರ ಎಂಬ ಹೆಗ್ಗಳಿಕೆಗೆ ಕೂಡ ಪಾತ್ರವಾಗಿದೆ.[ಮಿಸ್ಟರಿ ಇಷ್ಟಪಡುವ ಅನುಪ್ ಚಿತ್ರಕ್ಕೆ ರಕ್ಷಿತ್ ಹೀರೋ?]

ಪ್ರಥಮ ಪ್ರಯತ್ನದಲ್ಲಿಯೇ ನಿರ್ದೇಶಕ ಅನುಪ್ ಭಂಡಾರಿ ಅವರು ವೀಕ್ಷಕರನ್ನು ಮೋಡಿ ಮಾಡಿದ ಬಗೆ ಕಂಡರೆ ಇನ್ನೂ ಅವರ ಮುಂದಿನ ನಿರ್ದೇಶನದ ಚಿತ್ರಗಳು ಅದ್ಯಾವ ಥರಾ ಮೂಡಿ ಬರಬಹುದು ಅಂತ ಪ್ರೇಕ್ಷಕರು ಈಗಿನಿಂದಲೇ ಕಾತರದಿಂದ ಕಾಯುವಂತೆ ಮಾಡಿದ್ದಾರೆ.

ಒಟ್ನಲ್ಲಿ ದೇಶ-ವಿದೇಶಗಳಲ್ಲೂ ಹೊಸಬರ ಹವಾ ಕಂಡರೆ ಗಾಂಧಿನಗರದಲ್ಲಿ 'ರಂಗಿತರಂಗ' ಮತ್ತೊಂದು ಮೈಲಿಗಲ್ಲು ಸ್ಥಾಪಿಸುವುದು ಪಕ್ಕಾ ಅಂತ ಕೆಲವರ ಅಭಿಪ್ರಾಯ.[ಸೂರ್ಯ ಉದಯಿಸುವ ನಾಡಲ್ಲಿ ರಂಗಿತರಂಗ ಸಂಚಲನ]

ಅದೇನೇ ಇರಲಿ 'ರಂಗಿತರಂಗ' ಅಂತ ಕಲರ್ ಫುಲ್ ಹೆಸರು ಇಟ್ಟುಕೊಂಡು ಪ್ರೇಕ್ಷಕನನ್ನು ತನ್ನತ್ತ ಸೆಳೆಯುತ್ತಿರುವ ಭಂಡಾರಿ ಸಹೋದರರ 'ರಂಗ್ ರಂಗೀನ್' ಪ್ರಪಂಚಕ್ಕೆ ಹ್ಯಾಟ್ಸಾಫ್ ಹೇಳಲೇಬೇಕು.

More from Filmibeat

English summary
Nirup Bhandari starring Kannada movie 'RangiTaranga' in Anup Bhandari direction has completed 50 of days in USA and India screening. 'RangiTaranga' features Actress Avanthika Shetty, Actress Radhika Chetan in the lead role.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X