twitter
    For Quick Alerts
    ALLOW NOTIFICATIONS  
    For Daily Alerts

    ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರತಿಷ್ಠಿತ ಪ್ರಶಸ್ತಿ ಬಾಚಿಕೊಂಡ ಕನ್ನಡದ 'ರುದ್ರಿ'

    |

    ಕನ್ನಡ ಸಿನಿಮಾವೊಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಆ ಮೂಲಕ ಭಾರತೀಯ ಸಿನಿರಂಗಕ್ಕೆ, ವಿಶೇಷವಾಗಿ ಕನ್ನಡ ಸಿನಿರಂಗಕ್ಕೆ ಹೆಮ್ಮೆ ತಂದಿದೆ.

    Recommended Video

    ಬಾಬಾ ರಾಮ್ ದೇವ್ ಜೊತೆ ಯೋಗ ಮಾಡಿದ ಶಿವಣ್ಣ | Ramdev | Shivanna | Yoga | Filmibeat Kannada

    ಇತ್ತೀಚೆಗೆ ಇಟಲಿಯಲ್ಲಿ ನಡೆದ ಓನಿರೋಸ್ ಚಿತ್ರೋತ್ಸವದಲ್ಲಿ ಕನ್ನಡದ 'ರುದ್ರಿ' ಸಿನಿಮಾ ಎರಡೆರಡು ಪ್ರಶಸ್ತಿಯನ್ನು ಗಳಿಸಿಕೊಂಡಿದೆ. ಚಿತ್ರದ ನಟನೆಗಾಗಿ ಪಾವನಾ ಗೌಡ ಅತ್ಯುತ್ತಮ ನಟಿ ಹಾಗೂ ಚಿತ್ರದ ಕ್ರಿಯಾಶೀಲ ಪೋಸ್ಟರ್‌ಗಾಗಿ ಅತ್ಯುತ್ತಮ ಪೋಸ್ಟರ್ ಪ್ರಶಸ್ತಿಗಳು 'ರುದ್ರಿ'ಗೆ ದೊರೆತಿವೆ.

    ಒನಿರೋಸ್ ಚಿತ್ರೋತ್ಸವದಲ್ಲಿ ರುದ್ರಿ ಇನ್ನಿತರ ನಾಲ್ಕು ವಿಭಾಗಗಳಲ್ಲಿಯೂ ನಾಮನಿರ್ದೇಶನಗೊಂಡಿತ್ತು. ಅಂತಿಮವಾಗಿ 45 ಚಿತ್ರಗಳನ್ನ ಮಾತ್ರ ಆಯ್ಕೆ ಮಾಡಿಕೊಳ್ಳಲಾಗಿತ್ತು. ಆ ಪೈಪೋಟಿಯಲ್ಲಿ ರುದ್ರಿ ಚಿತ್ರ ಪ್ರಶಸ್ತಿ ಗೆದ್ದಿದೆ.

    ಪ್ರಶಸ್ತಿ ಸಿಕ್ಕಿದ್ದಕ್ಕೆ ಪುಳಕಿತರಾಗಿರುವ ಪಾವನಾ ಗೌಡ

    ಪ್ರಶಸ್ತಿ ಸಿಕ್ಕಿದ್ದಕ್ಕೆ ಪುಳಕಿತರಾಗಿರುವ ಪಾವನಾ ಗೌಡ

    ಸದ್ಯ ಅಂತರಾಷ್ಟ್ರೀಯ ಪ್ರಶಸ್ತಿ ಬಾಚಿಕೊಂಡಿದ್ದರ ಕುರಿತು ಸಂತಸ ವ್ಯಕ್ತಪಡಿಸಿದ ನಟಿ ಪಾವನಾ, "ರುದ್ರಿ ನನ್ನ ಪಾಲಿಗೆ ಕೇವಲ ಒಂದು ಸಿನಿಮಾ ಅಥವಾ ಪಾತ್ರವಾಗಿರಲಿಲ್ಲ. ಇಡೀ ಸ್ತ್ರೀ ಸಂಕುಲದ ಧ್ವನಿಯೇ ಈ ಕಥೆಯಲ್ಲಿತ್ತು. ನನಗೆ ಎಲ್ಲ ರೀತಿಯಲ್ಲಿಯೂ ಇದು ಸವಾಲೊಡ್ಡುವಂತಹ ಪಾತ್ರವಾಗಿತ್ತು. ಆದರೆ ಈಗ ಅದಕ್ಕೆ ಸಿಗುತ್ತಿರುವ ಮನ್ನಣೆ ನೋಡಿದಾಗ ನನಗೆ ಪಾತ್ರಕ್ಕೆ ನ್ಯಾಯ ಒದಗಿಸಿದ ತೃಪ್ತಿ ಕಾಣುತ್ತಿದೆ. ಇಡೀ ಚಿತ್ರ ತಂಡದ ಸಂಪೂರ್ಣ ಶ್ರಮದ ಫಲದಿಂದಾಗಿ ಸಿನಿಮಾ ಎಲ್ಲೆಡೆಯೂ ಗಮನ ಸೆಳೆಯುತ್ತಿದೆ. ಹೀಗಾಗಿ ಈ ಪ್ರಶಸ್ತಿಯ ಪಾಲು ಕೂಡಾ ಎಲ್ಲರಿಗೂ ಸಲ್ಲಬೇಕು," ಎಂದರು.

