»   » 'ರಥಾವರ' ನಿರ್ದೇಶಕನ 'ತಾರಕಾಸುರ' ಟೀಸರ್ ನೋಡಿ

'ರಥಾವರ' ನಿರ್ದೇಶಕನ 'ತಾರಕಾಸುರ' ಟೀಸರ್ ನೋಡಿ

Posted By:
Subscribe to Filmibeat Kannada

ಇತ್ತೀಚೆಗಷ್ಟೇ ಮದುವೆಯಾಗಿದ್ದ ನಿರ್ದೇಶಕ ಚಂದ್ರಶೇಖರ ಬಂಡಿಯಪ್ಪ ತಮ್ಮ ಹೊಸ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ. ಮೇ 4ರಂದು ಮಂಡ್ಯದಲ್ಲಿ ಪೂಜಾ ಎಂಬುವರ ಜತೆ ಚಂದ್ರಶೇಖರ ಬಂಡಿಯಪ್ಪ ಸಪ್ತಪದಿ ತುಳಿದಿದ್ದರು. ಅಷ್ಟರಲ್ಲಾಗಲೇ 'ತಾರಕಾಸುರ' ಚಿತ್ರದ ಟೀಸರ್ ರಿಲೀಸ್ ಮಾಡಿದ್ದು, ಕುತೂಹಲ ಹೆಚ್ಚಿಸಿದ್ದಾರೆ.

'ರಥಾವರ' ಅಂತಹ ಮಾಸ್ ಹಿಟ್ ಸಿನಿಮಾ ನೀಡಿದ್ದ ಚಂದ್ರಶೇಖರ್ ಬಂಡಿಯಪ್ಪಾ ಈಗ ಅಂತಹದ್ದೇ ಟೈಟಲ್ ಇಟ್ಟು ಮತ್ತೊಂದು ಮಾಸ್ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ನವನಟ ವೈಭವ್ 'ತಾರಕಾಸುರ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ನಾಯಕನಾಗಿ ಪರಿಚಯವಾಗುತ್ತಿದ್ದಾರೆ. ಕರ್ನಾಟಕ ಚಲನಚಿತ್ರ ಮಂಡಳಿಯ ಕಾರ್ಯದರ್ಶಿ ನರಸಿಂಹಲು ಅವರ ಪುತ್ರ ಈ ವೈಭವ್. ಇನ್ನು ಈ ಚಿತ್ರವನ್ನ ನರಸಿಂಹಲು ಅವರೇ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ.

ಸದ್ಯ, ಚಿತ್ರದ ಟೀಸರ್ ಬಿಡುಗಡೆ ಮಾಡಿ ಕುತೂಹಲ ಹುಟ್ಟುಹಾಕಿರುವ 'ತಾರಕಾಸುರ' ನಾಯಕಿಯ ಹುಡುಕಾಟದಲ್ಲಿದೆ. ಮೂಲಗಳ ಪ್ರಕಾರ ಕನ್ನಡದ ಸ್ಟಾರ್ ನಟಿಯೊಬ್ಬರು ಈ ಚಿತ್ರದಲ್ಲಿ ಅಭಿನಯಿಸಲಿದ್ದಾರಂತೆ.

English summary
Kannada Movie Taarakaasura Teaser Release. the Movie Direceted by Chandrashekar bandiyappa Fame of Ugram.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada