»   » ನೀವು 'ರಂಗಿತರಂಗ' ತಂಡದೊಂದಿಗೆ ಕೆಲಸ ಮಾಡಬೇಕೆ? ಇಲ್ಲಿದೆ ಅವಕಾಶ!

ನೀವು 'ರಂಗಿತರಂಗ' ತಂಡದೊಂದಿಗೆ ಕೆಲಸ ಮಾಡಬೇಕೆ? ಇಲ್ಲಿದೆ ಅವಕಾಶ!

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಸಂಚಲನ ಸೃಷ್ಟಿಸಿದ 'ರಂಗಿತರಂಗ' ಚಿತ್ರ ತಂಡ ಹೊಸ ಪ್ರತಿಭೆಗಳಿಗೆ ಸೂಪರ್ ಆಫರ್ ನೀಡಿದೆ. ಅದೇನಪ್ಪಾ ಅಂದ್ರೆ, ತಮ್ಮ ಎರಡನೇ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡಲು ಆಸಕ್ತಿ ಇರುವ ನವ ಪ್ರತಿಭೆಗಳನ್ನು ಹುಡುಕಿ ತೆಗೆಯುವ ಹೊಸ ಪ್ರಯತ್ನಕ್ಕೆ ಭಂಡಾರಿ ಸಹೋದರರು ಕೈ ಹಾಕಿದ್ದಾರೆ.

ಸದ್ಯಕ್ಕೆ ಸ್ಯಾಂಡಲ್ ವುಡ್ ಕ್ಷೇತ್ರದಲ್ಲಿ ಬಹಳ ಬೇಡಿಕೆಯುಳ್ಳ ಚಿತ್ರತಂಡ ಎಂದರೆ ಅದು ಭಂಡಾರಿ ಸಹೋದರರ 'ರಂಗಿತರಂಗ' ತಂಡ. ಹೊಸಬರಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಈ ತಂಡ ಇದೀಗ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲು ನಿರ್ಧರಿಸಿದ್ದಾರೆ.[ಭಂಡಾರಿ ಬ್ರದರ್ಸ್ 'ರಂಗಿತರಂಗ'ಕ್ಕೆ ಭಾರಿ ಕಂಟಕ]

Kannada movie 'RangiTaranga', Team Launches Talent Hunt

ಇದೀಗ 'ರಂಗಿತರಂಗ' ಚಿತ್ರತಂಡ ತಮ್ಮ ಎರಡನೇ ಪ್ರಾಜೆಕ್ಟ್ ಕಡೆ ಹೆಜ್ಜೆ ಇಟ್ಟಿದ್ದು, ಅದಕ್ಕಾಗಿ ಹೊಸಬರಿಗೆ ಅವಕಾಶ ನೀಡಲು ರೆಡಿಯಾಗಿದೆ. ಸಿನಿಮಾ ನಿರ್ದೇಶನ ಮಾಡಲು, ವಸ್ತ್ರ ವಿನ್ಯಾಸದಲ್ಲಿ ಆಸಕ್ತಿ ಇರುವವರು, ಎಡಿಟಿಂಗ್ ಮಾಡಲು ಇಚ್ಛಿಸುವವರು, ಕಲಾ ವಿಭಾಗದಲ್ಲಿ ಕೆಲಸ ಮಾಡಲು ಆಸಕ್ತಿ ಇರುವವರು, ಬರಹಗಾರರು ತಪ್ಪದೇ ನಿರ್ದೇಶಕ ಅನುಪ್ ಭಂಡಾರಿ ಅವರನ್ನು ಭೇಟಿಯಾಗಿ ನಿಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿ.

ಎಲ್ಲರಿಗೂ ಮುಕ್ತ ಅವಕಾಶವಿದ್ದು, ಉತ್ಸಾಹಿಗಳು, ಕೌಶಲ್ಯ ಇರುವವರು, ಹೊಸತನಕ್ಕೆ ಹಾತೊರೆಯುತ್ತಿರುವವರಿಗೆ ಹೊಸಬರ ತಂಡ ಮುಕ್ತ ವೇದಿಕೆ ಕಲ್ಪಿಸಿದೆ. ನಿಮ್ಮಲ್ಲಿರುವ ಪ್ರತಿಭೆಗೆ ಇದೊಂದು ಉತ್ತಮ ಅವಕಾಶ. ಮಿಸ್ ಮಾಡ್ಕೋಬೇಡಿ.[ವಿಡಿಯೋ: ನೀವು ನೋಡಿರದ 'ರಂಗಿತರಂಗ'ದ ದೃಶ್ಯಗಳು]

Kannada movie 'RangiTaranga', Team Launches Talent Hunt

ಈಗಲೇ ನಿಮ್ಮ ಡೀಟೈಲ್ಸ್ ಮತ್ತು ನಿಮ್ಮ ಟ್ಯಾಲೆಂಟ್ ನ ಒಂದು ಸ್ಯಾಂಪಲ್ ಪ್ರತಿಯನ್ನು rangitaranga@gmail.com ಗೆ ಕಳುಹಿಸಿ ಕೊಡಿ. ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

ಒಟ್ನಲ್ಲಿ ಹೊಸಬರಾಗಿ ಗಾಂಧಿನಗರಕ್ಕೆ ಕಾಲಿಟ್ಟು, ವಿಶ್ವದಾದ್ಯಂತ ತಮ್ಮ ಪ್ರತಿಭೆಯನ್ನು ತೋರಿಸಿದ ಭಂಡಾರಿ ಸಹೋದರರ ಈ ನೂತನ ಪ್ರಯತ್ನಕ್ಕೆ ಮೆಚ್ಚಲೇಬೇಕು.

English summary
The team of Rangitaranga has launched a talent hunt to draw talent for their next venture. Director Anup Bhandari and actor Nirup Bhandari are teaming up again for the new film. They have invited people with creative talent and interest in direction, VXF, art, costume, editing and poster designing to apply.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada