ತೆಲುಗಿಗೆ ರೀಮೇಕ್ ಆಗಲಿದೆ ಕನ್ನಡದ 'ಸಂಕಷ್ಟಕರ ಗಣಪತಿ'.!

By Harshitha

ಹೊಸಬರ ದಂಡೇ ಇರಲಿ, ಲೋ ಬಜೆಟ್ ಚಿತ್ರವೇ ಆಗಿರಲಿ... ಪ್ರಾಮಾಣಿಕ ಪ್ರಯತ್ನ ಹಾಗೂ ಒಳ್ಳೆಯ ಕಥೆ ಇದ್ದರೆ ಸಿನಿಮಾ ಖಂಡಿತ ಸೋಲಲ್ಲ ಎನ್ನುವುದಕ್ಕೆ ಲೇಟೆಸ್ಟ್ ಉದಾಹರಣೆಯೇ 'ಸಂಕಷ್ಟಕರ ಗಣಪತಿ' ಸಿನಿಮಾ.

'ಸಂಕಷ್ಟಕರ ಗಣಪತಿ' ಚಿತ್ರದಲ್ಲಿ ಲಿಖಿತ್ ಶೆಟ್ಟಿ ಸೇರಿದಂತೆ ಹೊಸ ಮುಖಗಳೇ ಇವೆ. ಸಿಂಪಲ್ ಆಗಿ ಅಷ್ಟೇ ಚೆಂದವಾಗಿ ತಯಾರಾಗಿರುವ 'ಸಂಕಷ್ಟಕರ ಗಣಪತಿ' ಸಿನಿಮಾ ಬಿಡುಗಡೆ ಆಗಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

ಕ್ಲಾಸ್ ಆಡಿಯನ್ಸ್ ಗೆ ಹೇಳಿ ಮಾಡಿಸಿದ ಹಾಗೆ ಇರುವ ಈ ಸಿನಿಮಾ ಇದೀಗ ತೆಲುಗಿಗೆ ರೀಮೇಕ್ ಆಗುತ್ತಿದೆ. ಹೌದು, ಈ ವಿಚಾರವನ್ನ ಖುದ್ದು ಲಿಖಿತ್ ಶೆಟ್ಟಿ ಸ್ಪಷ್ಟ ಪಡಿಸಿದ್ದಾರೆ.

Kannada Movie Sankashta Kara Ganapathi to be remade in Telugu

'ಸಂಕಷ್ಟಕರ ಗಣಪತಿ' ಬಿಡುಗಡೆ ಆದ ಎರಡನೇ ದಿನಕ್ಕೆ ತೆಲುಗಿಗೆ ರೀಮೇಕ್ ರೈಟ್ಸ್ ಸೇಲ್ ಆಗಿದೆ. ಈ ಬಗ್ಗೆ ಲಿಖಿತ್ ಶೆಟ್ಟಿ ಫುಲ್ ಖುಷಿಯಾಗಿದ್ದಾರೆ.

ನಾಯಕನಿಗೆ ತನ್ನ 'ಕರ' (ಕೈ) ತನಗೆ ಹೇಗೆಲ್ಲಾ ತೊಂದರೆ ಕೊಡುತ್ತದೆ ಅನ್ನೋದನ್ನೇ ಇಟ್ಟುಕೊಂಡು 'ಸಂಕಷ್ಟ'ಕರ'ಗಣಪತಿ' ಚಿತ್ರಕಥೆಯನ್ನ ಹೆಣೆಯಲಾಗಿದೆ. ಕಾನ್ಸೆಪ್ಟ್ ಎಷ್ಟು ಫ್ರೆಶ್ ಆಗಿದ್ಯೋ, ನಿರೂಪಣಾ ಶೈಲಿ ಹಾಗೂ ಚಿತ್ರಕಥೆ ಕೂಡ ಅಷ್ಟೇ ಫ್ರೆಶ್ ಆಗಿದೆ.

ಶಾರ್ಟ್ ಫಿಲ್ಮ್ಸ್ ಮೂಲಕ ಹೆಸರು ಮಾಡಿರುವ ಅರ್ಜುನ್ ಕುಮಾರ್ ಮೊಟ್ಟ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿರುವ ಸಿನಿಮಾ 'ಸಂಕಷ್ಟಕರ ಗಣಪತಿ'. ಈ ಚಿತ್ರದ ಮೂಲಕ ಒಂದು ಅಪರೂಪದ ಖಾಯಿಲೆ (ಏಲಿಯನ್ ಹ್ಯಾಂಡ್ ಸಿಂಡ್ರೋಮ್) ಬಗ್ಗೆಯೂ ನಿರ್ದೇಶಕರು ವಿವರಣೆ ನೀಡಿದ್ದಾರೆ. ಇದನ್ನೆಲ್ಲಾ ನೋಡಿದ್ಮೇಲೆಯೇ, ತೆಲುಗಿನ ನಿರ್ಮಾಪಕರು ರೀಮೇಕ್ ರೈಟ್ಸ್ ಖರೀದಿ ಮಾಡಲು ಮುಂದಾಗಿದ್ದು.

ಅಂದ್ಹಾಗೆ, 'ಸಂಕಷ್ಟಕರ ಗಣಪತಿ' ಚಿತ್ರವನ್ನ ನೀವು ನೋಡಿದ್ರಾ.? ಚಿತ್ರದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂಬುದನ್ನ ನಮಗೆ ತಿಳಿಸಿ, ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

More from Filmibeat

English summary
Kannada Movie 'Sankashta Kara Ganapathi' to be remade in Telugu.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X