»   » ಟೀಸರ್: 'ಸಮಯದ ಹಿಂದೆ ಸವಾರಿ'

ಟೀಸರ್: 'ಸಮಯದ ಹಿಂದೆ ಸವಾರಿ'

Posted By:
Subscribe to Filmibeat Kannada

ರಂಗ ಪ್ರೇಮಿ ರಾಜ್ ಗುರು ಹೊಸಕೋಟೆ ನಿರ್ದೇಶನದ 'ಸಮಯದ ಹಿಂದೆ ಸವಾರಿ' ಚಿತ್ರದ ಆಡಿಯೋ ಕಳೆದ ನವೆಂಬರ್ ತಿಂಗಳಲ್ಲಿ ಬಿಡುಗಡೆ ಆಗಿತ್ತು. ನಂತರ ಎಲ್ಲೂ ಸದ್ದು ಮಾಡದ ಚಿತ್ರತಂಡ ಈಗ ಸಿನಿಮಾ ದ ಅಫೀಶಿಯಲ್ ಟೀಸರ್ ಬಿಡುಗಡೆ ಮಾಡಿದೆ.

'ಸಮಯದ ಹಿಂದೆ ಸವಾರಿ', ಪತ್ರಕರ್ತ ಜೋಗಿ ಅವರ 'ನದಿಯ ನೆನಪಿನ ಹಂಗು' ಕಾದಂಬರಿ ಆಧಾರಿತ ಸಿನಿಮಾ. ಈಗಾಗಲೇ ಜೋಗಿ ಅವರ ಈ ಕಾದಂಬರಿ 'ಬಲ್ಲ ಮೂಲಗಳ ಪ್ರಕಾರ' ಎಂಬ ಹೆಸರಿನಲ್ಲಿ ನಾಟಕವಾಗಿದೆ. ನಿರ್ದೇಶಕ ರಾಜ್ ಗುರು ಹೊಸ ಕೋಟೆ ''ಸಮಯದ ಹಿಂದೆ ಸವಾರಿ' ಚಿತ್ರಕ್ಕೆ 'ಬಲ್ಲ ಮೂಲಗಳ ಪ್ರಕಾರ ಆತ' ಎಂಬ ಅಡಿ ಶೀರ್ಷಿಕೆ ನೀಡಿದ್ದಾರೆ.

Kannada Movie 'Samayada Hinde Savari' Official Teaser

ಅಂದಹಾಗೆ 'ಸಮಯದ ಹಿಂದೆ ಸವಾರಿ' ಚಿತ್ರಕ್ಕೆ ಚಿತ್ರಕಥೆ, ಸಾಹಿತ್ಯ, ಸಂಗೀತ ಮತ್ತು ಸಂಭಾಷಣೆಯನ್ನು ರಾಜ್ ಗುರು ಅವರೇ ಬರೆದಿದ್ದು, ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಸಿಷ್ಠ ಸಿಂಹ ಟೀಸರ್ ಗೆ ಧ್ವನಿ ನೀಡಿದ್ದಾರೆ. ರಾಹುಲ್ ಹೆಗ್ಡೆ, ರಂಜಿತ್ ಶೆಟ್ಟಿ ಮತ್ತು ಪ್ರವೀಣ್ ಹೆಗ್ಡೆ ಚಿತ್ರದ ನಿರ್ಮಾಣ ಹೊಣೆ ಹೊತ್ತಿದ್ದಾರೆ.

rajguru hosakote

ಚಿತ್ರದಲ್ಲಿ ಮೂವರು ನಿರ್ಮಾಪಕರು ಸಹ ಅಭಿನಯಿಸುತ್ತಿದ್ದು, ರಾಹುಲ್ ಹೆಗಡೆ ಚಿತ್ರದ ನಾಯಕ. ಇನ್ನೂ ಚಿತ್ರದ ನಾಯಕಿ ಆಗಿ ಕಹಾನಾ ಬಣ್ಣ ಹಚ್ಚಿದ್ದು, ಬಹುಸಂಖ್ಯಾತ ಹೊಸಬರ ತಾರಾಬಳಗ ಚಿತ್ರದಲ್ಲಿದೆ. ಸುನೀತ್ ಹಲಗೇರಿ ಛಾಯಾಗ್ರಹಣ, ರಾಜಣ್ಣ ಶಾಂತು ಸಂಕಲನ ಸಿನಿಮಾಗಿದೆ. ಸಮಯದ ಹಿಂದೆ ಸವಾರಿ' ಚಿತ್ರದ ಟೀಸರ್ ಇಲ್ಲಿದೆ... ಲಿಂಕ್ ಕ್ಲಿಕ್ ಮಾಡಿ.

English summary
Bunt Lion Films International Presents the Official Teaser of 'Samayada Hinde Savari', based on the novel "Nadiya Nenapina Hangu" written by Girish rao Hatwar(JOGI) Released.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada