»   » ಶ್ರಾವ್ಯಾ,ಅಜಯ್ ಜೋಡಿಯ ರೋಜ್ ವಿಶೇಷಗಳು

ಶ್ರಾವ್ಯಾ,ಅಜಯ್ ಜೋಡಿಯ ರೋಜ್ ವಿಶೇಷಗಳು

Posted By:
Subscribe to Filmibeat Kannada

ಗುಲಾಬಿಯನ್ನು ನೆನೆದರೆ ಸಾಕು ಅನಂತನಾಗ್, ಆರತಿ ಅಭಿನಯದ 'ಮುಳ್ಳಿನ ಗುಲಾಬಿ' (1982) ಚಿತ್ರ ನೆನಪಾಗುತ್ತದೆ. ಆ ಚಿತ್ರದ ಹಾಡು "ಈ ಗುಲಾಬಿಯೂ ನಿನಗಾಗಿ ಅದು ಚೆಲ್ಲುವ ಪರಿಮಳ ನಿನಗಾಗಿ ಈ ಹೂವಿನಂದ ಪ್ರೇಯಸಿ ನಿನಗಾಗಿ ಕೇಳೆ ಓ ರತಿ...' ಎಲ್ಲ ಪ್ರೇಮಿಗಳ ಭಾವಗೀತೆ ಇದ್ದಂತೆ.

ಈಗ ಇನ್ನೊಂದು ಗುಲಾಬಿ ಅರಳುವ ಸಮಯ ಬಂದಿದೆ. ಇದು 'ರೋಜ್'. ಇದೇ ಶುಕ್ರವಾರ (ಜು.4) ರಾಜ್ಯದಾದ್ಯಂತ ತೆರೆಕಾಣುತ್ತಿದೆ. ಶ್ರಾವ್ಯಾ ಹಾಗೂ ಅಜಯ್ ರಾವ್ ಅಭಿನಯದ ಈ ಚಿತ್ರ ಯುವ ಪ್ರೇಮಿಗಳಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸಿದೆ.

ಈ ಚಿತ್ರದ ಪ್ರಮುಖ ಆಕರ್ಷಣೆ ಓಂ ಪ್ರಕಾಶ್ ರಾವ್ ಮತ್ತು ರೇಖಾದಾಸ್ ಪುತ್ರಿ ಶ್ರಾವ್ಯಾ. ಈ ಚಿತ್ರಕ್ಕಾಗಿ ಸಾಕಷ್ಟು ಶ್ರಮವನ್ನೂ ಅವರು ತೆಗೆದುಕೊಂಡಿದ್ದಾರೆ. ಜೊತೆಗೆ ನಾಯಕ ನಟ ಅಜಯ್ ರಾವ್ ಅವರ ಸಹಕಾರವೂ ಇತ್ತು ಎನ್ನಿ. ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವವರು ಸಹನಾ ಮೂರ್ತಿ.

ರೋಜ್ ಹಿಡಿದು ಬಂದ ಪ್ರೇಮಿಗಳು

ಕಿರುತೆರೆ ಧಾರಾವಾಹಿಗಳ ಮೂಲಕ ಬಣ್ಣದ ಜಗತ್ತಿಗೆ ಅಡಿಯಿಟ್ಟ ಶ್ರಾವ್ಯಾ ಅವರು 'ಲೂಸುಗಳು' ಚಿತ್ರದಲ್ಲಿ ಸಣ್ಣ ಪಾತ್ರ ಪೋಷಿಸಿದ್ದರು. ಇದೀಗ ರೋಜ್ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಎಂಟ್ರಿ ಕೊಡುತ್ತಿದ್ದಾರೆ.

ಐವತ್ತಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರೋಜ್

ಚಿತ್ರದಲ್ಲಿ ಅವರದು ಬಹಳ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದ ಹುಡುಗಿಯಾಗಿ ಕಾಣಿಸುತ್ತಾರೆ. ಈ ರೊಮ್ಯಾಂಟಿಕ್ ಚಿತ್ರವನ್ನು ಸರಿಸುಮಾರು 50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

ಕುಲು ಮನಾಲಿಯಲ್ಲಿ ರೊಮ್ಯಾಂಟಿಕ್ ಸಾಂಗ್ಸ್

ಈ ಚಿತ್ರವನ್ನು ಬೆಂಗಳೂರು, ಮೈಸೂರಿನಲ್ಲಿ ಹೆಚ್ಚಾಗಿ ಚಿತ್ರೀಕರಿಸಲಾಗಿದೆ. ಕುಲು ಮನಾಲಿಯಲ್ಲಿ ಹಾಡುಗಳನ್ನು ಶೂಟ್ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಶ್ರಾವ್ಯಾ ಹಾಗೂ ಕೃಷ್ಣ ಅಜಯ್ ರಾವ್ ಒಟ್ಟಿಗೆ ಅಭಿನಯಿಸಿರುವ ಚಿತ್ರ ಇದು. ತರುಣ್ ಶಿವಪ್ಪ ಹಾಗೂ ಭೈರವ ಸುರೇಶ್ ಚಿತ್ರದ ನಿರ್ಮಾಪಕರು.

ಪಾತ್ರವರ್ಗದಲ್ಲಿ ಇನ್ಯಾರೆಲ್ಲಾ ಇದ್ದಾರೆ?

ಚಿತ್ರದ ಉಳಿದ ಪಾತ್ರವರ್ಗದಲ್ಲಿ ಸುಧಾ ಬೆಳವಾಡಿ, ಪವಿತ್ರಾ ಲೋಕೇಶ್, ರಾಜು ತಾಳಿಕೋಟೆ ಮುಂತಾದವರಿದ್ದಾರೆ. ಅನೂಪ್ ಸೀಳಿನ್ ಅವರ ಸಂಗೀತ ಚಿತ್ರಕ್ಕಿದ್ದು ಹೊಸದಾಗಿ ಮೂರು ಹಾಡುಗಳನ್ನು ಸೇರಿಸಿ ಚಿತ್ರಕ್ಕೆ ಹೊಸ ಸ್ಪರ್ಶ ನೀಡಿದ್ದಾರೆ.

ರೋಜ್ ಪ್ರೀತಿಯ ರಾಯಭಾರಿ

ಯುವ ಪ್ರೇಮಿಗಳು ಬಯಸುವಂತಹ ಕೆಲವು ರೊಮ್ಯಾಂಟಿಕ್ ಸನ್ನಿವೇಶಗಳು ಚಿತ್ರದಲ್ಲಿದ್ದು, ಪ್ರಮುಖವಾಗಿ ಅಜಯ್ ರಾವ್ ಜೊತೆಗಿನ ಶ್ರಾವ್ಯಾ ಲಿಪ್ ಲಾಕ್ ಚುಂಬನ ದೃಶ್ಯ ಎಲ್ಲರ ಗಮನಸೆಳೆದಿದೆ. ಚಿತ್ರದ ಅಡಿಬರಹ 'ಪ್ರೀತಿಯ ರಾಯಭಾರಿ' ಎಂಬುದು.

English summary
Kannada movie Rose is all set to hit screens across the state on July 4. The film has Krishna Ajai Rao and Shravya in the lead roles. The romantic movie directed by Sahana Murthy.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada