ನವೆಂಬರ್ 11ರಿಂದ ಸ್ಯಾಂಡಲ್ ವುಡ್ ನಲ್ಲಿ 'ರಿಕ್ತ' ಸಂಚಾರ

ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅಭಿನಯದ 'ರಿಕ್ತ' ಚಿತ್ರದ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ.

By Bharathkumar

ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅಭಿನಯದ 'ರಿಕ್ತ' ಚಿತ್ರದ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಯಶಸ್ವಿಯಾಗಿ ಸೆನ್ಸಾರ್ ಪರೀಕ್ಷೆಯಲ್ಲಿ ಪಾಸಾಗಿರುವ 'ರಿಕ್ತ' ಮುಂದಿನ ವಾರ ಅಂದ್ರೆ, ನವೆಂಬರ್ 11ರಂದು ಚಿತ್ರಮಂದಿರಕ್ಕೆ ಲಗ್ಗೆಯಿಡುತ್ತಿದೆ.

ಅಂದ್ಹಾಗೆ, 'ರಿಕ್ತ' ಹಾರರ್ ಕಾಮಿಡಿಯ ಕಥಾಹಂದರವನ್ನ ಹೊಂದಿರುವ ಚಿತ್ರ. ಇಲ್ಲಿ ಸಂಚಾರಿ ವಿಜಯ್ ಅವರದ್ದು ತುಂಬಾ ವಿಭಿನ್ನ ಪಾತ್ರ. [ಸೆನ್ಸಾರ್ ಮಂಡಳಿಯಲ್ಲಿ ಕ್ಲೀನ್ ಚಿಟ್ ಪಡೆದುಕೊಂಡ 'ರಿಕ್ತ']

Kannada Movie 'Riktha' To Release On November 11th

ಎರಡು ಡಿಫ್ರೆಂಟ್ ಗೆಟಪ್ ಗಳಲ್ಲಿ ಕಾಣಿಸಿಕೊಂಡಿರುವ ವಿಜಯ್, ದೆವ್ವದ ಪಾತ್ರ ಹಾಗೂ ಲವರ್ ಬಾಯ್ ಆಗಿ ಬಣ್ಣ ಹಚ್ಚಿದ್ದಾರಂತೆ. ಸಂಚಾರಿ ವಿಜಯ್ ಗೆ ಯುವ ನಟಿ ಅದ್ವಿಕ ಸಾಥ್ ಕೊಟ್ಟಿದ್ದು, ಚಿತ್ರದ ನಾಯಕಿಯಾಗಿದ್ದಾರೆ. ['ರಿಕ್ತ' ಇದು ಸಂಚಾರಿ ವಿಜಯ್ ಬತ್ತಳಿಕೆಯಿಂದ ಹೊರಟ ಹೊಸ ಬಾಣ]

Kannada Movie 'Riktha' To Release On November 11th

'ರಿಕ್ತ' ಚಿತ್ರಕ್ಕೆ ನವ ನಿರ್ದೇಶಕ ಅಮೃತ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಇದು ಇವರ ಚೊಚ್ಚಲ ನಿರ್ದೇಶನದ ಸಿನಿಮಾ. ಈಗಾಗಲೇ ಚಿತ್ರದ ಟ್ರೇಲರ್ ಹಾಗೂ ಪೋಸ್ಟರ್ ಸ್ಯಾಂಡಲ್ ವುಡ್‌ನಲ್ಲಿ ಭರವಸೆ ಮೂಡಿಸಿದ್ದು, ಈ ಎಲ್ಲಾ ಕುತೂಹಲಕ್ಕೆ ಮುಂದಿನ ವಾರ ಬ್ರೇಕ್ ಬೀಳಲಿದೆ.

Kannada Movie 'Riktha' To Release On November 11th

ಈ ಚಿತ್ರದ ಮತ್ತೊಂದು ವಿಶೇಷ ಅಂದ್ರೆ, ದೇವದಾಸ್. 'ಮುಂಗಾರು ಮಳೆ' ಚಿತ್ರದಲ್ಲಿದ್ದ 'ದೇವದಾಸ್' ಸತ್ತ ನಂತರ ದೆವ್ವವಾಗಿ 'ರಿಕ್ತ' ಚಿತ್ರದಲ್ಲಿ ಕಾಣಿಸಿಕೊಂಡಿದೆ. ಅಲ್ಲಿ ಗೊಲ್ಡನ್ ಸ್ಟಾರ್ ಗಣೇಶ್ ಅವರ ಜೊತೆಯಲ್ಲಿದ್ದ 'ದೇವದಾಸ್', ರಿಕ್ತ ಚಿತ್ರದಲ್ಲಿ ಸಂಚಾರಿ ವಿಜಯ್ ಅವರ ಜೊತೆ ಸೇರಿದೆ.

Kannada Movie 'Riktha' To Release On November 11th

ರಿಕ್ತ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿರುವುದು ರಿಕ್ಕಿ ಸೋನು. ಈಗಾಗಲೇ ಚಿತ್ರದ ಆಡಿಯೋ ಬಿಡುಗಡೆಯಾಗಿದ್ದು, ಹಾಡುಗಳು ಮೋಡಿ ಮಾಡಿವೆ. ಅದ್ರಲ್ಲೂ 'ವಾಟ್ ಡೂ ಮಿಸ್ಸಡೂ' ಹಾಡು ಫೆವರೆಟ್ ಎನಿಸಿಕೊಂಡಿದೆ. ಇನ್ನೂ, ಚಿತ್ರದ ಒಂದು ಹಾಡನ್ನ ಸ್ವತಃ ಸಂಚಾರಿ ವಿಜಯ್ ಅವರೇ ಹಾಡಿರುವುದು ವಿಶೇಷ. ಚಿತ್ರಕ್ಕೆ ಅರುಣ್ ಕುಮಾರ್ ಬಂಡವಾಳ ಹೂಡಿದ್ದಾರೆ. ಮುರುಳಿಧರ್ ಅವರ ಕ್ಯಾಮೆರಾ ವರ್ಕ್ ಇದೆ.

More from Filmibeat

English summary
Actor Sanchari Vijay's new film 'Riktha' is all ready to hit the screens on the 11th of November. The film has already been censored and will be releasing in more than 50 theaters across Karnataka. The movie is directed by Amruth Kumar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X