ಶಿವಣ್ಣ-ಶ್ರದ್ಧಾ ಶ್ರೀನಾಥ್ ಫ್ಯಾಮಿಲಿ ಫೋಟೋ ನೋಡಿ

By Bharath Kumar

Recommended Video

ಶಿವಣ್ಣ- ಶ್ರದ್ಧಾ ಮಧ್ಯೆ ಮೂರನೇ ವ್ಯಕ್ತಿ ಎಂಟ್ರಿ | Filmibeat Kannada

'ಟಗರು' ಚಿತ್ರದ ನಂತರ ಶಿವರಾಜ್ ಕುಮಾರ್ 'ಕವಚ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬಹುತೇಕ ಶೂಟಿಂಗ್ ಮುಗಿಸಿರುವ ಹ್ಯಾಟ್ರಿಕ್ ಹೀರೋ ಈಗ 'ರುಸ್ತುಂ' ಚಿತ್ರದಲ್ಲಿ ಬ್ಯುಸಿಯಿದ್ದಾರೆ.

ಖ್ಯಾತ ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನ ಮಾಡುತ್ತಿರುವ 'ರುಸ್ತುಂ' ಚಿತ್ರದಲ್ಲಿ ಸೆಂಚುರಿಸ್ಟಾರ್ ಪೊಲೀಸ್ ಕಾಪ್ ಆಗಿದ್ದು, ಈಗಾಗಲೇ ಫಸ್ಟ್ ಲುಕ್ ಪೋಸ್ಟರ್ ಮತ್ತು ಫೋಟೋಶೂಟ್ ಮೂಲಕ ಹೆಚ್ಚು ಗಮನ ಸೆಳೆಯುತ್ತಿದೆ.

ವಿಶೇಷ ಅಂದ್ರೆ, ಶಿವರಾಜ್ ಕುಮಾರ್ ಜೊತೆ ಇದೇ ಮೊದಲ ಬಾರಿಗೆ ಶ್ರದ್ಧಾ ಶ್ರೀನಾಥ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಇದೀಗ ಇವರಿಬ್ಬರು ಒಟ್ಟಿಗೆ ಶೂಟಿಂಗ್ ನಲ್ಲಿ ಭಾಗವಹಿಸಿದ್ದು, ಫೋಟೋಗಳು ಬಹಿರಂಗವಾಗಿದೆ.

Kannada movie rusthum shooting progress

ಇನ್ನೊಂದು ವಿಶೇಷ ಅಂದ್ರೆ, ಶಿವರಾಜ್ ಕುಮಾರ್ ಮತ್ತು ಶ್ರದ್ಧಾ ಶ್ರೀನಾಥ್ ಅವರ ಜೊತೆಯಲ್ಲಿ ನಟಿ ಮಯೂರಿ ಕೂಡ ಕಾಣಿಸಿಕೊಂಡಿದ್ದು, ಈ ಮೂವರೊಂದಿಗೆ ನೈಲಾ ಎಂಬ ಮುದ್ದು ಬಾಲಕಿ ಕೂಡ ಅಭಿನಯಿಸುತ್ತಿದ್ದಾರೆ.

ಬಹುಶಃ ಈ ಫೋಟೋಗಳನ್ನ ನೋಡುತ್ತಿದ್ದರೇ, ಖಡಕ್ ಪೊಲೀಸ್ ಆಫೀಸರ್ ಶಿವಣ್ಣನಿಗೆ ಸಂಪ್ರದಾಯಸ್ಥ ಪತ್ನಿ ಪಾತ್ರದಲ್ಲಿ ಶ್ರದ್ಧಾ ಶ್ರೀನಾಥ್ ಹಾಗೂ ಶ್ರದ್ಧಾಗೋ ಅಥವಾ ಶಿವಣ್ಣಗೋ ತಂಗಿ ಪಾತ್ರದಲ್ಲಿ ಮಯೂರಿ ನಟಿಸುತ್ತಿರಬಹುದು ಎನಿಸುತ್ತಿದೆ. ಆದ್ರೆ, ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ಇನ್ನು ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಮಾಡುತ್ತಿದ್ದು ಡೈರೆಕ್ಟರ್ ಸ್ಪೆಷಲ್, ಟಗರು ಸಿನಿಮಾಗೆ ಕ್ಯಾಮೆರಾ ವರ್ಕ್ ಮಾಡಿದ್ದ ಮಹೇಂದ್ರ ಸಿಂಹ ಅವರೇ ರುಸ್ತುಂ ಚಿತ್ರಕ್ಕೆ ಸಿನಿಮಾಟೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದಾರೆ. ಜಯಣ್ಣ-ಭೋಗೇಂದ್ರ ರುಸ್ತುಂ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದಾರೆ.

More from Filmibeat

English summary
Hatric hero Shiva rajkumar, Shraddha Srinath, mayuri starrer Kannada movie rusthum shooting starts. Film directed by stunt master ravivarma, music by Anoop Seelin.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X