Don't Miss!
- News ‘ದೇವೇಗೌಡ್ರು ಕೋಲಾರದಲ್ಲಿ ಕುಟುಂಬದವರಿಗೆ ಬಿಟ್ಟು ಕಾರ್ಯಕರ್ತರಿಗೆ ಟಿಕೆಟ್ ಯಾಕೆ ಕೊಟ್ರು ಗೊತ್ತಾ?’
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಂದ್ಯಾ ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಕನ್ನಡದ 'ರುದ್ರಿ'ಗೆ ಎರಡು ಪ್ರಶಸ್ತಿ
ಕನ್ನಡ ಸಿನಿಮಾ 'ರುದ್ರಿ'ಗೆ ವಿಂದ್ಯಾ ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಎರಡು ಪ್ರಮುಖ ಪ್ರಶಸ್ತಿ ನೀಡಲಾಗಿದೆ.
ಬೀರಬಲ್ಲ ಹುಟ್ಟಿದ ಮಧ್ಯಪ್ರದೇಶದ ಸಿಧಿಯಲ್ಲಿ ಜನವರಿ 8 ರಿಂದ ಜನವರಿ 10 ರ ವರೆಗೆ ವಿಂದ್ಯಾ ಅಂತರರಾಷ್ಟ್ರೀಯ ಸಿನಿಮೋತ್ಸವ ನಡೆಯಿತು.
ವಿಂದ್ಯಾ ಸಿನಿಮಾ ಉತ್ಸವದಲ್ಲಿ 'ರುದ್ರಿ'ನಲ್ಲಿ ನಟಿಸಿರುವ ಪಾವನಾ ಗೌಡ ಅವರಿಗೆ ಉತ್ತಮ ನಟಿ ಪ್ರಶಸ್ತಿ ದೊರೆತಿದೆ. ಜೊತೆಗೆ ಸಿನಿಮಾ ಉತ್ಸವದ ಎರಡನೇ ಅತ್ಯುತ್ತಮ ಫೀಚರ್ ಫಿಲಂ ಎಂಬ ಹೆಗ್ಗಳಿಕೆಗೆ ಸಹ 'ರುದ್ರಿ' ಭಾಜನವಾಗಿದೆ.
46 ದೇಶಗಳ ಸುಮಾರು 350 ಕ್ಕೂ ಹೆಚ್ಚು ಸಿನಿಮಾಗಳು ಸಿನಿಮಾ ಉತ್ಸವದಲ್ಲಿ ಭಾಗವಹಿಸಿದ್ದವು. ಅಂತಿಮ ಸುತ್ತಿನಲ್ಲಿ ರುದ್ರಿ ಜೊತೆಯಲ್ಲಿ ಇನ್ನೂ 14 ಸಿನಿಮಾಗಳು ಇದ್ದವು. ಕೊನೆಗೆ 'ರುದ್ರಿ' ಎರಡನೇ ಅತ್ಯುತ್ತಮ ಸಿನಿಮಾ ಎಂಬ ಪ್ರಶಸ್ತಿಗೆ ಭಾಜನವಾಯಿತು. ಪ್ರಶಸ್ತಿಯನ್ನು ನಿರ್ದೇಶಕ ಬಡಿಗೇರ್ ದೇವೇಂದ್ರ ಸ್ವೀಕರಿಸಿದರು.
'ರುದ್ರಿ' ಸಿನಿಮಾಕ್ಕೆ ಪ್ರಶಸ್ತಿ ಬಂದಿದ್ದಕ್ಕೆ ಚಿತ್ರತಂಡ ಅತೀವ ಸಂತಸ ವ್ಯಕ್ತಪಡಿಸಿದ್ದು, ಪ್ರಶಸ್ತಿಯು ಇಡೀಯ ಚಿತ್ರತಂಡದ ಶ್ರಮದ ಫಲ ಎಂದಿದೆ.
Recommended Video
ಅತ್ಯಾಚಾರಕ್ಕೆ ಒಳಗಾದ ಯುವತಿಯೊಬ್ಬಳು ತನ್ನ ಮೇಲೆ ಅತ್ಯಾಚಾರ ಎಸಗಿದವರ ವಿರುದ್ಧ ಸೇಡು ತೀರಿಸಿಕೊಳ್ಳುವ ಕತೆಯನ್ನು ಈ ಸಿನಿಮಾ ಹೊಂದಿದೆ. ಸಿನಿಮಾಕ್ಕೆ ಸಾಧುಕೋಕಿಲ ಸಂಗೀತ ನೀಡಿದ್ದು, ಸಿ.ಆರ್.ಮಂಜುನಾಥ ಸಿನಿಮಾ ನಿರ್ಮಿಸಿದ್ದಾರೆ.