'ಶುಕ್ರದೆಸೆ' ಪೋಸ್ಟರ್ ನೋಡಿ ಮನಸೋತ ಪ್ರೇಕ್ಷಕರು

Recommended Video

Kannada Movie Shukradese Poster Released | FILMIBEAT KANNADA

ಸ್ಟಾರ್ ನಟರ ರೆಗ್ಯುಲರ್ ಸಿನಿಮಾಗಳನ್ನ ಹೊರತುಪಡಿಸಿ ಬೇರೆ ಏನಾದರೂ ಹೊಸತು ಬೇಕು ಎಂದು ನಿರೀಕ್ಷೆ ಮಾಡುತ್ತಿರುವ ಪ್ರೇಕ್ಷಕರಿಗೆ ಈಗ 'ಶುಕ್ರದೆಸೆ' ಸಿನಿಮಾ ಖುಷಿ ಕೊಡಬಹುದು. ಯಾಕಂದ್ರೆ, ಶುಕ್ರದೆಸೆ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು, ಕೇವಲ ಪೋಸ್ಟರ್ ಮೂಲಕವೇ ಗಮನ ಸೆಳೆದಿದೆ.

ಜೋಸೆಫ್ ನೀನಾಸಂ ನಿರ್ದೇಶನ ಮಾಡುತ್ತಿರುವ 'ಶುಕ್ರದೆಸೆ' ಸಿನಿಮಾ ಈಗ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿದೆ. ಸಮಾಜದ ವ್ಯವಸ್ಥೆಯ ವಿರುದ್ಧ ಮಾತನಾಡಲು ಸಾಧ್ಯವಾಗದೆ ಷಡ್ಯಂತ್ರಕ್ಕೆ ಬಲಿಯಾಗುವ ಅಮಾಯಕರು ಹಾಗೂ ಅಂತಹ ವ್ಯವಸ್ಥೆಯ ಸುತ್ತ ಕಥೆ ಹೆಣೆಯಲಾಗಿದೆ.

ಅನಿಲ್ ಬಿದಹಾಸ್, ಸೌಮ್ಯ ಜಗನ್ ಮೂರ್ತಿ, ಖುಷ್ಬು ಶೆಟ್ಟಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಆನಿಶಾ ಬಿದಹಾಸ್ ಅವರು ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ವಿಶೇಷ ಅಂದ್ರೆ, ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವುದು ಕೂಡ ಅನಿಲ್ ಬಿದಹಾಸ್ ಅವರೇ.

Kannada Movie Shukradese Poster Released

ಅಯ್ಯೋರಾಮ ಎಸ್ ಆರ್ ರಾಮಕೃಷ್ಣ ಅವರ ಸಂಗೀತ, ಅರ್ಜುನ್ ಅಜಿತ್ ಅವರ ಛಾಯಾಗ್ರಹಣ ಹೊಂದಿದೆ.

ನಿರ್ದೇಶಕ ಜೋಸೆಫ್ ಕುರಿತು

ಕೇರಳದ ತಿರುವನಂತಪುರಂ ಮೂಲದವರಾದ ಜೋಸೆಫ್, ಬಾಲ್ಯದಿಂದಲೇ ನಟನೆಯಲ್ಲಿ ಆಸಕ್ತಿ ರೂಢಿಸಿಕೊಂಡರು. ಅಭಿನಯ ರಂಗ ಅಧ್ಯಯನ ಸಂಸ್ಥೆಯಲ್ಲಿ ನಟನಾಗಿ, ತಂತ್ರಜ್ಞನಾಗಿ ರಂಗಭೂಮಿ ಜೊತೆ ನಂಟು ಬೆಳೆಸಿಕೊಂಡರು. ಚಲಚ್ಚಿತ್ರ ಎಂಬ ಫಿಲಂ ಸೊಸೈಟಿಯಲ್ಲಿ ಅಧ್ಯಯನ ಮಾಡಿ ಸಿನಿಮಾ ಬಗ್ಗೆಯೂ ಆಸಕ್ತಿ ಹೆಚ್ಚಿಸಿಕೊಂಡರು.

Kannada Movie Shukradese Poster Released

ಗಿರೀಶ್ ಕಾಸರವಳ್ಳಿ, ಪಿಎಚ್ ವಿಶ್ವನಾಥ್, ಜೇಕಬ್ ವರ್ಗೀಸ್, ಮಹೇಶ್, ಎಸ್ ಮಹೇಂದರ್ ಅಂತವರ ಬಳಿ ಸಹಾಯಕರಾಗಿ ಕೆಲಸ ಮಾಡಿದ್ದು, ಈಗ ಚೊಚ್ಚಲ ಬಾರಿಗೆ ನಿರ್ದೇಶನಕ್ಕೆ ಕೈಹಾಕಿದ್ದಾರೆ.

More from Filmibeat

English summary
Kannada movie Shukradese poster has released. the movie directed by Joseph Neenasam.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X