ಗಣೇಶ ಹಬ್ಬ ಬಂತಂದ್ರೆ ನಮಗೆ ಈ ಹಾಡುಗಳು ನೆನಪಾಗುತ್ತೆ, ನಿಮಗೆ.?
ದೇಶದೆಲ್ಲೆಡೆ ಗೌರಿ ಗಣೇಶ ಹಬ್ಬವನ್ನ ಅದ್ಧೂರಿಯಾಗಿ, ಸಂಪ್ರದಾಯವಾಗಿ, ವಿಜೃಂಭಣೆಯಾಗಿ ಆಚರಿಸಲಾಗುತ್ತೆ. ವಿನಾಯಕ ಉತ್ಸವವನ್ನ ಚಿತ್ರರಂಗ ಕೂಡ ಅಷ್ಟೇ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಿದೆ.
ಗಣೇಶ ಹಬ್ಬ ಬಂತಂದ್ರೆ ಕೆಲವು ಸಿನಿಮಾ ಹಾಡುಗಳು ನೆನಪಾಗುತ್ತೆ. ಎಷ್ಟೇ ಹೊಸ ಹೊಸ ಹಾಡುಗಳು ಬಂದ್ರು ಈ ಹಾಡುಗಳನ್ನ ಮಾತ್ರ ಮರೆಯುವಂತಿಲ್ಲ.
ಬೀದಿ ಬೀದಿಯಲ್ಲಿ, ಗಲ್ಲಿ ಗಲ್ಲಿಯಲ್ಲೂ ಈ ಹಾಡುಗಳನ್ನ ಕೇಳುತ್ತಿರುತ್ತಾರೆ. ಸಾಮಾನ್ಯ ದಿನಗಳಲ್ಲಿ ಈ ಹಾಡುಗಳನ್ನ ಈಗ ಯಾರೂ ನೆನಪಿಸಿಕೊಳ್ಳುವುದಿಲ್ಲ. ಬಟ್, ಗಣೇಶ ಹಬ್ಬಕ್ಕೆ ಮಾತ್ರ ಈ ಹಾಡುಗಳು ಟ್ರೆಂಡಿಂಗ್ ಆಗಿಬಿಡುತ್ತೆ. ಹಾಗಿದ್ರೆ, ಗಣೇಶ ಚತುರ್ಥಿಯ ದಿನದಂದು ನಮಗೆ ನೆನಪಾಗುವ ಹಾಡುಗಳನ್ನ ಇಲ್ಲಿ ಪಟ್ಟಿ ಮಾಡಿದ್ದೇವೆ. ನಿಮಗೆ ಯಾವುದಾದರೂ ಹಾಡು ನೆನಪಾದರೇ ಕಾಮೆಂಟ್ ಮಾಡಿ ತಿಳಿಸಿ.....ಮುಂದೆ ಓದಿ.....

ಜೈ ಗಣೇಶ.....
ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕುಟುಂಬ ಸಿನಿಮಾದಲ್ಲಿ ಗಣೇಶನ ಬಗ್ಗೆ ಹಾಡೊಂದಿದೆ. ಗಣೇಶ ಹಬ್ಬಕ್ಕೆ ಥಟ್ ಅಂತ ನೆನಪಾಗೋದೇ ಈ ಹಾಡು. ''ಕಾಡಿನಲ್ಲಿ ಮೀಸೆಯಿಟ್ಟೆ, ಮೀಸೆಯಲ್ಲಿ ದ್ವೇಷವಿಟ್ಟೆ...ನಾಡಿನಲ್ಲಿ ರೋಷವಿಟ್ಟೆ ಕಿಲಾಡಿ...ಜೈ ಗಣೇಶ.....'' ಎಂಬ ಹಾಡು ಪದೇ ಪದೇ ಕೇಳಬೇಕು ಎನಿಸುತ್ತೆ.

ಗಣ ಗಣ ಗಣೇಶ....
ರಮ್ಯಾಕೃಷ್ಣ, ಅನುಪ್ರಭಾಕರ್ ಅಭಿನಯದ 'ಶ್ರೀಕಾಳಿಕಾಂಬ' ಚಿತ್ರದಲ್ಲೂ ಕೂಡ ಗಣೇಶನ ಬಗ್ಗೆ ವಿಶೇಷವಾದ ಹಾಡಿದೆ. ''ಗಣೆ ಗಣೆ ಗಣೆ ಗಣೇಶ.....ಹೊಟ್ಟೆ, ಗಣೇಶ....ಹೀರೋ, ಗಣೇಶ....ಲವೆಲ್, ಗಣೇಶ...ನಮ್ಮ ಅಣ್ಣಾವ್ರಂತೆ ನಡೆಯುವ ಗಣೇಶ....ನಿಮಗೆ ಡಾಕ್ಟರೇಟ್ ಕೊಡಿಸಬೇಕು ಗಣೇಶ....'' ಎಂದು ಮೂಷಿಕವಾಹನನ ಬಗ್ಗೆ ಹಾಡು ಕೇಳಿರಬಹುದು. ಈ ಹಾಡು ನೆನಪಾಗುತ್ತೆ.

ನೀ ನಮ್ಮ ಗೆಲುವಾಗಿ ಬಾ...
'ಶಬರಿಮಲೈ ಸ್ವಾಮಿ ಅಯ್ಯಪ್ಪ' ಚಿತ್ರದಲ್ಲಿ ಗಣೇಶನ ಬಗ್ಗೆ ಒಂದು ಭಕ್ತಿಗೀತೆ ಇದೆ. ಗಣೇಶನ ಬಗ್ಗೆ ಹಾಡುಗಳು ಅಂದ್ರೆ ಈ ಹಾಡು ಕೂಡ ಥಟ್ ಅಂತ ನೆನಪಾಗುತ್ತೆ. ''ನೀ ನಮ್ಮ ಗೆಲುವಾಗಿ ಬಾ...ಗಜಮುಖನೇ....ನೀ ನಮ್ಮ ಗೆಲುವಾಗಿ ಬಾ'' ಎಂಬ ಹಾಡು ಕೇಳಲು ಬಹಳ ಇಂಪಾಗಿದೆ.

ಗಣಪತಿ ಬಪ್ಪಾ ಮೋರಿಯಾ
ಡಾ ವಿಷ್ಣುವರ್ಧನ್, ರಮೇಶ್ ಅರವಿಂದ್, ಪ್ರೇಮಾ ಅಭಿನಯದ 'ಏಕದಂತ' ಸಿನಿಮಾದಲ್ಲಿ ಗಣೇಶ ಮಹಿಮೆಯನ್ನ ಹೇಳುವ ಹಾಡಿದೆ. 'ನಗುವ ನಮ್ಮೇಜಮಾನ, ನಗಿಸೋ ನಮ್ಮ ಜನನಾ....ಕಾಪಾಡೋ ಕಾಪಾಡೋ...ಗಣಪತಿ ಬಪ್ಪಾ ಮೋರಿಯಾ, ಹರಿಸೋ ನಮ್ಮ ಏರಿಯಾನ...''ಎಂದು ಹಾಡು ಕೇಳಿರಬಹುದು.


Click it and Unblock the Notifications











