»   »  ಟ್ರೈಲರ್: ಕ್ರೇಜಿಸ್ಟಾರ್ ಹಾದಿಯಲ್ಲೇ ಕ್ರೇಜಿಪುತ್ರನ 'ಸಾಹೇಬ' ಎಂಟ್ರಿ

ಟ್ರೈಲರ್: ಕ್ರೇಜಿಸ್ಟಾರ್ ಹಾದಿಯಲ್ಲೇ ಕ್ರೇಜಿಪುತ್ರನ 'ಸಾಹೇಬ' ಎಂಟ್ರಿ

Posted By:
Subscribe to Filmibeat Kannada

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ ಅಭಿನಯದ ಚೊಚ್ಚಲ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಅಂದು 'ಪ್ರೇಮಲೋಕ'ದಲ್ಲಿ ರವಿಚಂದ್ರನ್ ಅಬ್ಬರಿಸಿದ್ದಾಗೆ, ಇಂದು 'ಸಾಹೇಬ' ಚಿತ್ರದಲ್ಲಿ ಮನೋರಂಜನ್ ಮಿಂಚಿದ್ದಾರೆ.

ನಿರೀಕ್ಷೆಯಂತೆ ಟ್ರೈಲರ್ ನಲ್ಲಿ ಮನೋರಂಜನ್ ಫರ್ಫಾಮೆನ್ಸ್ ಇಷ್ಟವಾಗಿದ್ದು, ತಮ್ಮ ಜಬರ್ ದಸ್ತ್ ಫೈಟ್ಸ್, ಮಸ್ತ್ ಡ್ಯಾನ್ಸ್ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ.[ಮನೋರಂಜನ್ 'ಸಾಹೇಬ'ನಿಗೆ 'ಮಾಸ್ಟರ್ ಪೀಸ್' ಶಾನ್ವಿ ಸಾಥ್]

Kannada Movie Saheba Trailer Released

ಅಂದ್ಹಾಗೆ, ಈ ಚಿತ್ರವನ್ನ ಭರತ್ ನಿರ್ದೇಶನ ಮಾಡಿದ್ದು, ಜಯಣ್ಣ ಕಂಬೈನ್ಸ್ ಅಡಿಯಲ್ಲಿ ಜಯಣ್ಣ-ಭೋಗೇಂದ್ರ ನಿರ್ಮಾಣ ಮಾಡಿದ್ದಾರೆ. ಇನ್ನೂ ಚಿತ್ರದಲ್ಲಿ ಮನೋರಂಜನ್ ಗೆ 'ಮಾಸ್ಟರ್ ಪೀಸ್' ಖ್ಯಾತಿಯ ಶಾನ್ವಿ ಶ್ರೀವಸ್ತವ್ ಜೋಡಿಯಾಗಿದ್ದಾರೆ.[ವಿಪರೀತ ಸೆಳೆದ 'ಸಾಹೇಬ' ನ ಹಾಡುಗಳನ್ನು ಕೇಳಿದ್ರ?]

ಈಗಾಗಲೇ ಚಿತ್ರದ ಹಾಡುಗಳು ಬಿಡುಗಡೆಯಾಗಿದ್ದು, ವಿ.ಹರಿಕೃಷ್ಣ ಅವರ ಸಂಗೀತ ಮೋಡಿ ಮಾಡುತ್ತಿದೆ. ಅದರಲ್ಲೂ ರವಿಚಂದ್ರನ್ 1985 ರಲ್ಲಿ ಅಭಿನಯಿಸಿದ್ದ 'ನಾನು ನನ್ನ ಹೆಂಡ್ತಿ' ಚಿತ್ರದ 'ಯಾರೇ ನೀನು ರೋಜಾ ಹೂವೆ' ಹಾಡನ್ನ ಇಲ್ಲಿ ಮತ್ತೆ ಬಳಸಲಾಗಿದ್ದು, 'ಸಾಹೇಬ'ನ ಪ್ರಮುಖ ಆಕರ್ಷಣೆಯಾಗಿದೆ.[ಅಪ್ಪನ ಎವರ್ ಗ್ರೀನ್ ಹಾಡಿಗೆ 'ಮನೋರಂಜನ್' ಮಸ್ತ್ ಡ್ಯಾನ್ಸ್ ! ]

'ಸಾಹೇಬ' ಟ್ರೈಲರ್ ಇಲ್ಲಿದೆ ನೋಡಿ

English summary
Crazy Star Ravichandran Son Manoranjan Starrer Kannada Movie 'Saheba' Trailer Released. The Movie Directed By Bharath and Shanvi Srivasthav are in the Female Lead.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada