ರೆಬಲ್ ಸ್ಟಾರ್ ರಾಣಿ ಸುಮಲತಾಗೆ ಬಂದ ವಿಶೇಷ ಶುಭಾಶಯಗಳು

By Naveen

ಕನ್ನಡದ ಹೆಸರಾಂತ ನಟಿ, ರೆಬಲ್ ಸ್ಟಾರ್ ರಾಣಿ ಸುಮಲತಾ ಹುಟ್ಟುಹಬ್ಬಕ್ಕೆ ಅವರ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ. ಜೊತೆ ಜೊತೆಗೆ ಚಿತ್ರರಂಗದ ಅನೇಕರು ಸಾಮಾಜಿಕ ಜಾಲತಾಣಗಳ ಮೂಲಕ ವಿಶ್ ಮಾಡುತ್ತಿದ್ದಾರೆ.

ನಟ ಸುದೀಪ್, ದರ್ಶನ್, ವಸಿಷ್ಟ ನಟಿಯರಾದ ಹರಿಪ್ರಿಯಾ, ಪ್ರಿಯಾಂಕ ಉಪೇಂದ್ರ, ಮಾನ್ವಿತಾ ಹರೀಶ್, ಸುದೀಪ್ ಪತ್ನಿ ಪ್ರಿಯಾ ಸುದೀಪ್ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸೇರಿದಂತೆ ಅನೇಕರು ಸುಮಲತಾ ಅವರ ಹುಟ್ಟುಹಬ್ಬವನ್ನು ವಿಶೇಷ ದಿನ ಆಗುವಂತೆ ಮಾಡಿದ್ದಾರೆ.

ಅಂದಹಾಗೆ, ಸುಮಲತಾ ಅವರಿಗೆ ಕನ್ನಡ ಚಿತ್ರರಂಗದಿಂದ ಬಂದ ಅಕ್ಕರೆಯ ಶುಭಾಶಯಗಳು ಮುಂದಿದೆ ಓದಿ...

ಮದರ್ ಇಂಡಿಯಾ ಎಂದ ದರ್ಶನ್

''ನನ್ನ ನೆಚ್ಚಿನ ಮದರ್ ಇಂಡಿಯಾಗೆ ಹುಟ್ಟುಹಬ್ಬದ ಶುಭಾಶಯಗಳು. ಇನ್ನೊಂದು ವರ್ಷವನ್ನ ಆಚರಿಸಿಕೊಳ್ಳುತ್ತಿದ್ದೀರಾ. ನೀವು ನನ್ನ ಪಾಲಿಗೆ ಸದಾ ಅದ್ಭುತವೆನಿಸುವ ವ್ಯಕ್ತಿ ಎನ್ನುವುದು ನಿಮಗೆ ಗೊತ್ತಿದೆ. ನಿಮ್ಮ ಎಲ್ಲ ಆಸೆಗಳು ಈಡೇರಲಿ'' - ದರ್ಶನ್, ನಟ

ನನ್ನ ಜೀವನದ ಭಾಗ ಆಗಿರುವುದಕ್ಕೆ ಧನ್ಯವಾದ ಅಕ್ಕ - ಸುದೀಪ್

''ಅದ್ಬುತ ವ್ಯಕ್ತಿ ಸುಮಲತಾ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ನಗು ನಮಗೆ ಎಂದಿಗೂ ಸ್ಫೂರ್ತಿ ನೀಡುತ್ತದೆ. ಅದರಿಂದ ನಾವು ನಮ್ಮ ಜೀವನದ ಒತ್ತಡವನ್ನು ಹೇಗೆ ನಿವಾರಿಸುವುದು ಎಂಬುದನ್ನು ಕಲಿತಿದ್ದೇವೆ. ನನ್ನ ಜೀವನದ ಭಾಗ ಆಗಿರುವುದಕ್ಕೆ ಧನ್ಯವಾದ ಅಕ್ಕ. ಈ ವರ್ಷ ನಿಮಗೆ ಹರ್ಷದಾಯಕವಾಗಿರಲಿ.'' ಎಂದು ಸುದೀಪ್ ಶುಭಾಶಯ ತಿಳಿಸಿದ್ದಾರೆ.'' - ಸುದೀಪ್, ನಟ