    'ರುದ್ರಿ' ಸಿನಿಮಾ ನಿರ್ದೇಶಕರ ಮಾತು

    'ರುದ್ರಿ' ಸಿನಿಮಾ ನಿರ್ದೇಶಕರ ಮಾತು

    ಈ ಕುರಿತು ಮಾತನಾಡಿದ ನಿರ್ದೇಶಕ ಬಡಿಗೇರ ದೇವೇಂದ್ರ, "ಚಿತ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದಿರುವುದು ನಿಜಕ್ಕೂ ನಮಗೆ ಹೆಮ್ಮೆಯ ಸಂಗತಿಯೇ. ಅದು ಡಬಲ್ ಧಮಾಕಾ. ಈ ಚಿತ್ರದ ಮೇಲೆ ಸಾಕಷ್ಟು ಭರವಸೆ ಇಟ್ಟುಕೊಂಡಿದ್ದೇವೆ. ಪ್ರಶಸ್ತಿಗಳ ಜೊತೆಗೆ ಜನ ಮನ್ನಣೆಯೂ ಸಿಕ್ಕರೆ ನಮ್ಮೆಲರ ಶ್ರಮ ಸಾರ್ಥಕ," ಎಂದರು.

    ಸಾಮಾಜಿಕ ಸನ್ನಿವೇಶದಲ್ಲಿ 'ರುದ್ರಿ' ಪ್ರಸ್ತುತ ಸಿನಿಮಾ

    ಸಾಮಾಜಿಕ ಸನ್ನಿವೇಶದಲ್ಲಿ 'ರುದ್ರಿ' ಪ್ರಸ್ತುತ ಸಿನಿಮಾ

    "ಈ ಚಿತ್ರವನ್ನು ಸಾಮಾಜಿಕ ಹೊಣೆಗಾರಿಕೆಯ ದೃಷ್ಟಿಯಿಂದ ನಿರ್ಮಾಣ ಮಾಡಿದ್ವಿ. ಇಂದಿನ ಸಾಮಾಜಿಕ ಸನ್ನಿವೇಶದಲ್ಲಿ 'ರುದ್ರಿ' ಚಿತ್ರ ಹೆಚ್ಚು ಪ್ರಸ್ತುತತೆಯನ್ನು ಹೊಂದಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಸಿನಿಮಾವನ್ನು ಗುರುತಿಸಿ ಪ್ರಶಸ್ತಿ ನೀಡಿದ್ದು, ನಮ್ಮ ಭರವಸೆಯನ್ನು ಹೆಚ್ಚಿಸಿದೆ. ಸದ್ಯದಲ್ಲೇ ಚಿತ್ರ ಬಿಡುಗಡೆ ಮಾಡುವ ಯೋಚನೆಯಿದೆ. ಪ್ರೇಕ್ಷಕರಿಗೆ ಖಂಡಿತಾ ಈ ಚಿತ್ರ ಇಷ್ಟವಾಗುತ್ತೆ ಅನ್ನೋ ವಿಶ್ವಾಸವಿದೆ," ಎನ್ನುತ್ತಾರೆ ಚಿತ್ರದ ನಿರ್ಮಾಪಕ ಸಿ ಆರ್ ಮಂಜುನಾಥ.

    ರುದ್ರಿ ಚಿತ್ರಕ್ಕೆ ಸಾಧು ಕೋಕಿಲಾ ಸಂಗೀತ

    ರುದ್ರಿ ಚಿತ್ರಕ್ಕೆ ಸಾಧು ಕೋಕಿಲಾ ಸಂಗೀತ

    ನಟಿ ಪಾವನಾಗೌಡ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ 'ರುದ್ರಿ' ಚಿತ್ರಕ್ಕೆ ಸಾಧು ಕೋಕಿಲ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಿ.ಆರ್.ಮಂಜುನಾಥ ನಿರ್ಮಾಣ ಮಾಡಿದ್ದು, ಬಡಿಗೇರ ದೇವೇಂದ್ರ ಅವರ ನಿರ್ದೇಶನವಿದೆ. ದಿಟ್ಟ ಹೆಣ್ಣು ಸಮಾಜ ಘಾತುಕ ಶಕ್ತಿಗಳನ್ನ ಹೇಗೆ ಮಟ್ಟ ಹಾಕುತ್ತಾಳೆ ಎಂಬುದನ್ನು ಚಿತ್ರದಲ್ಲಿ ಬಿಂಬಿಸಲಾಗಿದೆ.

    ರಂಗಭೂಮಿಯ ಪ್ರತಿಭಾವಂತ ನಟರು ಸಿನಿಮಾದಲ್ಲಿದ್ದಾರೆ

    ರಂಗಭೂಮಿಯ ಪ್ರತಿಭಾವಂತ ನಟರು ಸಿನಿಮಾದಲ್ಲಿದ್ದಾರೆ

    ಹೆಣ್ಣು ತನಗೆ ಅನ್ಯಾಯವಾದಾಗ ಅದನ್ನ ಸಹಿಸಿಕೊಳ್ಳದೆ ಅದಕ್ಕೆ ಪ್ರತಿರೋಧಿಸುವ, ಅಗತ್ಯ ಬಿದ್ದರೆ ಪ್ರತೀಕಾರ ತೆಗೆದುಕೊಳ್ಳುವುದು ಚಿತ್ರದ ಕಥಾ ವಸ್ತು. ರಂಗಭೂಮಿಯ ಅನೇಕ ಪ್ರತಿಭಾವಂತ ನಟರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

    English summary
    Kannada Movie Rudri Garbed two International Film Fest Award in Itali. Actress Pawanagowda selected as best actress.
    Tuesday, March 17, 2020, 21:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X