»   » ಮಾರ್ಚ್ 11ಕ್ಕೆ ಸಿಂಪಲ್ ಸುನಿಯ ಮತ್ತೊಂದು ಹಣೆಬರಹದ ಸಾಲು

ಮಾರ್ಚ್ 11ಕ್ಕೆ ಸಿಂಪಲ್ ಸುನಿಯ ಮತ್ತೊಂದು ಹಣೆಬರಹದ ಸಾಲು

Posted By:
Subscribe to Filmibeat Kannada

'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಕೊಟ್ಟ ನಿರ್ದೇಶಕ ಸಿಂಪಲ್ ಸುನಿ ಅವರು ಇನ್ನೊಂದು ಲವ್ ಸ್ಟೋರಿ ಹೊರತಂದಿದ್ದು ಮುಂದಿನ ವಾರದಲ್ಲಿ ಸಿನಿಮಾ ತೆರೆ ಕಾಣಲಿದೆ. ಮೊದಲ ಸಿನಿಮಾದಲ್ಲೂ ಹೊಸ ಪ್ರತಿಭೆಗಳಿಗೆ ಅವಕಾಶ ಕೊಟ್ಟ ಸುನಿ ಅವರು ಎರಡನೇ ಸಲ ಕೂಡ ಹೊಸಬರಿಗೆ ಮಣೆ ಹಾಕಿದ್ದಾರೆ.

ಚಿತ್ರದ ಆಡಿಯೋ ಹಾಗೂ ಟ್ರೈಲರ್ ಸೂಪರ್ ಹಿಟ್ ಆಗಿದ್ದು ಚಿತ್ರದ ಬಗ್ಗೆ ಗಾಂಧಿನಗರದಲ್ಲಿ ಪಾಸಿಟಿವ್ ಮಾತುಗಳು ಕೇಳಿಬರುತ್ತಿವೆ. ಇದೀಗ ಚಿತ್ರದ ಪ್ರೊಮೋಷನ್ ನಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಬಿಡುಗಡೆಯ ತರಾತುರಿಯಲ್ಲಿದೆ.[ಕೊಟ್ಟ ಮಾತನ್ನ ಉಳಿಸಿಕೊಂಡ ನಿರ್ದೇಶಕ 'ಸಿಂಪಲ್' ಸುನಿ!]


ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಇಟ್ಟುಕೊಂಡಿರುವ ನಿರ್ದೇಶಕ ಸಿಂಪಲ್ ಸುನಿ ಅವರು ಕೊಂಚ ಟೆನ್ಶಶನ್ ಮಾಡಿಕೊಂಡಂತಿದೆ. ಒಟ್ನಲ್ಲಿ ಸಖತ್ ಆಗಿರೋ ಡೈಲಾಗ್ಸ್ ಹಾಗೂ ಪಕ್ಕಾ ಫ್ಯಾಮಿಲಿ ಎಂರ್ಟಟೈನರ್ ಆಗಿರುವ 'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ' ಸಿನಿಮಾ ಪ್ರೇಕ್ಷಕರಿಗೆ ಇಷ್ಟ ಆಗೋದು ಖಂಡಿತ.[ಪ್ರವೀಣ್-ಮೇಘನಾ ಗಾಂವ್ಕರ್ ಜೊತೆ ಡಿನ್ನರ್ ಮಾಡುವ ಆಸೆ ಇದ್ಯಾ?]


ಅದೇನೇ ಇರಲಿ ಚಿತ್ರಬಿಡುಗಡೆಯ ಬಗ್ಗೆ ನಿರ್ದೇಶಕ ಸಿಂಪಲ್ ಸುನಿ ಅವರು ಫೇಸ್ ಬುಕ್ಕಿನಲ್ಲಿ ಏನೇನ್ ಹೇಳಿಕೊಂಡಿದ್ದಾರೆ ಅನ್ನೋದನ್ನ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ..


ಹಣೆಬರಹದ ಸಾಲು

'ಸಿಂಪಲ್ಲಾಗ್ ಇನ್ನೊಂದು..ಮಾರ್ಚ್ ಹನ್ನೊಂದು ಸೆನ್ಸಾರ್ U/A ಮುಗಿದಿರಲು... ಮಾರ್ಚ್ ಹನ್ನೊಂದಕ್ಕೆ ಮತ್ತೊಂದು ಹಣೆಬರಹದ ಸಾಲು.. ಎಂದು ಸಿಂಪಲ್ ಸುನಿ ಅವರು ಸ್ಟೇಟಸ್ ಹಾಕಿಕೊಂಡಿದ್ದಾರೆ.


ಧೂಮಷಟಕದಲ್ಲಿ ಸವಾರಿ

ಬೆಂಗಳೂರಿನ ಎಲ್ಲಾ ಬಿ.ಎಂ.ಟಿ.ಸಿ ಧೂಮಷಟಕ ಗಾಡಿಯಲ್ಲಿ ಸಿಂಪಲ್ ಸುನಿಯವರ 'ಸಿಂಪಲ್ಲಾಗ್ ಇನ್ನೊಂದು ಲವ್ ಸ್ಟೋರಿ' ಸವಾರಿ


ಲವ್ ಸ್ಟೋರಿಗೆ ಸೆನ್ಸಾರ್ ಆಯ್ತು

'ಸಿಂಪಲ್ಲಾಗ್ ಇನ್ನೊಂದು ಲವ್ ಸ್ಟೋರಿ' ಚಿತ್ರ ಸೆನ್ಸಾರ್ ಮಂಡಳಿಯಿಂದ ಕ್ಲೀನ್ ಚಿಟ್ ಪಡೆದುಕೊಂಡಿದೆ. ಮಾರ್ಚ್ 11 ಕ್ಕೆ ರಿಲೀಸ್ ಪಕ್ಕಾ.


ರೋಮ್ಯಾಂಟಿಕ್ ಹಾಡು

'ಎಲ್ಲೂ ಮಾರದ ಹೃದಯ' ಎಂಬ ರೋಮ್ಯಾಂಟಿಕ್ ಹಾಡಿನ ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ..


Thusu Preethiya ,,,Making video

Presenting you the Thusu Preethiya,,,, Making video,,,


Posted by Simpallag Innondh Love Story on Monday, February 22, 2016

ಸಾಂಗ್ ಮೇಕಿಂಗ್

'ಚಾರ್ ಮಿನಾರ್' ಖ್ಯಾತಿಯ ನಟಿ ಮೇಘನಾ ಗಾಂವ್ಕರ್ ಮತ್ತು 'ರಾಧಾ ಕಲ್ಯಾಣ' ಧಾರಾವಾಹಿ ಖ್ಯಾತಿಯ ನಟ ಪ್ರವೀಣ್ ತೇಜ್ ಅವರು ಮುಖ್ಯ ಭೂಮಿಕೆಯಲ್ಲಿ ಮಿಂಚಿರುವ 'ಸಿಂಪಲ್ಲಾಗ್ ಇನ್ನೊಂದು ಲವ್ ಸ್ಟೋರಿ' ಚಿತ್ರದ 'ತುಸು ಪ್ರೀತಿಸು..'ಹಾಡಿನ ಮೇಕಿಂಗ್ ವಿಡಿಯೋ ಇಲ್ಲಿದೆ ನೋಡಿ..


English summary
Kannada Movie 'Simplag Innond Love Story' gets U/A Certificate from the Censor Board. Kannada Actor Praveen, Kannada Actress Meghana Gaonkar in the lead role. The movie is directed by Simple Suni.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada