»   » ಸದ್ಯದಲ್ಲೇ ಕನ್ನಡ ಚಿತ್ರ 'story ಕಥೆ' ಬರುತ್ತಿದೆ; ದಾರಿ ಬಿಡಿ

ಸದ್ಯದಲ್ಲೇ ಕನ್ನಡ ಚಿತ್ರ 'story ಕಥೆ' ಬರುತ್ತಿದೆ; ದಾರಿ ಬಿಡಿ

Posted By:
Subscribe to Filmibeat Kannada
<ul id="pagination-digg"><li class="next"><a href="/news/story-kathe-movie-thilak-shekar-pratap-narayan-jadagish-069574.html">Next »</a></li></ul>
Thilak Pratap
ಕನ್ನಡ ಸಿನಿಮಾ ಪ್ರೇಕ್ಷಕರು ಹಾಗೂ ವಿಮರ್ಶಕರ ವಲಯದಲ್ಲಿ ಇತ್ತೀಚಿನ ದಿನಗಳಲ್ಲಿ ತೀರಾ ಸಾಮಾನ್ಯವಾದ ಆರೋಪವೊಂದಿದೆ. 'ಕನ್ನಡ ಸಿನಿಮಾಗಳಲ್ಲಿ ಕಥೆಗಳೇ ಇರುವುದಿಲ್ಲ. ಒಮ್ಮೆ ಇದ್ದರೂ ಅದು ಚೆನ್ನಾಗಿರುವುದಿಲ್ಲ. ಚಿಕ್ಕ ಎಳೆಯೊಂದನ್ನು ಎಳೆದು ಸಿನಿಮಾ ಮಾಡುತ್ತಾರೆ' ಎಂಬುದು ಆರೋಪ! ಕೇಳಿಬರುತ್ತಿರುವ ಈ ಆರೋಪಕ್ಕೆ ಪರಿಹಾರ ಯಾವಾಗ ಹಾಗೂ ಯಾರಿಂದ ಎಂಬ ಪ್ರಶ್ನೆಗೆ ಉತ್ತರವಿರಲಿಲ್ಲ.

'ಕನ್ನಡ ಸಿನಿಮಾಗಳಲ್ಲಿ ಸ್ಟೋರಿ (ಕಥೆ) ಇರಬೇಕು. ಆಗ ಅದನ್ನು ಕನ್ನಡ ಪ್ರೇಕ್ಷಕರು ಖಂಡಿತ ಸ್ವೀಕರಿಸುತ್ತಾರೆ' ಎಂಬುದು ಎಲ್ಲ ಕಡೆಯಿಂದ ಕೇಳಿಬರುತ್ತಿರುವ ಮಾತು. ಆದರೆ ಅದು ಕಾರ್ಯರೂಪಕ್ಕೆ ಬರುವುದು ಯಾವಾಗ ಎಂಬುದೇ ಎಲ್ಲಕ್ಕಿಂತ ದೊಡ್ಡ ಪ್ರಶ್ನೆಯಾಗಿ ಕಾಡುತ್ತಿತ್ತು. ಈ ಸಮಯದಲ್ಲಿ ಅಚ್ಚರಿ ಎಂಬಂತೆ ಸ್ಯಾಂಡಲ್ ವುಡ್ ಅಂಗಳದಲ್ಲಿ 'story ಕಥೆ' ಬರುತ್ತಿದೆ. 'story' ಮೇಲೆ ಕಥೆಯೇ..?!

ಇದೇನು 'story ಕಥೆ'? ವಿಚಿತ್ರವಾಗಿದೆಯಲ್ಲ ಹೆಸರು ಎಂದು ಕೇಳಬೇಡಿ. ಹೌದು, ಹೀಗೊಂದು ವಿಶಿಷ್ಠ ಹಾಗೂ ಆಕರ್ಷಕ ಹೆಸರಿನ ಸಿನಿಮಾವೊಂದು ಸದ್ಯದಲ್ಲೇ ತೆರೆಗೆ ಬರಲಿದೆ. ಇನ್ನು ಕನ್ನಡ ಸಿನಿಮಾಗಳಲ್ಲಿ 'ಕಥೆ'ಗಳಿರುವುದಿಲ್ಲ ಎನ್ನಬೇಡಿ! ಕನ್ನಡ ಚಿತ್ರಗಳಲ್ಲಿ 'ಕಥೆ'ಗಳಿರುವುದಿಲ್ಲ ಎಂಬ ಪ್ರಶ್ನೆಗೆ ಉತ್ತರದ ರೂಪದಲ್ಲಿ ಎನ್ನಲು ಸಾಕ್ಷಿಯಿಲ್ಲದಿದ್ದರೂ ಈ ಚಿತ್ರದ ಹೆಸರಿನಲ್ಲೇ 'ಕಥೆ'ಯಂತೂ ಇದೆ. ಸಿನಿಮಾದಲ್ಲಿ 'ಕಥೆ' ಇದೆಯೋ ಇಲ್ಲವೋ ಎಂಬುದು ನೋಡಿ ತಿಳಿಯಿರಿ.

ಇತ್ತೀಚಿಗಷ್ಟೇ ಸೆನ್ಸಾರ್ ಟೇಬಲ್ಲಿನ ಮೇಲೆ ಮಲಗಿ ಅಲ್ಲಿಂದ 'ಓಕೆ, ಚೆನ್ನಾಗಿದೆ' ಅನ್ನಿಸಿಕೊಂಡು 'ಯು/ಎ' ಪ್ರಮಾಣಪತ್ರ ಹೊತ್ತು ಹೊರಬಂದಿರುವ ಈ 'story ಕಥೆ' ಎಂಬುದು ಜಗದೀಶ್ ಕೆಆರ್ ಎಂಬ ಹೊಸ ನಿರ್ದೇಶಕರ ಚಿತ್ರ. ಸಾಕಷ್ಟು ಚಿತ್ರಗಳಲ್ಲಿ ಸಹ-ನಿರ್ದೇಶನ ಮಾಡಿ ಅನುಭವವಿರುವ ಜಗದೀಶ್, ಇದೇ ಮೊದಲ ಬಾರಿಗೆ 'story ಕಥೆ' ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಸ್ಯಾಂಡಲ್ ವುಡ್ ಗೆ ಕಾಲಿಟ್ಟಿದ್ದಾರೆ. ಸಿನಿಮಾ ಮುಗಿಸಿ ಸದ್ಯದಲ್ಲೇ ಬಿಡುಗಡೆಗೂ ಸಜ್ಜಾಗಿದ್ದಾರೆ. ಮುಂದಿನ ಪುಟ ನೋಡಿ...

<ul id="pagination-digg"><li class="next"><a href="/news/story-kathe-movie-thilak-shekar-pratap-narayan-jadagish-069574.html">Next »</a></li></ul>
English summary
Upcoming Director Jagadish KR Directed Kannada Movie Story Kathe to release in next month on November 2012. Thilak shekar and Pratap Narayan are in the Lead Role and Neha Patil and Parvathi Nayar are the Heroines for this movie. Vasu Dixith and Satish Babu are the Music Directors. &#13; &#13;
Please Wait while comments are loading...