ನೀವು ನನಗೆ ಸ್ಫೂರ್ತಿ - ಪ್ರಿಯಾಂಕ ಉಪೇಂದ್ರ

''ಸುಂದರ ಹಾಗೂ ಸೋಗಸಾಗಿರುವ ಸುಮಲತಾ ಅಮ್ಮನಿಗೆ ಹುಟ್ಟುಹಬ್ಬದ ಶುಭಾಶಯಗಳು. ನನ್ನ ಜೀವನದಲ್ಲಿ ಸ್ಫೂರ್ತಿಯಾದ ಮಹಾನ್ ವ್ಯಕ್ತಿಗಳಲ್ಲಿ ನೀವು ಒಬ್ಬರು. ಲವ್ ಯೂ, ಈ ವರ್ಷ ನಿಮಗೆ ಹರ್ಷದಾಯಕವಾಗಿರಲಿ.'' - ಪ್ರಿಯಾಂಕ ಉಪೇಂದ್ರ, ನಟಿ

ಯಾವಾಗಲೂ ಖುಷಿಯಾಗಿರಿ - ಹರಿಪ್ರಿಯಾ

ಸುಮಲತಾ ಮೇಡಂ ನಿಮಗೆ ಹುಟ್ಟುಹಬ್ಬದ ಶುಭಾಶಯಗಳು. ದೇವರು ನಿಮಗೆ ಒಳ್ಳೆಯದು ಮಾಡಲಿ. ನೀವು ಯಾವಾಗಲು ಖುಷಿಯಾಗಿರಿ. - ಹರಿಪ್ರಿಯಾ, ನಟಿ

ಶೂಟಿಂಗ್ ಸೆಟ್ ನಲ್ಲಿ ಮಿಸ್ ಮಾಡಿಕೊಳ್ಳುತ್ತಿದ್ದೇವೆ - ವಸಿಷ್ಟ

ಹುಟ್ಟುಹಬ್ಬದ ಶುಭಾಶಯಗಳು. ಎಂದಿನಂತೆ ನೀವು awesome ಆಗಿ ಇರಿ. ನಿಮ್ಮ ಜೊತೆಗೆ ಮತ್ತೆ ಸಿನಿಮಾ ಮಾಡಲು ಕಾಯುತ್ತಿದ್ದೇನೆ. ಶೂಟಿಂಗ್ ಸೆಟ್ ನಲ್ಲಿ ನಿಮ್ಮನ್ನು ತುಂಬ ಮಿಸ್ ಮಾಡಿಕೊಳ್ಳುತ್ತಿದ್ದೇವೆ. - ವಸಿಷ್ಟ ಎನ್ ಸಿಂಹ, ನಟ

ಐ ಲವ್ ಯೂ - ಮಾನ್ವಿತಾ ಹರೀಶ್

''ಸುಂದರ ಹಾಗೂ ಸ್ಫೂರ್ತಿದಾಯಕ ಮಹಿಳೆ ಸುಮಲತಾ ಮೇಡಮ್ ಗೆ ಹುಟ್ಟುಹಬ್ಬದ ಶುಭಾಶಯಗಳು. ಐ ಲವ್ ಯೂ'' - ಮಾನ್ವಿತಾ ಹರೀಶ್, ನಟಿ

ಪ್ರಿಯಾ ಸುದೀಪ್ ಮತ್ತು ವಿಜಯಲಕ್ಷ್ಮಿ ದರ್ಶನ್ ವಿಶ್

ಪ್ರಿಯಾ ಸುದೀಪ್ ಮತ್ತು ವಿಜಯಲಕ್ಷ್ಮಿ ದರ್ಶನ್ ವಿಶ್

ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ಸುದೀಪ್ ಪತ್ನಿ ಪ್ರಿಯಾ ತಮ್ಮ ಟ್ವಿಟ್ಟರ್ ಖಾತೆಗಳ ಮೂಲಕ ಸುಮಲತಾ ಅವರಿಗೆ ಶುಭ ಹಾರೈಸಿದ್ದಾರೆ. ''ನೀವು ಒಬ್ಬ ಪ್ರತಿಭಾವಂತ ನಟಿ ಮಾತ್ರವಲ್ಲದೆ ಒಬ್ಬ ಒಳ್ಳೆಯ ವ್ಯಕ್ತಿ'' ಎಂದು ವಿಜಯಲಕ್ಷ್ಮಿ ಹೇಳಿದ್ದಾರೆ

More from Filmibeat

English summary
Kannada movie stars wishes for Actress Sumalatha Ambarish birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X