»   » 19ನೇ ಶಾಂಘೈ ಚಿತ್ರೋತ್ಸವಕ್ಕೆ ಆಯ್ಕೆಯಾದ ಸೆಂಚುರಿ ಗೌಡ್ರ 'ತಿಥಿ'

19ನೇ ಶಾಂಘೈ ಚಿತ್ರೋತ್ಸವಕ್ಕೆ ಆಯ್ಕೆಯಾದ ಸೆಂಚುರಿ ಗೌಡ್ರ 'ತಿಥಿ'

Posted By:
Subscribe to Filmibeat Kannada

ರಾಜ್ಯ-ರಾಷ್ಟ್ರ ಸೇರಿದಂತೆ ಲೊಕಾರ್ನೋ ಚಿತ್ರೋತ್ಸವಗಳಲ್ಲೂ ಹಲವಾರು ಪ್ರಶಸ್ತಿ ಬಾಚಿಕೊಂಡ ರಾಮ್ ರೆಡ್ಡಿ ನಿರ್ದೇಶನದ 'ತಿಥಿ' ಸಿನಿಮಾ ಇದೀಗ ಮತ್ತೆ 19ನೇ ಅಂತಾರಾಷ್ಟ್ರೀಯ ಶಾಂಘೈ ಚಲನಚಿತ್ರೋತ್ಸವದಲ್ಲಿ ಸ್ಪರ್ಧೆಗಿಳಿದಿದೆ.

19ನೇ ಶಾಂಘೈ ಚಲನಚಿತ್ರೋತ್ಸವದಲ್ಲಿ ಬರೋಬ್ಬರಿ ಮೂರು ವಿಭಾಗಗಳಲ್ಲಿ ಪ್ರಶಸ್ತಿ ಗೆಲ್ಲುವ ಅವಕಾಶ ಗಿಟ್ಟಿಸಿಕೊಳ್ಳಲು ತಯಾರಾಗಿದೆ. 1. ಅತ್ಯುತ್ತಮ ಚಿತ್ರ, 2.ಅತ್ಯುತ್ತಮ ನಿರ್ದೇಶಕ, 3. ಅತ್ಯುತ್ತಮ ಚಿತ್ರಕಥೆ. ಈ ಮೂರು ವಿಭಾಗಗಳಲ್ಲಿ 'ತಿಥಿ' ಸಿನಿಮಾ ಸ್ಪರ್ಧೆಗಿಳಿದಿದೆ.[ವಿಶ್ವದಾದ್ಯಂತ ಹವಾ ಎಬ್ಬಿಸಿರುವ 'ತಿಥಿ'ಯ ಚಿತ್ರವಿಮರ್ಶೆ]


Kannada Movie 'Thithi' for Shanghai International Film Festival

ಈ ಅದ್ದೂರಿ ಚಲನಚಿತ್ರೋತ್ಸವದ ಕಾರ್ಯಕ್ರಮ ಚೀನಾದಲ್ಲಿ ಜೂನ್ 11 ರಿಂದ 19 ರವರೆಗೆ ನಡೆಯಲಿದೆ. ಈಗಾಗಲೇ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಿನಿಮೋತ್ಸವ ಅಂತ ಸುಮಾರು 12 ಚಲನಚಿತ್ರೊತ್ಸವಗಳಲ್ಲಿ ಸ್ಪರ್ಧಿಸಿರುವ ಈ ಸಿನಿಮಾ ಬರೋಬ್ಬರಿ 13 ಪ್ರಶಸ್ತಿ ಗಳಿಸಿದೆ.['ಫಿಲ್ಮಿಬೀಟ್ ಕನ್ನಡ ವಿಶೇಷ'; 'ಅತ್ಯುತ್ತಮ ಪೋಷಕ ನಟಿ' ಪೂಜಾ ಸಂದರ್ಶನ]


Kannada Movie 'Thithi' for Shanghai International Film Festival

ಇಡೀ ಭಾರತದಿಂದ 'ತಿಥಿ' ಒಂದೇ ಸಿನಿಮಾ 19ನೇ ಶಾಂಘೈ ಸಿನಿಮೋತ್ಸವಕ್ಕೆ ಆಯ್ಕೆಯಾಗಿರುವುದು ಎಂಬ ವಿಚಾರ ಇಡೀ ಭಾರತಕ್ಕೆ ಹೆಮ್ಮೆಯಾಗಿದೆ. ಇನ್ನುಳಿದಂತೆ 'ಒನ್ ನೈಟ್ ಓನ್ಲಿ', 'ಲ್ಯಾಂಡ್ ಆಫ್ ದ ಲಿಟಲ್ ಪೀಪಲ್' ಮತ್ತು 'ಡಿಟೆಕ್ಟಿವ್ ಚೈನಾ ಟೌನ್' ಎಂಬ ಮೂರು ಹಾಲಿವುಡ್ ಸಿನಿಮಾಗಳು ಈ ಚಲನಚಿತ್ರೋತ್ಸವದಲ್ಲಿ ಕಣಕ್ಕಿಳಿದಿವೆ.


ಶಾಂಘೈ ಚಲನಚಿತ್ರೋತ್ಸವದಲ್ಲಿ ಕನ್ನಡ ಚಿತ್ರ 'ತಿಥಿ'ಯ ಸ್ಕ್ರೀನಿಂಗ್ ಜೂನ್ 15, 18 ಮತ್ತು 19 ರಂದು ನಡೆಯಲಿದೆ. ಈರೇ ಗೌಡ ಅವರು ಬರೆದಿರುವ ಕಥೆಗೆ ನಿರ್ದೇಶಕ ರಾಮ್ ರೆಡ್ಡಿ ಅವರು ಆಕ್ಷನ್-ಕಟ್ ಹೇಳಿದ್ದಾರೆ.

English summary
Kannada Director Raam Reddy's Kannada Movie 'Thithi' stands a chance to win in three categories Best Film, Best Director and Best Screenplay at the Asia New Talent Awards of the 19th Shanghai International Film Festival to be held in China from June 11 to 19.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada